Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಸೀಮೆಎಣ್ಣೆ ಸುರಿದು ಪತ್ನಿಯ ಕೊಲೆಗೆ ಯತ್ನಿಸಿದ ವರದಕ್ಷಿಣೆ ಭೂತ

Friday, 15.09.2017, 9:02 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಶುಕ್ರವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಮೋದಿ, ಅಮಿತ್​ ಶಾ ತಂತ್ರಕ್ಕೂ ಕ್ಯಾರೆ ಇಲ್ಲ- ಬಿಎಸ್​ವೈ ಹೋರಾಟವೂ ಲೆಕ್ಕಕ್ಕಿಲ್ಲ- ರಾಜ್ಯ ಕೈ ಪಾಳಯಕ್ಕೆ ಶುರುವಾಗಿದೆ ಇವಿಎಂ ಹ್ಯಾಕ್​ ತಳಮಳ

2. ಹಿಂದೆ ಟ್ಯಾಕ್ಸ್​ ಕಟ್ಟಿದ್ದಿರೋ ಇಲ್ವೋ ಗೊತ್ತಿಲ್ಲ- ಮತ್ತೆ ಆಸ್ತಿ ತೆರಿಗೆ ಕಟ್ಟಲೇ ಬೇಕು – ಹುಡಾ,ಪಾಲಿಕೆ ಗೊಂದಲದಿಂದ ಹುಬ್ಬಳ್ಳಿ ಜನರಿಗೆ ಕಿರುಕುಳ

3. ಆಂಬುಲೆನ್ಸ್​ಗೆ ಮೊದ್ಲು ಮಾಡ್ಬೇಕು ಟ್ರ್ಯಾಕ್ಟರ್​ಗೆ ಕಾಲ್​- ಧಾರವಾಡ ಸಿಂಗನಕೊಪ್ಪದ ಗ್ರಾಮಕ್ಕಿಲ್ಲ ಸಣ್ಣ ರೋಡ್​- ಮಳೆ ಬಂದ್ರೂ, ಬರದಿದ್ರೂ ಇದೆ ಹಣೆ ಬರಹ

4. ಸ್ಯಾಂಡಲ್​ವುಡ್​​​ನಲ್ಲಿ ಭರ್ಜರಿ ಹವಾ ಶುರು – ರಾತ್ರಿಯಿಂದ್ಲೇ ಥಿಯೇಟರ್​ಗಳು ಹೌಸ್​​​​​ ಫುಲ್ಲು – ಸಿನಿಮಾ ನೋಡಿ ಖುಷ್​ ಆದ್ರು ಧೃವ ಫ್ಯಾನ್ಸು


5. ವರದಕ್ಷಿಣೆ ಭೂತ: ಸೀಮೆಎಣ್ಣೆ ಸುರಿದು ಪತ್ನಿ ಕೊಲೆಗೆ ಯತ್ನಿಸಿದ ಪತಿ

ಬಳ್ಳಾರಿ: ವರದಕ್ಷಿಣೆ ತರಲಿಲ್ಲ ಅನ್ನೋ ಕಾರಣಕ್ಕೆ ಪತ್ನಿಗೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮರಬ್ಬಿಹಾಳ್ ತಾಂಡದಲ್ಲಿಂದು ನಡೆದಿದೆ.

ಕಳೆದ ಆರು ತಿಂಗಳ ಹಿಂದೆಯಷ್ಟೇ ಅನೇಕಲ್‌ ತಾಂಡದ ಸಂಗೀತಾಳನ್ನ ಮರಬ್ಬಿಹಾಳ್‌ ತಾಂಡದ ಪ್ರಕಾಶ್‌ ವಿವಾಹವಾಗಿದ್ದ. ಈ ವೇಳೆ 50 ಸಾವಿರ ನಗದು, 3 ತೊಲೆ ಚಿನ್ನ ಹಾಗೂ ಬೈಕ್‌ನ್ನು ವರದಕ್ಷಿಣೆಯಾಗಿ ಪಡೆದಿದ್ದ.

ನಂತರ ದಿನಗಳಲ್ಲಿ ಮತ್ತಷ್ಟು ಹಣಕ್ಕಾಗಿ ಕಿರುಕುಳ ನೀಡ್ತಿದ್ದ. ಇವತ್ತೋ, ನಾಳೆ ಸರಿಹೋಗುತ್ತೆ ಅಂತ ಸಂಗೀತಾ ಮನೆ ಕಡೆಯವರು ಸುಮ್ಮನಾಗಿದ್ದರು. ಆದರೆ, ಪಾಪಿಪತಿ ಪ್ರಕಾಶ್‌, ಸಂಗೀತಾಳ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾನೆ.

ಇದರಿಂದ ಸಂಗೀತಾಳಿಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡಿರುವ ಹಗರಿಬೊಮ್ಮನಹಳ್ಳಿ ಠಾಣೆ ಪೊಲೀಸರು ಆರೋಪಿ ಪ್ರಕಾಶ್‌ಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top