Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ತಮಿಳರಂತೆ ಕನ್ನಡಿಗರು ಕೂಡ ಮೂರ್ಖರು ಎಂದಿದ್ದ ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಆಕ್ರೋಶ

Sunday, 16.09.2018, 8:23 PM       No Comments

ನವದೆಹಲಿ: ಹಿಂದಿ ದಿವಸ್‌ ವಿರುದ್ಧ ಪ್ರತಿಭಟಿಸಿದ ಕನ್ನಡಪರ ಹೋರಾಟಗಾರರು ಮೂರ್ಖರು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೂರ್ಖ ಕನ್ನಡ ಪರ ಹೋರಾಟಗಾರರೇ, ಹಿಂದಿ ಕೂಡ ಸಂವಿಧಾನದಲ್ಲಿನ ಒಂದು ಭಾಷೆ. ಒಂದು ವೇಳೆ ಹಿಂದಿ ಬೆಳೆಯುತ್ತದೆ ಎಂದರೆ ಅದರಿಂದ ಕನ್ನಡ ಕೆಳಗಿಳಿಯುತ್ತದೆ ಎಂದು ಅರ್ಥವಲ್ಲ. ಇವರೆಲ್ಲ ತಮಿಳುನಾಡಿನ ಹುಚ್ಚು ಜನರಿಂದ ಪ್ರಭಾವಕ್ಕೊಳಗಾಗಿದ್ದಾರೆ. ಹಿಂದಿಯನ್ನು ವಿರೋಧಿಸುವ ತಮಿಳುನಾಡು ಜನರು ಇಂದು ದೇಶಾದ್ಯಂತ ಪ್ರಯಾಣಿಸಲು ಸಾಧ್ಯವಿಲ್ಲ ಮತ್ತು ಉದ್ಯೋಗವನ್ನು ಕೂಡ ಪಡೆಯಲಾಗುವುದಿಲ್ಲ. ತಮಿಳುನಾಡು ಜನರಂತೆ ಕರ್ನಾಟಕದವರು ಕೂಡ ಮೂರ್ಖ ತಪ್ಪುಗಳನ್ನು ಪುನರಾವರ್ತಿಸಬೇಡಿ ಎಂದಿದ್ದಾರೆ.

ಇನ್ನು ಸುಬ್ರಮಣಿಯನ್‌ ಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿರುವ ಕನ್ನಡಪರ ಸಂಘಟನೆಗಳು ಅವರಿಗೆ ಇನ್ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡದಿರುವಂತೆ ಎಚ್ಚರಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಹೇಳಿಕೆಯನ್ನು ಖಂಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು, ಸುಬ್ರಮಣಿಯನ್ ಸ್ವಾಮಿ ಅವರು ಮಾನಸಿಕ ಸೀಮಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top