Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಸಾಮಾನ್ಯ ವರ್ಗದವರಿಗೆ ಆರ್​ಟಿಇ ಭಾಗ್ಯ ಯಾಕಿಲ್ಲ?

Sunday, 08.07.2018, 3:05 AM       No Comments

ಡ್ಡಾಯ ಶಿಕ್ಷಣ ಹಕ್ಕು ನಿಯಮ (ಆರ್​ಟಿಇ) ಮೂಲಕ ಬಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲೂ ಶೇ.25 ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಉತ್ತಮ ಬೆಳವಣಿಗೆ. ಆದರೆ ಈ ನಿಯಮದಡಿ ಸಾಮಾನ್ಯ ವರ್ಗಕ್ಕೆ ಯಾವುದೇ ಅವಕಾಶ ನೀಡದಿರುವ ಸರ್ಕಾರದ ತಾರತಮ್ಯ ನೀತಿ ಖಂಡನೀಯ. ಸಾಮಾನ್ಯ ವರ್ಗದಲ್ಲಿ ಬಡವರಿಲ್ಲವೆ ಎಂಬ ಪ್ರಶ್ನೆಗೆ ಸರ್ಕಾರದ ಹತ್ತಿರ ಉತ್ತರ ಇಲ್ಲ. ಸಾಮಾನ್ಯ ವರ್ಗದಲ್ಲೂ ವಿದ್ಯಾರ್ಥಿಗಳು ಅಭ್ಯಾಸ ಮಾಡಲಿಕ್ಕಾಗದೆ ಶಾಲೆ ಬಿಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಸರ್ಕಾರ ಸಾಮಾನ್ಯ ಹೊರತುಪಡಿಸಿ ಉಳಿದ ವರ್ಗಗಳಿಗೆ ಅವಕಾಶ ನೀಡಿದ್ದು, ಸಾಮಾನ್ಯ ವರ್ಗದವರು ಆರ್​ಟಿಇ ಅಡಿ ಅರ್ಜಿ ಸಲ್ಲಿಸಿದರೆ ತಿರಸ್ಕೃತಗೊಳ್ಳುತ್ತಿದೆ. ಅಧಿಕಾರಿ ಗಳನ್ನು ವಿಚಾರಿಸಿದರೆ ಸಾಮಾನ್ಯ ವರ್ಗದವರಿಗೆ ಈ ಅವಕಾಶ ವಿಲ್ಲ ಎನ್ನುತ್ತಾರೆ. ಹೀಗಾದರೆ ಸಾಮಾನ್ಯ ವರ್ಗದ ಬಡ ಮಕ್ಕಳು ಓದಬಾರದೆ? ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಅವರಿಗೂ ಅವಕಾಶ ಮಾಡಿಕೊಡುವುದು ಅಗತ್ಯವಾಗಿದೆ.

| ಪ್ರಮೋದ ಜೋಶಿ ಕಲಬುರಗಿ

Leave a Reply

Your email address will not be published. Required fields are marked *

Back To Top