Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

ಅಭಿವೃದ್ಧಿಗೆ ವಿಶೇಷ ಒತ್ತು ಕೊಡುವೆ

Thursday, 14.06.2018, 5:57 AM       No Comments

ಬಾಗಲಕೋಟೆ: ಕಮತಗಿ ಪಟ್ಟಣದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಹಂತ ಹಂತ ವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಡಾ.ವೀರಣ್ಣ ಸಿ.ಚರಂತಿಮಠ ಹೇಳಿದರು.

ಜಿಲ್ಲೆಯ ಕಮತಗಿ ಪಟ್ಟಣದ ಪಾರ್ವತಿ ಪರಮೇಶ್ವರ ಸಾಂಸ್ಕೃತಿಕ ಮಂಗಲಭವನದಲ್ಲಿ ಕಮತಗಿ ಬಿಜೆಪಿ ನಗರ ಘಟಕದಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಕೆಲವೇ ತಿಂಗಳಲ್ಲಿ ಪತನಗೊಂಡು ಮತ್ತೆ ಬಿ.ಎಸ್. ಯಡಿಯುರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದರು. ನಾನು 2008ರಿಂದ 2013ರ ವರೆಗೆ ಶಾಸಕರ ಅವಧಿಯಲ್ಲಿ ಕಮತಗಿಯಲ್ಲಿ ಸಿಸಿ ರಸ್ತೆ, ನೂತನ ಬಸ್ ನಿಲ್ದಾಣ,ಪಶು ಆಸ್ಪತ್ರೆ, ಗಿರಿಮಠಕ್ಕೆ ಕುಡಿವ ನೀರಿನ ಸೌಲಭ್ಯ, 1.5ಎಂವಿ ಟ್ರಾನ್ಸ್​ಫಾರ್ಮರ್ ಅಳವಡಿಸಿರುವುದು, ಪಟ್ಟಣದ ಎಲ್ಲ ವಿದ್ಯುತ್ ಕಂಬಗಳಿಗೆ ಹೊಸದಾಗಿ ತಂತಿ ಅಳವಡಿಸುವಿಕೆ, ಪಟ್ಟಣಕ್ಕೆ ಆಲಮಟ್ಟಿಯಿಂದ ಕುಡಿಯುವ ನೀರಿನ ಸೌಲಭ್ಯ, ಎಸ್ಸಿ ಮತ್ತು ಎಸ್ಟಿ ಕಾಲನಿಯಲ್ಲಿ ಸಿಸಿ ರಸ್ತೆ, ಕಮತಗಿ-ಬೆನಕಟ್ಟಿ ಒಳರಸ್ತೆ ಮಧ್ಯೆಬರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿದ್ದೇನೆ ಎಂದರು.

ಅಲ್ಲದೆ, ಪಟ್ಟಣದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಕೆಬಿಜೆಎನ್​ಎಲ್ ಅಡಿ 12.90ಲಕ್ಷ ರೂ.ಗಳಂತೆ 6 ಸಮುದಾಯಕ್ಕೆ ಹಣ ಮಂಜೂರು ಮಾಡಿದ್ದು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ರೈತ ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಲ್ಲದೆ, ಮಲ ಪ್ರಭಾ ನದಿಯಿಂದ ಪೈಪ್​ಲೈನ್ ಮೂಲಕ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ ಎಂದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜಶೇಖರ ಮುದೇನೂರ, ಸಂಗಣ್ಣ ಕಲಾದಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಹುಚ್ಚಪ್ಪ ವಡವಡಗಿ, ಹುಚ್ಚಯ್ಯ ನಿಂಬಲಗುಂದಿ, ಪಪಂ ಉಪಾಧ್ಯಕ್ಷೆ ನಾಗರತ್ನಾ ಪೂಜಾರಿ ಮತ್ತಿತರರಿದ್ದರು.

ಸಂಗಣ್ಣ ಗಾಣಗೇರ, ಗೌಡಪ್ಪ ಕ್ಯಾದಿಗ್ಗೇರಿ, ರವಿ ಕುಮಚಗಿ, ಗ್ಯಾಣಪ್ಪ ಮೂಲಿಮನಿ, ಭಾಗೀರಥಿ ಬಾಪ್ರಿ, ವಿಜಯಲಕ್ಷ್ಮಿಕುಮಚಗಿ, ರೇಣವ್ವ ಬಿಸನಾಳ, ಸಂತೋಷ ಜಾಲಿಹಾಳ, ಅಶೋಕ ಕಡ್ಲಿಮಟ್ಟಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

Back To Top