Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಸಿದ್ದು ಸರ್ಕಾರದಿಂದ ಅನ್ನಭಾಗ್ಯ ಆಯ್ತು; ಈಗ ಹುಳುಭಾಗ್ಯ ಸರದಿ…!

Tuesday, 24.10.2017, 9:40 AM       No Comments

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಸಿವು ಮುಕ್ತ ಕರ್ನಾಟಕದ ನಿರ್ಮಾಣಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈಗ ಇತಿಹಾಸ. ಆದರೆ ಅನ್ನಭಾಗ್ಯ ಯೋಜನೆ ಜನರಿಗೆ ಎಷ್ಟು ಅನುಕೂಲವಾಗಿದೆ, ಅನ್ನಭಾಗ್ಯದಲ್ಲಿ ನೀಡುವ ಪಡಿತರ ಹೇಗಿದೆ ಎಂದು ಕೇಳಿದರೆ ಶಾಕಿಂಗ್‌ ನ್ಯೂಸ್‌ ತೆರೆದುಕೊಳ್ಳುತ್ತದೆ.

ಹೌದು, ಬಡವರಿಗೆ ನೀಡುತ್ತಿರುವ ಪಡಿತರವನ್ನು ಕಸಕ್ಕಿಂತ ಕಡೆಯಾಗಿ ನೋಡಲಾಗುತ್ತಿದೆಯಾ ಎನ್ನುವ ಅನುಮಾನಗಳು ಕಾಡುತ್ತಿದ್ದು, ಈ ಕುರಿತು ದಿಗ್ವಿಜಯ ನ್ಯೂಸ್‌ ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಅನ್ನಭಾಗ್ಯದ ಪಡಿತರವೆಲ್ಲ ಹುಳುಗಳಿಗೆ ಆಹಾರವಾಗಿರುವ ಸತ್ಯ ಹೊರಬಿದ್ದಿದೆ.

2015ರ ಆಗಸ್ಟ್ ನಿಂದ ಸರ್ಕಾರ ರಾಜ್ಯದ ಜನತೆಗೆ ಪಡಿತರ ಅಂಗಡಿ ಮೂಲಕ ನೀಡುತ್ತಿದ್ದ ಗೋಧಿಯನ್ನ ಬ್ಯಾನ್ ಮಾಡಿದ ಕಾರಣ ಕೋಟ್ಯಾಂತರ ರೂಪಾಯಿಯ ಗೋದಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ಎಫ್ ಸಿ ಐ ಭಾರತೀಯ ಆಹಾರ ನಿಗಮದಲ್ಲಿ ಕೊಳೆಯುತ್ತಿವೆ.

ಬರೊಬ್ಬರಿ 15 ಜಿಲ್ಲೆಗಳಲ್ಲಿ ನಡೆಸಿರುವ ಸ್ಟಿಂಗ್‌ ಆಪರೇಶನ್‌ನಲ್ಲಿ ಕಳೆದ ಎಂಟು ತಿಂಗಳಲ್ಲಿ ಗೋಧಿ, ಎಣ್ಣೆ, ಸಕ್ಕರೆ, ಹೆಸರುಕಾಳನ್ನು ನೀಡದೆ ಹಾಗೆ ಗೋದಾಮಿನಲ್ಲಿರುವ ಲಕ್ಷ ಲಕ್ಷ ಕ್ವಿಂಟಾಲ್‌ ಪದಾರ್ಥಗಳು ಸಂಪೂರ್ಣವಾಗಿ ಹಾಳಾಗಿರುವುದು ಕಂಡುಬಂದಿದೆ.

ಕಲಬುರಗಿಯಲ್ಲಿ ಕಾಳೆಲ್ಲ ಪುಡಿ ಪುಡಿ

ಕಲಬುರಗಿ ಜಿಲ್ಲೆಯೊಂದರಲ್ಲಿಯೇ ಎಂಟು ಗೋದಾಮುಗಳಲ್ಲಿ 10 ಸಾವಿರ ಕ್ವಿಂಟಾಲ್‌ಗೂ ಅಧಿಕ ಗೋಧಿ ಉಳಿದುಕೊಂಡಿದ್ದು, ಹುಳ ಬಿದ್ದಿದೆ. 1 ಲಕ್ಷ ಲೀಟರ್‌ಗೂ ಅಧಿಕ ಎಣ್ಣೆ, ಸಕ್ಕರೆ ಕೂಡ ಹಾಳಾಗಿದ್ದು, ಜಿಲ್ಲಾದ್ಯಂತ 800 ಕ್ವಿಂಟಾಲ್‌ಗೂ ಅಧಿಕ ಸ್ಟಾಕ್‌ ಇದೆ. ಸುಮಾರು 700 ಕ್ವಿಂಟಾಲ್‌ಗೂ ಅಧಿಕ ಹೆಸರುಕಾಳಿಗೆ ಹುಳ ಬಿದ್ದಿದ್ದು, ಕಾಳು ಪುಡಿಯಾಗಿ ಮಾರ್ಪಟ್ಟಿದೆ.

ಬೀದರ್​ನಲ್ಲಿ ಬರಬಾದ್​ ಆದ ಗೋಧಿ 

ರಾಜ್ಯದ ಗಡಿ ಜಿಲ್ಲೆ ಬೀದರ್​ನಲ್ಲಿ ನಮ್ಮ ದಿಗ್ವಿಜಯ ನ್ಯೂಸ್ ಮಾಡಿರುವ ರೀಯಾಲೀಟಿ ಚೆಕ್ ನಿಂದ ಸರ್ಕಾರದ ಬಣ್ಣ ಬಯಲಾಗಿದೆ. ಸರ್ಕಾರಿ ಅಧಿಕಾರಿ ಹೇಳುವ ಪ್ರಕಾರವೇ 2 ಸಾವಿರ ಕ್ವಿಂಟಲ್​ ಗೋಧಿ ಇಲ್ಲಿ ಕೊಳೆಯುತ್ತಿದೆ.

ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಸವರಾಜ್ ಅವರು ಹೇಳುವ ಪ್ರಕಾರ ಕರ್ನಾಟಕ ಆಹಾರ ನಿಗಮದಲ್ಲಿ 2 ಸಾವಿರ ಕ್ವಿಂಟಲ್ ಗೋಧಿ ಕೋಳೆಯುತ್ತಿವೆ. ಈಗಾಗಲೇ ಲ್ಯಾಬಿಗೆ ಸ್ಯಾಂಪಲ್ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಯಾದಗಿರಿಯಲ್ಲಿಯೂ ಗೋಧಿಯದು ದುಸ್ಥಿತಿ

ಇನ್ನು, ಯಾದಗಿರಿ ಜಿಲ್ಲೆಯಲ್ಲೂ ಪರಿಸ್ಥಿತಿ ಬೇರೆಯಾಗಿಲ್ಲ. ಅಲ್ಲಿಯೂ ಕೂಡ ಕ್ವಿಂಟಾಲ್​ಗಟ್ಟಲೆ ಗೋಧಿ ಹುಳು ಹಿಡಿದು ಹಾಳಾಗುತ್ತಿದೆ. ಕಳೆದ 8 ತಿಂಗಳಿನಿಂದ ಪಡಿತರು ವಿತರಣೆಯಾಗದೆ ಗೋದಾಮುಗಳಲ್ಲಿ ಸ್ಟಾಕ್ ಆಗಿ ಉಳಿದು ಬಿಟ್ಟಿದೆ. ​ ಜಿಲ್ಲೆಯ ವಿವಿಧ ಗೋಧಾಮುಗಳಲ್ಲಿ ಒಟ್ಟು 1691 ಕ್ವಿಂಟಾಲ್ ಗೋಧಿ ಸ್ಟಾಕ್​ ಆಗಿದೆ ಎಂದು ದಿಗ್ವಿಜಯ ನ್ಯೂಸ್ ಕಾರ್ಯಚರಣೆ ಬಯಲು ಮಾಡಿದೆ.

ಬರಿ ಯಾದಗಿರಿ ಗೋದಾಮಿನಲ್ಲಿಯೇ 553 ಕ್ವಿಂಟಾಲ್ ಗೋಧಿ ಕೊಳೆಯುತ್ತಿದೆ. ಸುರಪುರ ಗೋದಾಮಿನಲ್ಲಿ 528 ಕ್ವಿಂಟಾಲ್​ ಗೋಧಿ ಮತ್ತು ಶಹಾಪುರ ಗೋದಾಮಿನಲ್ಲಿ 610 ಕ್ವಿಂಟಾಲ್ ಗೋಧಿ ಹುಳು ಹಿಡಿದು ಹಾಳಾಗಿದೆ.

ಬಡವರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಸರ್ಕಾರದ ನಿರ್ಲಕ್ಷ್ಯದಿಂದ ಹುಳುಭಾಗ್ಯವಾಗಿ ಮಾರ್ಪಟ್ಟಿದ್ದು, ಇಷ್ಟಾದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿರುವುದು ಹಸಿವು ಅನುಮಾನಕ್ಕೆ ಕಾರಣವಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top