Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಭವಿಷ್ಯದಲ್ಲಿ ಮಂಗಳೂರು ಸಂಪೂರ್ಣ ಮುಳುಗಡೆ: ನಾಸಾ ವಿಜ್ಞಾನಿಗಳ ಎಚ್ಚರಿಕೆ

Friday, 17.11.2017, 8:28 AM       No Comments

ಮಂಗಳೂರು: ನಾಸಾ ವಿಜ್ಞಾನಿಗಳು ಬಿಡುಗಡೆ ಮಾಡಿರುವ ವರದಿಯಿಂದ ಅಕ್ಷರಶಃ ಮಂಗಳೂರಿಗರು ಬೆಚ್ಚಿಬೀಳುವಂತಾಗಿದೆ. ಮಂಗಳೂರಿಗೆ ಕಡಲೇ ಮುಕುಟ ಎನ್ನುತ್ತಿದ್ದರು. ಆದ್ರೀಗ ಆ ಸಮುದ್ರದಿಂದಲೇ ಮಂಗಳೂರು ಸರ್ವನಾಶ ಅಂತಿದ್ದಾರೆ ನಾಸಾ ವಿಜ್ಞಾನಿಗಳು.

ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕರಾವಳಿಗೆ ಕಂಟಕ ಆಗಲಿದೆ ಎಂದು ನಾಸಾ ನಾಸಾ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಮಂಗಳೂರು ಸಂಪೂರ್ಣ ಮುಳುಗಡೆ ಆಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಡಿಸೆಂಬರ್​​​ನಲ್ಲಿ ಸುನಾಮಿ ಅಪ್ಪಳಿಸಲಿದೆ ಎಂದು ಕೇರಳ ವಿಜ್ಞಾನಿ ಬಾಬು ಕಲಾಯಿಲ್ ಎಚ್ಚರಿಕೆ ನೀಡಿದ್ದಾರೆ.

ಸುನಾಮಿಯ ಈ ಯಮಸ್ವರೂಪಿ ಅಲೆಗಳನ್ನ ನೋಡಿದ್ರೆ ಈಗಲೂ ಭಯ ಹುಟ್ಟಿಸುತ್ತೆ. 2004 ರಲ್ಲಿ ರಕ್ಕಸ ಸುನಾಮಿಗೆ ಭಾರತ, ಶ್ರೀಲಂಕಾ ಸೇರಿದಂತೆ ಅನೇಕ ರಾಷ್ಟ್ರಗಳ ಕರಾವಳಿ ಪ್ರದೇಶದ ಜನ್ರು ತತ್ತರಿಸಿ ಹೋಗಿದ್ರು. ಆದ್ರೀಗ ಕೇರಳ ಮೂಲದ ವಿಜ್ಞಾನಿ ಹಾಗೂ ನಾಸಾ ವಿಜ್ಞಾನಿಗಳ ವಿಶ್ಲೇಷಣೆ ಮತ್ತೊಮ್ಮೆ ಕರಾವಳಿಗರ ಆತಂಕ ಹೆಚ್ಚಿಸಿದೆ.

ಹೌದು, ಹೀಗೊಂದು ಬೆಚ್ಚಿಬೀಳಿಸೋ ಸುದ್ದಿ ಹೊರ ಬಿದ್ದಿದೆ. ಕೇರಳ ಮೂಲದ ವಿಜ್ಞಾನಿ ಬಾಬು ಕಲಾಯಿಲ್, ವರ್ಷಾಂತ್ಯ ಅಂದ್ರೆ ಡಿಸೆಂಬರ್ 31ರ ಒಳಗಾಗಿ, ಭಾರತ ಮತ್ತು ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಭೂಕಂಪನವಾಗಲಿದೆ ಎಂದಿದ್ದಾರೆ. ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಲಿದ್ದು, ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಲಿದ್ಯಂತೆ. ಈ ವಿಚಾರದ ಕುರಿತು ಬಾಬು ಕಲಾಯಿಲ್ ಪ್ರಧಾನಿ ಮೋದಿ ಗೆ ಪತ್ರ ಬರೆದಿದ್ದಾರೆ.

ಇನ್ನೊಂದೆಡೆ, ಜಾಗತಿಕ ತಾಪಮಾನದಿಂದ ನೀರ್ಗಲ್ಲುಗಳು ಕರುಗುತ್ತಿದೆ. ಇದ್ರಿಂದ ಸಮುದ್ರದ ನೀರಿನ ಮಟ್ಟ ದಿನೇ ದಿನೇ ಏರಿಕೆಯಾಗ್ತಿದೆ. ಹೀಗಾಗಿ ನ್ಯೂ ಯಾರ್ಕ್​ ಮತ್ತು ಮುಂಬೈ ನಗರಗಳಿಗೂ ಮುಂಚಿತವಾಗಿ ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಮುಳುಗಡೆಯಾಗಲಿದೆ ಅಂತ ಅಮೆರಿಕದ ನಾಸಾ ಸಂಸ್ಥೆಯ ಇತ್ತೀಚಿನ ವರದಿ ಹೇಳಿದೆ.

ಜಗತ್ತಿನ ಶೇ.75ರಷ್ಟು ನೀರ್ಗಲ್ಲುಗಳು ಅಂಟಾರ್ಕ್ಟಿಕಾ ಮತ್ತು ಗ್ರೀನ್​ಲ್ಯಾಂಡ್​ನಲ್ಲಿ ಶೇಖರಗೊಂಡಿದೆ, ಈ ಎರಡು ಪ್ರದೇಶದಲ್ಲಿ ನಿಧಾನವಾಗಿ ನೀರ್ಗಲ್ಲುಗಳು ಕರಗಲಾರಂಭಿಸಿದ್ರೆ, ನ್ಯೂಯಾರ್ಕ್​ ಮತ್ತು ಮುಂಬೈಗಿಂತ ಮುಂಚೆ ಮಂಗಳೂರಿನ ಅಪಾಯ ಎದುರಾಗಲಿದೆಯಂತೆ.

ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯ ಸಂಶೋಧಕರು ಜಗತ್ತಿನ 293 ಕರಾವಳಿ ಪ್ರದೇಶಗಳ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಮಂಗಳೂರು ಮೋಸ್ಟ್ ಡೇಂಜರಸ್ ಅಂತ ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top