Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಗ್ರಾಮೀಣ ಗಂಡುಲಿ

Thursday, 12.07.2018, 3:03 AM       No Comments

ಬೆಂಗಳೂರು: ‘ಊರಲ್ಲಿ ನನ್ನನ್ನು ಎಲ್ಲರೂ ಗಂಡುಲಿ ಅಂತ ಕರೀತಿದ್ರು. ಅದೇ ತರಹದ ಗತ್ತು ನನಗಿತ್ತು. ಇದೀಗ ಅದೇ ಹೆಸರನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದೇವೆ’ ಎಂದು ಶೀರ್ಷಿಕೆ ಹಿಂದಿನ ಅಸಲಿಯತ್ತನ್ನು ಹೇಳಿಕೊಂಡರು ‘ಗಂಡುಲಿ’ ಚಿತ್ರದ ನಟ, ನಿರ್ದೇಶಕ ವಿನಯ್ ರತ್ನಸಿದ್ದಿ.

ಇತ್ತೀಚೆಗಷ್ಟೇ ಆರ್.ಟಿ. ನಗರದ ಗಣೇಶ ದೇವಸ್ಥಾನದಲ್ಲಿ ಸರಳ ಮುಹೂರ್ತ ಮುಗಿಸಿಕೊಂಡು, ಚಿತ್ರಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಿನಿಮಾ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ವಿನಯ್ ಮಾತಿಗೆ ನಿಂತರು. ‘ನಮ್ಮದು ತುಮಕೂರು ಜಿಲ್ಲೆ ಹೊನ್ನುಡಿಕೆ ಗ್ರಾಮ. ಹಳ್ಳಿಯಿಂದ ಬಂದವರು. ಹಳ್ಳಿಯ ಜೀವನವನ್ನು ಅನುಭವಿಸಿದ್ದರಿಂದ ಅಲ್ಲಿನ ಕಥೆಯನ್ನೇ ‘ಗಂಡುಲಿ’ಗೆ ಆಯ್ದುಕೊಂಡಿದ್ದೇವೆ. ಯುವಕರು ಸಿಡಿದೆದ್ದು ನಿಂತರೆ ಹಳ್ಳಿಯ ಅಭಿವೃದ್ಧಿ ಕೆಲಸಗಳು ಹೇಗೆ ವೇಗ ಪಡೆದುಕೊಳ್ಳುತ್ತವೆ ಎಂಬುದನ್ನು ಚಿತ್ರದ ಮೂಲಕ ಹೇಳಲಿದ್ದೇವೆ. ಅದೇ ರೀತಿ ನನಗಿಟ್ಟ ಅಡ್ಡಹೆಸರನ್ನೇ ಶೀರ್ಷಿಕೆ ಮಾಡಿಕೊಳ್ಳುವಂತೆ ಸ್ನೇಹಿತರು ಸಲಹೆ ನೀಡಿದರು. ಅದರಂತೆ ಸಿನಿಮಾ ಕೆಲಸಗಳು ಶುರುವಾಗಿವೆ’ ಎಂದರು.

ಹೊಸ ಪ್ರತಿಭೆ ಛಾಯಾ ಈ ಚಿತ್ರಕ್ಕೆ ನಾಯಕಿ. ಪಟ್ಟಣದಲ್ಲಿ ಡಾಕ್ಟರ್ ಪದವಿ ಮುಗಿಸಿದ ಹುಡುಗಿಯೊಬ್ಬಳು ಹಳ್ಳಿಗೆ ಆಗಮಿಸುತ್ತಾಳೆ. ಹಳ್ಳಿ ಉದ್ಧಾರಕ್ಕೆ ಪಣ ತೊಟ್ಟ ಯುವಕರ ಗುಂಪಿನೊಟ್ಟಿಗೆ ಕೈ ಜೋಡಿಸುತ್ತಾಳೆ. ಹೀಗೆ ಸಾಗುವ ಸಿನಿಮಾದಲ್ಲಿ ಪ್ರೀತಿ-ಪ್ರೇಮಕ್ಕೆ ಸಂಬಂಧಪಟ್ಟ ಅಂಶಗಳನ್ನೂ ಸೇರಿಸಿದ್ದಾರಂತೆ ನಿರ್ದೇಶಕರು. ಬಸವರಾಜು, ಅಮರೇಂದ್ರ, ಪುನೀತ್ ಕುಮಾರ್, ಉಮೇಶ್ ಸೇರಿ ಒಟ್ಟು ಎಂಟು ಮಂದಿ ‘ಗಂಡುಲಿ’ಗೆ ಬಂಡವಾಳ ಹೂಡುತ್ತಿದ್ದಾರೆ. ಜುಲೈ 15ರಂದು ಚಿತ್ರೀಕರಣ ಆರಂಭವಾಗಲಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಶೂಟಿಂಗ್ ಮುಗಿಸಲಿದೆಯಂತೆ. ಪೋಷಕ ಪಾತ್ರಗಳಲ್ಲಿ ಸುಧಾ ಬೆಳವಾಡಿ, ಧಮೇಂದ್ರ ಅರಸ್, ವಿಜಯ್, ಗೌತಮ್ ಶಿವು, ಸಂತೋಷ್ ಸೇರಿ ಹತ್ತಾರು ಕಲಾವಿದರು ನಟಿಸಲಿದ್ದಾರೆ. ರವಿದೇವ್ ಸಂಗೀತ ನೀಡಲಿದ್ದು, ರಾಜು ಶಿವಶಂಕರ್ ಮತ್ತು ಮನು ಛಾಯಾಗ್ರಹಣ ನಿಭಾಯಿಸಲಿದ್ದಾರೆ.

Leave a Reply

Your email address will not be published. Required fields are marked *

Back To Top