Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News

ಅಸಲಿ ಡಿವೈಎಸ್ಪಿಗಳಿಂದಲೇ ಹಣ ಕಿತ್ತ ನಕಲಿ ಡಿವೈಎಸ್ಪಿ!

Wednesday, 17.01.2018, 8:07 PM       No Comments

<< ಆರೋಪಿ ಬಳಿ ಇತ್ತು ಪೊಲೀಸ್ ಇಲಾಖೆ ಮೊಬೈಲ್ ನಂಬರ್‌ ಸೀರೀಸ್; ಕ್ರೀಡಾಕೂಟದಲ್ಲಿ ಬಯಲಾಯ್ತು ಪ್ರಳಯಾಂತಕನ ಮೋಸದಾಟ>>

ಶಿವಮೊಗ್ಗ: ಇಲ್ಲೊಬ್ಬ ಮಹಾಶಯ ತಾನು ಡಿವೈಎಸ್ಪಿ ಎಂದು ಹೇಳಿಕೊಂಡು ಪಿಎಸ್​ಐ ಮತ್ತು ಸಿಪಿಐಗಳನ್ನೇ ವಂಚಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನರಗುಂದ ತಾಲೂಕು ಕೊಣ್ಣೂರು ಗ್ರಾಮದ ಶಿವಣ್ಣ ಹಿರೇಮಠ ಎಂಬಾತ ಪಿಎಸ್​ಐ, ಸಿಪಿಐಗಳಿಗೆ ಕರೆ ಮಾಡಿ ನನ್ನ ಮಗ ಶಿವಮೊಗ್ಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವನಿಗೆ ತುರ್ತಾಗಿ ಹಣವನ್ನು ಅಕೌಂಟ್​ಗೆ ಹಾಕಿ, ನಾನು ಶಿವಮೊಗ್ಗಕ್ಕೆ ಬಂದಾಗ ಮರಳಿಸುತ್ತೇನೆ ಎಂದು ಹೇಳಿ ವಂಚಿಸಿದ್ದಾನೆ.

ಪೊಲೀಸ್ ಇಲಾಖೆ ಮೊಬೈಲ್ ನಂಬರ್​ಗಳ ಸೀರೀಸ್​ನಿಂದಲೇ ಕರೆ ಬರುತ್ತಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿಲ್ಲ. ಡಿವೈಎಸ್ಪಿ, ಎಸಿಬಿ, ಸಿಐಡಿ ಇಲ್ಲವೇ ಇಂಟಲಿಜೆನ್ಸ್ ಡಿವೈಎಸ್ಪಿ ಎಂದು ಹೇಳಿ ಕರೆ ಮಾಡುತ್ತಿದ್ದ ಆಸಾಮಿ ಪೊಲೀಸರಿಂದ ಹಣ ಪೀಕಿದ್ದಾನೆ.

ಈಚೆಗೆ ಶಿವಮೊಗ್ಗದಲ್ಲಿ ನಡೆದ ಪೊಲೀಸ್ ಇಲಾಖೆ ಕ್ರೀಡಾಕೂಟದ ವೇಳೆ ಎಲ್ಲ ಅಧಿಕಾರಿಗಳು ಒಂದೆಡೆ ಸೇರಿದಾಗ ಈ ವಿಷಯ ಚರ್ಚೆಗೆ ಬಂದಿದ್ದು, ಹಲವು ಅಧಿಕಾರಿಗಳು ತಾವು ಬ್ಯಾಂಕಿಗೆ ಹಣ ಜಮೆ ಮಾಡಿರುವುದಾಗಿ ಹೇಳಿದ್ದಾರೆ. ನಂತರ ಕರೆ ಬಂದಿದ್ದ ಮೊಬೈಲ್ ನಂಬರನ್ನು ಟ್ರ್ಯಾಕ್ ಮಾಡಲಾಗಿದೆ.

ಜಯನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ವಂಚಿಸಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಈ ಕುರಿತು ಎಎಸ್ಪಿ ಮುತ್ತುರಾಜ್‌ ಪ್ರತಿಕ್ರಿಯಿಸಿ, ಆರೋಪಿ ಬೇರೆ ಬೇರೆ ಬ್ಯಾಂಕ್ ಅಕೌಂಟ್​ಗಳಿಗೆ ಹಣ ಜಮೆ ಮಾಡಿಸಿಕೊಂಡಿರುವ ಮಾಹಿತಿ ಇದ್ದು, ಹೆಚ್ಚಿನ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top