Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ಯುಎಫ್​ಒ, ಕ್ಯೂಬ್​ ಸಮಸ್ಯೆ ಬಗೆಹರಿಯುವವರೆಗೂ ಚಿತ್ರ ಬಿಡುಗಡೆ ಇಲ್ಲ: ಸಾ.ರಾ.ಗೋವಿಂದು

Saturday, 10.03.2018, 7:15 PM       No Comments

ಬೆಂಗಳೂರು: ಯುಎಫ್​​ಒ, ಕ್ಯೂಬ್ ದುಬಾರಿ ಶುಲ್ಕ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆ ಆಗುವುದಿಲ್ಲ. ತಮಿಳುನಾಡು ಮತ್ತು ನಾವು ಒಂದಾಗಿದ್ದು, ಈಗ ಅವರಿಗೆ ಬುದ್ದಿ ಕಲಿಸುತ್ತೇವೆ. ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಬೇಡಿ ಎಂದು ಹೇಳಿಕೊಡುತ್ತೀವಿ ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮೀನು ನಮ್ಮದೆ, ಫಸಲು ನಮ್ಮದೆ. ರೈತರು ನಾವೆ. ಹೀಗಿರುವಾಗ ಇನ್ಮುಂದೆ ನಾವೇ ಅದನ್ನ ಉಳಿಸಿಕೊಳ್ಳುತ್ತೇವೆ. ಇಲ್ಲಿವರೆಗೂ ಸಾವಿರಾರು ಕೋಟಿ ರೂ. ಗಳಿಸಿದ್ದಾರೆ. ಇನ್ನು ನಾವು ಅವರಿಗೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿ, ಎಲ್ಲ ಸೆಕ್ಟರ್‌ಗಳಲ್ಲೂ ಒಂದು ಸಮಸ್ಯೆ ಇದೆ. ಪರಿಹಾರಕ್ಕೆ ನಾನೇ ಫಿಲ್ಮ್‌ ಚೇಂಬರ್‌ಗೆ ಒಂದು ಮಾಡೆಲ್‌ ಕೊಟ್ಟಿದ್ದೇನೆ. 1 ಪ್ರೊಜೆಕ್ಟರ್‌ ಬೆಲೆ 8 ಲಕ್ಷ ರೂ. ಆಗುತ್ತದೆ. 100 ಪ್ರೊಜೆಕ್ಟರ್‌ ಬೆಲೆ 8 ಕೋಟಿ ರೂಪಾಯಿ ಆಗುತ್ತದೆ ಎಂದರು.
ನಿರ್ಮಾಪಕ ಮುನಿರತ್ನ ಮಾತನಾಡಿ, ಇದೊಂದು ಹಗಲು ದರೋಡೆಯನ್ನು ತಡೆಯಬೇಕು. ಡಿಜಿಟಲ್ ಪ್ರೊವೈಡರ್​​​ಗಳನ್ನು ನಿರ್ಮಾಪಕ ಸಂಘ, ಫಿಲ್ಮ್ ಚೇಂಬರ್​​ನಿಂದ ಅಳವಡಿಸುವ ಯೋಚನೆ ಮಾಡಿದ್ದೇವೆ ಎಂದರು.

ನಟ ಪ್ರಕಾಶ್‌ ರಾಜ್‌ ಮಾತನಾಡಿ, ಈ ಏಕತಾನತೆ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಮೊದಲು ನಾವು ಹೊರಬರಬೇಕು. ಎಲ್ಲ ಚಿತ್ರರಂಗದವರು ಒಟ್ಟಾಗಿ ಹೋರಾಡಬೇಕು. ಒಡೆದು ಆಳುವ ಸಂಸೃತಿಯನ್ನು ಮೀರಬೇಕು. ಇವರು ಯಾರೂ ಒಗ್ಗಟ್ಟಾಗುವುದಿಲ್ಲ ಎಂದುಕೊಂಡಿದ್ದವರು ನಾವೆಲ್ಲ ಒಂದಾಗಿರುವುದರಿಂದ ನಮ್ಮ ಬಳಿ ಅವರೇ ಬರುತ್ತಾರೆ ಎನಿಸುತ್ತದೆ ಎಂದು ಹೇಳಿದರು.

ಮಾತುಕತೆ ವಿಫಲ

ದುಬಾರಿ ಶುಲ್ಕ ವಿಷಯವಾಗಿ ಬೆಂಗಳೂರಿನ ಫಿಲಂ ಚೇಂಬರ್​ನಲ್ಲಿ ಯುಎಫ್​ಒ , ಕ್ಯೂಬ್ ಜತೆ ನಡೆದ ಮಹತ್ವದ ಸಭೆಯಲ್ಲಿ ಸಾ.ರಾ.ಗೋವಿಂದು, ಮುನಿರತ್ನ, ನಟ ಪ್ರಕಾಶ್ ರೈ, ರಾಕ್​ಲೈನ್ ವೆಂಕಟೇಶ್, ತಮಿಳು ನಟ ವಿಶಾಲ್ ಭಾಗಿಯಾಗಿದ್ದರು. ಸಭೆಯ ಬಳಿಕ ಯುಎಫ್​ಒ ಜತೆಗಿನ ಮಾತುಕತೆ ಮುರಿದು ಬಿದ್ದಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top