Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಹಣ ಕೊಟ್ರೆ ಯಾರಿಗೆ ಬೇಕಾದ್ರೂ ಸಿಗುತ್ತೆ ಪಿಸ್ತೂಲ್​!

Wednesday, 11.10.2017, 8:33 PM       No Comments

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಅವರ ಹತ್ಯೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಹಂತಕರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಗೌರಿ ಲಂಕೇಶ್​ ಹತ್ಯೆ ನಡೆದಿದ್ದು, 7.65 ಪಿಸ್ತೂಲಿನಿಂದ ಎಂಬುದು ಪೊಲೀಸ್​ ತನಿಖೆ ವೇಳೆ ಕಂಡು ಬಂದಿತ್ತು. ಇದೇ 7.65 ಪಿಸ್ತೂಲ್​ನಿಂದ ಈ ಹಿಂದೆ ದಾಬಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಯಾಗಿತ್ತು. ಇದರ ಸಣ್ಣ ಜಾಡು ಹಿಡಿದು ಹೊರಟ ದಿಗ್ವಿಜಯ ನ್ಯೂಸ್ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಹಣ ಕೊಟ್ಟರೆ ರಾಜ್ಯದಲ್ಲಿ ಯಾರಿಗೆ ಬೇಕಾದರೂ ಪಿಸ್ತೂಲ್​ ಸುಲಭವಾಗಿ ಸಿಗುತ್ತದೆ ಎಂಬುದು ದಿಗ್ವಿಜಯ ನ್ಯೂಸ್​ ಸ್ಟಿಂಗ್​ ಆಪರೇಷನ್​ನಲ್ಲಿ ಕಂಡು ಬಂದಿದೆ. ಇನ್ನು ಅಂಡರ್​ವರ್ಡ್​​ ಮತ್ತು ರೌಡಿಸಂ ಎಂದು ಓಡಾಡುವವರಿಗೆ ಪಿಸ್ತೂಲ್​ ಸಿಗುವುದು ಕಷ್ಟವೇ ಅಲ್ಲ.

ದಿಗ್ವಿಜಯ ನ್ಯೂಸ್​ ತಂಡ ಪಿಸ್ತೂಲ್​ ಖರೀದಿ ಮಾಡಲು ಪ್ರಯತ್ನಿಸಿದಾಗಿ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಯಿತು. ಎಲ್ಲಾ ವೆಪನ್​ ಡೀಲಿಂಗ್​ಗಳು ನಡೆಯುವುದು ಯಾವುದೋ ಅಂಡರ್​ಗ್ರೌಂಡ್​ ಅಡ್ಡೆಯಲ್ಲಿ ಅಲ್ಲ. ಡೀಲ್​ ನಡೆಯುವುದು ಪೊಲೀಸರ ಸರ್ಪಗಾವಲು ಇರುವ ಜೈಲಿನ ಒಳಗೆ ಎಂಬುದು ತಿಳಿದು ಬಂದಿತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top