More

    ಸಾಧನೆಯ ಅಮೃತ ಹಾದಿ: 75 ವರ್ಷಗಳ ಪ್ರಗತಿ ಸಾಕಷ್ಟು, ಸಾಧಿಸಬೇಕಾಗಿದೆ ಇನ್ನಷ್ಟು..

    ನಮ್ಮ ರಾಷ್ಟ್ರಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತು ಇಂದಿಗೆ 75 ವರ್ಷಗಳು ಪೂರ್ಣಗೊಂಡಿವೆ. ಜಗತ್ತಿನ ಎರಡನೇ ಅತಿಹೆಚ್ಚು ಜನಸಂಖ್ಯೆ ಇರುವ ವಿಶಾಲ ರಾಷ್ಟ್ರ ನಮ್ಮದು. ಹಲವು ಧರ್ಮ, ಮತ, ಭಾಷೆ, ಪ್ರಾಂತಗಳ ವಿವಿಧತೆಗಳ ನಡುವೆಯೇ ಅಖಂಡತೆ ಸಾಧಿಸಿ ಬಲಾಢ್ಯ ಒಕ್ಕೂಟ ರಾಷ್ಟ್ರವಾಗಿ ಉಳಿದುಕೊಂಡಿರುವುದು ಹಾಗೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಣ್ಣ ಸಂಗತಿಯೇನಲ್ಲ.

    ಒಂದು ವೇಳೆ ಬ್ರಿಟಿಷರು ನಮ್ಮನಾಡಿನಲ್ಲಿ ಆಡಳಿತ ನಡೆಸಿರದಿದ್ದರೆ, ಭಾರತವು ಒಂದು ಅಖಂಡ ರಾಷ್ಟ್ರವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಸಹಜವಾಗಿಯೇ ಉದ್ಭವಿಸಬಹುದು. 1775ರ ಪ್ಲಾಸಿ ಕದನದ ನಂತರ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಮೂಲಕ ಭಾರತ ಉಪಖಂಡದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗಿದರು. 1858ರಲ್ಲಿ ಅಧಿಕೃತವಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಆಡಳಿತ ಅಸ್ತಿತ್ವಕ್ಕೆ ಬಂದಿತು. ಬ್ರಿಟಿಷರು ತಮ್ಮಸಾಮ್ರಾಜ್ಯವನ್ನು ವಿಸ್ತರಿಸುತ್ತ ಸಾಗಿದಂತೆ ಸಹಜವಾಗಿಯೇ ನಾವು ರಾಜಕೀಯವಾಗಿ ಒಂದು ರಾಷ್ಟ್ರವಾಗಿ ರೂಪುಗೊಳ್ಳುತ್ತ ಸಾಗಿದೆವು ಎಂಬ ತರ್ಕವನ್ನು ಅಲ್ಲಗಳೆಯುವುದು ಸುಲಭವಲ್ಲ.

    ಹೀಗಾಗಿಯೇ, ಬ್ರಿಟಿನ್ನಿನ ಪ್ರಧಾನಿಯಾಗಿ ವಿನ್​ಸ್ಟನ್ ರ್ಚಚಿಲ್ ಅವರು, ಬ್ರಿಟಿಷರು ಬರುವ ಮೊದಲು ಭಾರತೀಯ ರಾಷ್ಟ್ರವೇ ಇರಲಿಲ್ಲ ಎಂದು ಹೇಳಿದ್ದರು. ಆದರೆ, ಬ್ರಿಟಿಷ್ ಪೂರ್ವದಲ್ಲಿ ಭಾರತವು ರಾಜಕೀಯವಾಗಿ ಒಂದಾಗಿರದಿದ್ದರೂ ಸಾಂಸ್ಕೃತಿಕವಾಗಿ, ಧಾರ್ವಿುಕವಾಗಿ, ಆಧ್ಯಾತ್ಮಿಕವಾಗಿ ಒಂದುಗೂಡಿತ್ತು ಎಂಬುದನ್ನು ನಮ್ಮ ಪ್ರಾಚೀನ ಇತಿಹಾಸವೇ ಸೂಚಿಸುತ್ತದೆ. ಭಾರತ ಉಪಖಂಡದ ಸಿಂಧು ಕಣಿವೆ ನಾಗರಿಕತೆಯನ್ನು ನಾಲ್ಕು ಪ್ರಮುಖ ನಾಗರಿಕತೆಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಕ್ರಿಸ್ತ ಪೂರ್ವ 4 ಮತ್ತು 3ನೇ ಶತಮಾನದಲ್ಲಿ ಮೌರ್ಯ ವಂಶದ ರಾಜರು ಉಪಖಂಡದ ಬಹುಭಾಗದಲ್ಲಿ ಆಡಳಿತ ನಡೆಸಿದ್ದರು ಎಂಬುದು ಕೂಡ ಗಮನಾರ್ಹ.

    ಬ್ರಿಟಿಷರ ಆಡಳಿತಕ್ಕಿಂತ ಮೊದಲು ಭಾರತ ಉಪಖಂಡವು ಒಂದು ಸಂಪದ್ಭರಿತ ಪ್ರದೇಶವಾಗಿ ಕಂಗೊಳಿಸುತಿತ್ತು ಎಂಬುದನ್ನು ಅನೇಕ ಐತಿಹಾಸಿಕ ಅಂಶಗಳು ಸ್ಪಷ್ಟವಾಗಿ ಸಾರಿ ಹೇಳುತ್ತವೆ. ಕೇಂಬ್ರಿಜ್ ಇತಿಹಾಸಕಾರ ಆಂಗಸ್ ಮ್ಯಾಡಿಸನ್ ಪ್ರಕಾರ, 1700ರ ಸುಮಾರಿಗೆ ಜಗತ್ತಿನ ಒಟ್ಟಾರೆ ಆರ್ಥಿಕತೆಯಲ್ಲಿ ಭಾರತ ಉಪಖಂಡದ ಪಾಲು ಶೇ. 22ರಷ್ಟಿತ್ತು. ಆದರೆ, 1947ರ ಹೊತ್ತಿಗೆ ಇದು ಶೇ. 3.8ಕ್ಕೆ ಕುಸಿದಿತ್ತು. ಸುಮಾರು 200 ವರ್ಷಗಳ ಕಾಲ ನಮ್ಮನ್ನು ದಾಸ್ಯದ ಸಂಕೋಲೆಯಲ್ಲಿ ಬಂಧಿಸಿದ ಬ್ರಿಟಿಷರು, ನಮ್ಮ ಸಂಪತ್ತನ್ನು ಅಪಾರ ಪ್ರಮಾಣದಲ್ಲಿ ಲೂಟಿ ಮಾಡಿಕೊಂಡು ಹೋದರು.

    ಆದರೆ, ಕಳೆದ 75 ವರ್ಷಗಳಲ್ಲಿ ಒಂದು ದೇಶವಾಗಿ ನಾವು ಪುಟಿದೆದ್ದಿದ್ದೇವೆ. ಬ್ರಿಟಿಷರನ್ನೇ ನಾವು ಈಗ ಆರ್ಥಿಕತೆಯಲ್ಲಿ ಹಿಂದೆ ಹಾಕಿ ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದ್ದೇವೆ. 1947ರಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನವು 2.7 ಲಕ್ಷ ಕೋಟಿ ರೂಪಾಯಿ ಹಾಗೂ ತಲಾದಾಯ 230 ರೂಪಾಯಿ ಆಗಿತ್ತು. 2019ರಲ್ಲಿ ನಮ್ಮ ದೇಶದ ಜಿಡಿಪಿಯು 2.94 ಟ್ರಿಲಿಯನ್ ಡಾಲರ್ (235 ಲಕ್ಷ ಕೋಟಿ ರೂಪಾಯಿ) ತಲುಪುವ ಮೂಲಕ ಬ್ರಿಟನ್ ದೇಶದ ಜಿಡಿಪಿಯನ್ನು (2.83 ಟ್ರಿಲಿಯನ್ ಡಾಲರ್) ಹಿಂದಿಕ್ಕಿತು. ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು ಎಂದು ಹೆಮ್ಮೆಪಡುವ ಸಂಗತಿಯೇ ಆಗಿದೆ. ಅಲ್ಲದೆ, ಈಗ ಭಾರತೀಯರ ತಲಾದಾಯವು 1.5 ಲಕ್ಷ ರೂಪಾಯಿಗೆ ತಲುಪಿದೆ. 2025ರ ಹೊತ್ತಿಗೆ ನಮ್ಮ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್​ಗೆ ತಲುಪಿಸುವ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಈ 75 ವರ್ಷಗಳಲ್ಲಿ ಆಹಾರ ಉತ್ಪಾದನೆಯನ್ನು 5.5 ಕೋಟಿ ಟನ್​ನಿಂದ 30.8 ಕೋಟಿ ಟನ್​ಗೆ ಏರಿಸಿದ್ದೇವೆ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯ ರಾಷ್ಟ್ರವಾಗುವತ್ತ ಸಾಗುತ್ತಿದ್ದರೂ 12 ವರ್ಷಗಳ ಹಿಂದೆಯೇ ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ ಹೆಮ್ಮೆ ನಮ್ಮದಾಗಿದೆ. ಪ್ರತಿಯೊಂದು ರಂಗಗಳಲ್ಲಿ ಆತ್ಮನಿರ್ಭರವಾಗುತ್ತ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿರುವುದು ಭಾರತ ಪ್ರಬಲ ರಾಷ್ಟ್ರವಾಗಿ ರೂಪುಗೊಳ್ಳುವಲ್ಲಿ ಮಹತ್ವದ ಕ್ರಮವಾಗಿದೆ.

    ವಿಜ್ಞಾನ-ತಂತ್ರಜ್ಞಾನ, ಅಂತರಿಕ್ಷ, ವೈದ್ಯಕೀಯ, ಆರ್ಥಿಕ… ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಜಗತ್ತೇ ಗುರುತಿಸುವಂತಾಗಿದೆ. ಹಿಂದುಳಿದ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಿ ಪ್ರಗತಿಶೀಲ ದೇಶವಾಗಿ ಹೊರಹೊಮ್ಮಿದ್ದೇವೆ. ಸಾಕಷ್ಟು ಸಾಧಿಸಿದ್ದರೂ ಹಲವು ಸವಾಲು, ಅಡಚಣೆಗಳನ್ನು ಬದಿಗೊತ್ತಿ ಜಗತ್ತಿನ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು, ಪ್ರಜೆಗಳ ಜೀವನಮಟ್ಟ ಇನ್ನಷ್ಟು ಮೇಲೆತ್ತಲು ಅಮೃತ ಮಹೋತ್ಸವದಿಂದ ಶತಮಾನೋತ್ಸವದವರೆಗಿನ ಮುಂದಿನ ಇಪ್ಪತೆôದು ವರ್ಷಗಳ ಹಾದಿಯಲ್ಲಿ ಭಾರತ ಸಾಧಿಸುವುದು ಇನ್ನೂ ಸಾಕಷ್ಟಿದೆ.

    ಹಿಮಪಾತಕ್ಕೆ ಸಿಲುಕಿದ್ದ ಯೋಧನ ಅವಶೇಷ 38 ವರ್ಷಗಳ ಬಳಿಕ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts