Friday, 21st September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಗೋಸ್ವರ್ಗದಲ್ಲಿ ಕರಸೇವೆ ಮಾಡಿ

Wednesday, 13.06.2018, 9:34 PM       No Comments

ಸಿದ್ದಾಪುರ: ಗೋಸ್ವರ್ಗದಲ್ಲಿ ನಿಮ್ಮೆಲ್ಲರ ಬೆವರು ಬೀಳಬೇಕು. ನೀವೇ ಸ್ವತಃ ಬಂದು ಕರಸೇವೆ ಮಾಡಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಹೇಳಿದರು. ತಾಲೂಕಿನ ಬಾನ್ಕುಳಿಮಠದ ಗೋಸ್ವರ್ಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗೋಸ್ವರ್ಗಕ್ಕೆ ರಟ್ಟೆಯ ಶಕ್ತಿ, ಬುದ್ಧಿಬಲದ ಶಕ್ತಿ, ನಿಮ್ಮ ಸಮಯದ ಅಗತ್ಯವಿದೆ. ಗೋವುಗಳಿಗೆ ರಾಸಾಯನಿಕ ಮುಕ್ತ ಆಹಾರ ಒದಗಿಸಲು ಪ್ರಯತ್ನಿಸಿ. ದೇಶೀ ತಳಿಯ ಉತ್ತಮ ಗೋವುಗಳು ಗೋಸ್ವರ್ಗಕ್ಕೆ ಬರುವಂತೆ ಮಾಡಿ. ಗೋಸ್ವರ್ಗದ ಕಾರ್ಯವೆಂದರೆ ಎಣೆಯಿಲ್ಲದ, ಹೋಲಿಕೆಯಿಲ್ಲದ ಸತ್ಕಾರ್ಯ. ಕೃಶ, ದುರ್ಬಲ, ಅಶಕ್ತ ಗೋವುಗಳಿಗೆ ಗೋಸ್ವರ್ಗದಲ್ಲಿ ಕರುಣಾವರಣ ನಿರ್ವಿುಸಲಾಗುತ್ತಿದೆ. ವಿಶ್ವದಲ್ಲಿಯೇ ಅಪರೂಪದ ಗೋಕೇಂದ್ರವನ್ನಾಗಿ ಗೋಸ್ವರ್ಗವನ್ನು ರೂಪಿಸುವಲ್ಲಿ ಶ್ರಮಿಸಿ ಎಂದರು.ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಶ್ಯಾಮ ಭಟ್ಟ ಬೇರ್ಕಡವು ಪ್ರಾಸ್ತಾವಿಕ ಮಾತನಾಡಿದರು. ವಿ. ಜಗದೀಶ ಶರ್ಮಾ ಗೋಸ್ವರ್ಗ ಕಾರ್ಯಯೋಜನೆಯ ವಿವರಣೆ ನೀಡಿದರು.

Leave a Reply

Your email address will not be published. Required fields are marked *

Back To Top