Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ಕೊಡಗನ್ನು ಮರೆಯದಿರಿ ಎಂದು ಸಿಎಂಗೆ ಬಾಲಕನ ಮೊರೆ

Sunday, 15.07.2018, 3:04 AM       No Comments

ಮಡಿಕೇರಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಮುಂಗಡ ಪತ್ರದಲ್ಲಿ ಜಿಲ್ಲೆಯನ್ನು ಕಡೆಗಣಿಸಿದ್ದಾರೆಂದು 8ನೇ ತರಗತಿ ವಿದ್ಯಾರ್ಥಿ ಕಾಳೇರ ಫತಹ ಹೇಳಿರುವ 5.25 ನಿಮಿಷದ ವಿಡಿಯೋ ವೈರಲ್ ಆಗಿದೆ.

ಎಮ್ಮೆಮಾಡು ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ ತೀರದಲ್ಲಿ ನಿಂತು ಕೊಡಗಿನ ಸಂಕಷ್ಟ ತೆರೆದಿಟ್ಟಿದ್ದಾನೆ. ಯುಎಇ ಚಾನಲ್ ವರದಿಗಾರನೆಂದು ಹೇಳಿಕೊಂಡು ಮಾತು ಪ್ರಾರಂಭಿಸುವ ವಿದ್ಯಾರ್ಥಿ, ಜಕ್ರಿಯಾ ಕ್ಯಾಮರಾಮನ್ ಎಂದು ಮಾತು ಮುಗಿಸುತ್ತಾನೆ. ತನ್ನ ಮಾತಿನಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮಿಸಿ, ನಾನು 8ನೇ ತರಗತಿ ವಿದ್ಯಾರ್ಥಿ ಎಂದಿದ್ದಾನೆ.

ನಾನು ಕೊಡಗಿನ ಸಂಕಷ್ಟ ಹೇಳ ಬಯಸುತ್ತೇನೆ. ಪವಿತ್ರ ಕಾವೇರಿ ನದಿ ಹರಿಯುವ ಹಾಗೂ ಎಮ್ಮೆಮಾಡು ಶೂಫಿ ದರ್ಗಾ ಇರುವ ಸ್ಥಳದಲ್ಲಿ ನಿಂತು ಮಾತಾಡುತ್ತಿದ್ದೇನೆ. ಧಾರಾಕಾರ ಮಳೆಯಿಂದ ಕೊಡಗಿನಲ್ಲಿ ಕಾಫಿ, ಕಾಳುಮೆಣಸು, ಅಡಕೆ ಫಸಲು ಕೊಳೆತು ನೆಲಕಚ್ಚಿದೆ. ಜಿಲ್ಲೆಯಲ್ಲಿ ಮಳೆಯಾಗುವುದರಿಂದ ಮಂಡ್ಯ, ಮೈಸೂರು, ಚೆನ್ನೈ ಜನರಿಗೆ ಲಾಭವಾಗುತ್ತದೆ. ಆದರೆ, ಕೊಡಗು ಅನಾಥ ಮಗುವಂತಾಗಿದೆ. ಎದೆಹಾಲು ನೀಡಿದ ತಾಯಿಯನ್ನು ಎಂದೂ ಮರೆಯಬಾರದು. ಬಜೆಟ್​ನಲ್ಲಿ ಕೊಡಗಿಗೆ ಏನೂ ನೀಡದ್ದು ಬೇಸರದ ವಿಚಾರ ಎಂದು ಸಿಎಂ ಗಮನ ಸೆಳೆದಿದ್ದಾನೆ. ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಸದನದ ಒಳಗೆ-ಹೊರಗೆ ಕೂಗಿ ಏನೂ ಪ್ರಯೋಜನ ಇಲ್ಲ. ನೇರ ಪ್ರಧಾನಿ ಹತ್ತಿರ ಹೋಗಿ ಕೊಡಗಿನ ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕು. ಪಿಎಂ-ಸಿಎಂ ಎಲ್ಲರನ್ನೂ ಜನರನ್ನು ಒಂದೇ ರೀತಿ ನೋಡಬೇಕು.ಈ ವರೆಗಿನ ಯಾವ ಸಿಎಂ ಕೊಡಗನ್ನು ಕೈ ಬಿಟ್ಟಿರಲಿಲ್ಲ. ಈಗಿನ ಸಿಎಂ ಕೈಬಿಟ್ಟಿದ್ದು ಬೇಸರವಾಗಿದೆ ಎಂದಿದ್ದಾನೆ.

ಬಾಲಕನ ಒತ್ತಡಕ್ಕೆ ಮಣಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿಗೆ ಬೇಡಿಕೆ ಮಂಡಿಸಿರುವ ಬಾಲಕನ ಒತ್ತಾಯಕ್ಕೆ ಮಣಿದಿರುವ ಸಿಎಂ ಕುಮಾರಸ್ವಾಮಿ ಜು.19 ಹಾಗೂ 20ರಂದು ಕೊಡಗು ಜಿಲ್ಲೆಗೆ ತೆರಳುವ ಜತೆಗೆ, ಆ ಬಾಲಕನನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಜೆಡಿಎಸ್ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆ ಬಾಲಕನ ನೋವು ನನಗೆ ಅರ್ಥವಾಗುತ್ತದೆ. ಈ ರೀತಿ ಆತನಿಂದ ಹೇಳಿಸಿರುವುದು ಬೇಸರ ತಂದಿದೆ. ಆದರೆ ಆತನಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಜು.19ರಂದು ತಲಕಾವೇರಿಗೆ ತೆರಳಿ ಪೂಜೆ ಸಲ್ಲಿಸಿ, ಬಾಲಕನನ್ನೂ ಭೇಟಿ ಮಾಡುತ್ತೇನೆ ಎಂದರು.

Leave a Reply

Your email address will not be published. Required fields are marked *

Back To Top