Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಪ್ರಾರ್ಥನೆ ಎಂಬ ಸಂಜೀವಿನಿ

Monday, 16.04.2018, 3:02 AM       No Comments

|ವನರಾಗ ಶರ್ಮಾ

ಇದು ಬಹಳ ಹಿಂದಿನ ಘಟನೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಸೂತ್ರ ಹಿಡಿದಿದ್ದ ಅಬ್ರಹಾಂ ಲಿಂಕನ್ನರಿಗೆ ಗಂಡಾಂತರಕಾರಿ ಸವಾಲೊಂದು ಎದುರಾಯಿತು. ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಜನರ ನಡುವಿನ ನಾಗರಿಕ ಸಮರ ತೀವ್ರವಾಗಿದ್ದ ಕಾಲಘಟ್ಟವದು. ಅದನ್ನು ತಹಬಂದಿಗೆ ತರಲೆಂದು ಲಿಂಕನ್ ಸೇನೆಯನ್ನು ನಿಯೋಜಿಸಿದ್ದರು. ಆದರೆ ಎದುರಾಳಿಗಳ ಕೈಮೇಲಾಗುತ್ತಿದೆ ಎಂಬ ಸುದ್ದಿ ಲಿಂಕನ್​ರನ್ನು ತಲುಪಿತು. ಸೇನಾ ಮಹಾದಂಡನಾಯಕ ಸೇರಿದಂತೆ ಎಲ್ಲರೂ ಕಂಗಾಲಾಗಿದ್ದರೂ ಲಿಂಕನ್ ಮಾತ್ರ ಕಂಗೆಡಲಿಲ್ಲ. ಯುದ್ಧರಂಗಕ್ಕೆ ಧಾವಿಸಿದ ಅವರು ಸೈನಿಕರನ್ನುದ್ದೇಶಿಸಿ, ‘ಪ್ರೀತಿಯ ಯೋಧರೇ, ನೀವು ನ್ಯಾಯಕ್ಕೆ ಹೋರಾಡುತ್ತಿರುವಂಥವರು, ಜನರಕ್ಷಣೆ-ನೆಮ್ಮದಿಗೆಂದು ಪ್ರಾಣದ ಹಂಗುತೊರೆದಿರುವವರು. ನೀವು ಸೋಲುವುದಿಲ್ಲ. ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ. ಆತ ಯಾವಾಗಲೂ ಸತ್ಯ ಮತ್ತು ನ್ಯಾಯದ ಪರ, ನಮ್ಮನ್ನು ಗೆಲ್ಲಿಸುವುದು ಖಂಡಿತ’ ಎಂದು ಧೈರ್ಯತುಂಬಿ ಭರವಸೆ ನೀಡಿದರು.

‘ಇದೆಂಥ ಸಂದೇಶ? ಲಿಂಕನ್ ತಪು್ಪ ಮಾಡುತ್ತಿದ್ದಾರೆ. ಪ್ರಾರ್ಥನೆಯಿಂದ ಯಾವ ಪ್ರಯೋಜನವೂ ಇಲ್ಲ; ಅದು ವೀರರ ಅಸ್ತ್ರವಲ್ಲ…’ ಎಂಬುದಾಗಿ ಅಮೆರಿಕದ ವಿಪಕ್ಷ ಮುಖಂಡ ಟೀಕಿಸಿದ. ಆದರೆ ಸೈನಿಕರು ಲಿಂಕನ್ ಸಲಹೆಯನ್ನು ಅಕ್ಷರಶಃ ಪಾಲಿಸಿ ತುಂಬುಮನದಿಂದ ದೇವರನ್ನು ಪ್ರಾರ್ಥಿಸಿದರು, ಯುದ್ಧರಂಗದಲ್ಲಿ ಅಮಿತೋತ್ಸಾಹದಿಂದ ತೊಡಗಿ ಕಲಿತನ ಮೆರೆದ ಪರಿಣಾಮ ಅಮೆರಿಕ ಸೇನೆಗೆ ಜಯವಾಯಿತು. ಶ್ರದ್ಧೆ-ಭಕ್ತಿಯಿಂದ ಕೂಡಿದ ಪ್ರಾರ್ಥನೆಯ ಮಹತ್ವವನ್ನು ಈ ದೃಷ್ಟಾಂತ ತಿಳಿಸುತ್ತದೆ. ಆತ್ಮವಿಶ್ವಾಸ, ಒಂದು ಸಣ್ಣ ಭರವಸೆ ನಮ್ಮ ಶಕ್ತಿಯನ್ನು ಇಮ್ಮಡಿಗೊಳಿಸುತ್ತವೆ ಎಂಬುದಕ್ಕಿದು ಸಾಕ್ಷಿ. ‘ದೇವರನ್ನು ನಿರಂತರವಾಗಿ ಸಮರ್ಪಣಾಭಾವದಿಂದ ಪ್ರಾರ್ಥಿಸಿದವರಿಗೆ ಜಯ ಸಿಕ್ಕುತ್ತದೆ’ ಎಂಬುದಾಗಿ ಪ್ರಪಂಚದ ಎಲ್ಲ ಸಾಧು-ಸಂತರು, ದಾರ್ಶನಿಕರು, ಸಾಧಕರು ಸಾರಿದ್ದು ಈ ಸತ್ಯವನ್ನರಿತೇ. ಔಷಧ-ಮಾತ್ರೆಯಿಂದಲೂ ಗುಣವಾಗದ ಕಾಯಿಲೆಯು ಮನತುಂಬಿದ ಪ್ರಾರ್ಥನೆಯಿಂದ ವಾಸಿಯಾಗಿದ್ದಕ್ಕೆ ನಿದರ್ಶನಗಳಿವೆ. ಶಕ್ತಿ ಎಂಬುದು ನಮ್ಮಲ್ಲಿ ಅಂತರ್ಗತವಾಗಿರುವಂಥದ್ದು; ಅದಕ್ಕೆ ಪ್ರಾರ್ಥನೆ ಬಲತುಂಬುತ್ತದೆ, ಪರಿಹಾರದ ದಾರಿ ತೋರಿಸುತ್ತದೆ. ಹತಾಶೆಯ ಸುಳಿಗೆ ಸಿಕ್ಕಿ ಮುಳುಗದಂತೆ ನಮ್ಮನ್ನು ಕೈಹಿಡಿದು ಮೇಲಕ್ಕೆತ್ತುತ್ತದೆ ಎಂಬುದನ್ನು ಮರೆಯದಿರೋಣ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

Back To Top