Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಗ್ರಾಮಸ್ಥರ ಕನಸಲ್ಲಿ ಬಂದು ನ್ಯಾಯ ಕೊಡಿಸಿ ಎಂದು ಕೇಳುತ್ತದಂತೆ ಮೃತ ಡಿ.ಕೆ.ರವಿ ಆತ್ಮ !

Tuesday, 09.10.2018, 10:47 AM       No Comments

ತುಮಕೂರು: ದಕ್ಷ ಐಎಎಸ್​ ಅಧಿಕಾರಿ ಡಿ.ಕೆ.ರವಿ ಮೃತಪಟ್ಟು ಮೂರುವರ್ಷವಾಗಿದ್ದು ಈಗ ಅವರ ಆತ್ಮ ಗ್ರಾಮಸ್ಥರ ಕನಸಲ್ಲಿ ಬಂದು ನ್ಯಾಯ ಕೊಡಿಸಿ ಎಂದು ಹೇಳುತ್ತಿದೆಯಂತೆ !

ಯಾರೋ ಒಬ್ಬರು ಹೇಳಿದ್ದಲ್ಲ. ಕುಣಿಗಲ್​ ತಾಲೂಕು ದೊಡ್ಡಕೊಪ್ಪಲು ಗ್ರಾಮದ ಹಲವು ಜನರು ಹೀಗೇ ಹೇಳುತ್ತಿದ್ದಾರೆ. ನಿನ್ನೆ ಮಹಾಲಯ ಅಮಾವಾಸ್ಯೆಯಂದೂ ಕೂಡ ಹಲವರ ಕನಸಲ್ಲಿ ಬಂದಿತ್ತಂತೆ ಡಿ.ಕೆ.ರವಿಯವರ ಆತ್ಮ.
ನನಗೆ ಅನ್ಯಾಯವಾಗಿದೆ. ನೀವೆಲ್ಲ ಸೇರಿ ನ್ಯಾಯ ಕೊಡಿಸಿ ಎನ್ನುತ್ತಾರೆ ಕನಸಲ್ಲಿ ಬಂದು. ರವಿ ಅವರ ಆತ್ಮಕ್ಕೆ ಶಾಂತಿ ದೊರಕಿಸಬೇಕು ಎಂದು ಅವರ ಬಾಲ್ಯದ ಗೆಳೆಯ ಶಿವಲಿಂಗಯ್ಯ ಹೇಳಿದ್ದಾರೆ.

ಡಿ.ಕೆ.ರವಿ ಆತ್ಮ ಬೇರೇನೂ ತೊಂದರೆ ಕೊಡುವುದಿಲ್ಲ. ಕನಸಲ್ಲಿ ಬರುತ್ತದೆ. ಕುತ್ತಿಗೆ ಹಿಡಿದಂತೆ ಆಗುತ್ತದೆ. ನ್ಯಾಯಕೊಡಿಸಿ ಎನ್ನುತ್ತದೆ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು, ನಾವು ತೋಟಕ್ಕೆ ನೀರು ಕಟ್ಟಲು ಹೋಗುವಾಗ ನಮ್ಮ ಹಿಂದೆ, ಮುಂದೆ ರವಿಯವರ ಆತ್ಮ ಚಲಿಸಿದಂತೆ ಆಗುತ್ತದೆ ಎಂದಿದ್ದಾರೆ.

2015ರಲ್ಲಿ ಮೃತಪಟ್ಟಿದ್ದ ಡಿ.ಕೆ.ರವಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ನಂತರ ಇದೊಂದು ಆತ್ಮಹತ್ಯೆ ಎಂದು ಸಿಬಿಐ ಹೇಳಿತ್ತು. ಅವರನ್ನು ಸಮಾಧಿ ಮಾಡಿದ್ದರೂ ಅದಕ್ಕೆ ಸಲ್ಲಬೇಕಾದ ಅಂತಿಮ ಸಂಸ್ಕಾರ ಮಾಡಲು ಇನ್ನೂ ಸಿಬಿಐ ಅವಕಾಶ ಮಾಡಿಕೊಟ್ಟಿಲ್ಲ. ಇದೇ ಕಾರಣಕ್ಕೆ ಹೀಗೆಲ್ಲ ಆಗುತ್ತಿದೆ ಎಂದೂ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ಸೋಲಿನಿಂದ ಕಂಗೆಟ್ಟು ಆತ್ಮಹತ್ಯೆ

Leave a Reply

Your email address will not be published. Required fields are marked *

Back To Top