Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಕಂಠಪೂರ್ತಿ ಎಣ್ಣೆ ಏರಿಸಿದವ್ರು ಯುವಕನಿಗೆ ಏನು ಮಾಡಿದ್ರು?

Monday, 16.10.2017, 9:13 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಸೋಮವಾರ ಬೆಳಗಿನ ವಿಶೇಷ ಸುದ್ದಿಗಳು:
1. ಸಿಲಿಂಡರ್​ ಸ್ಫೋಟಕ್ಕೆ ಮೂರಂತಸ್ಥಿತಿನ ಮನೆ ಕುಸಿತ- ಒಬ್ಬ ಬಲಿ, 3 ರಕ್ಷಣೆ – ಬೆಂಗಳೂರಿನ ಈಜೀಪುರದಲ್ಲಿ ಘಟನೆ
2. ಬೀದರ್​ನಲ್ಲಿ ಹೊಂಡಕ್ಕೆ ಬಿದ್ದು 3 ಸಾವು- ಗದಗನಲ್ಲಿ ಮನೆ ಛಾವಣಿ ಕುಸಿದು ಅಜ್ಜಿ ಮೊಮ್ಮಕ್ಕಳು ಬಲಿ- ರಾಜ್ಯದಲ್ಲಿ ಮರಣ ತಂದ ವರುಣ
3. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಗುಂಡಿ- ಗುಂಡಿ ಮುಚ್ಚೋ ಬದಲು ಕಸ ಕುಡಿಸೋ ಯಂತ್ರ ಖರೀದಿ​​ಗೆ ಪ್ಲಾನ್​- ಬಿಬಿಎಂಪಿ ನಡೆ ಅನುಮಾನಕ್ಕೆ
4. ಪುತ್ರಿ ಜತೆ ಲಾಡೂ ಕಚ್ಚೋ ಆಟದಲ್ಲಿ ಮಾಹಿ- ಸಿಹಿ ತಿಂದು ಸಂಭ್ರಮಿಸಿದ ಕೂಲ್​ ಕ್ಯಾಪ್ಟನ್​- ತಂದೆ ಮಗಳ ಲಡ್ಡು ಆಟಕ್ಕೆ ಫ್ಯಾನ್ಸ್​ ಫಿದಾ
5. ಕಂಠಪೂರ್ತಿ ಎಣ್ಣೆ ಏರಿಸಿದ್ರು- ಟೈಟಾಗಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ್ರು- ಬ್ಯಾಟರಾಯನಪುರ ಪೊಲೀಸ್ ಠಾಣೆ ಹತ್ತಿರವೇ ನಡೀತು ವಾರ್​

ಕುಡಿದ ಮತ್ತಿನಲ್ಲಿ ಪುಂಡರ ಗ್ಯಾಂಗ್ ಯುವಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಐದಾರು ಪುಂಡರ ಗ್ಯಾಂಗ್ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ಎಂ.ಎಂ ಬಾರ್ ನ ಮುಂದೆ ಕುಡಿದು ಗಲಾಟೆ ಮಾಡ್ತಿದ್ರು.

ಈ ವೇಳೆ ರಸ್ತೆಯಲ್ಲಿ ಹೋಗ್ತಿದ್ದ ಯುವಕನನ್ನ ನೋಡಿ ಪುಂಡರ ಗ್ಯಾಂಗ್ ಕೈ ಹಾಗೂ ಕಲ್ಲಿನಿಂದ ಹಲ್ಲೆ ಮಾಡೋದಕ್ಕೆ ಮುಂದಾಯ್ತು. ಈ ಎಲ್ಲಾ ದೃಶ್ಯಾವಳಿಗಳನ್ನು ನೋಡಿದ್ರು ಬೀಟ್ ನಲ್ಲಿದ್ದ ಪೊಲೀಸ್ರು ಕಣ್ ಮುಚ್ಚಿಕೊಂಡು ಕೂತಿದ್ರು.

ಈ ಹಿಂದೆ ಎಂ.ಎಂ ಬಾರ್ ನ ಆಸುಪಾಸಿನಲ್ಲೆ ಎರಡು ಮೂರು ಕೊಲೆಗಳು ನಡೆದಿದ್ವು. ರೌಡಿಗಳು ಇದೇ ಬಾರ್ ನಲ್ಲಿ ಕೂತು ಕುಡಿದು ಗಲಾಟೆ ಮಾಡಿಕೊಂಡು ಪದೇ ಪದೇ ಅವಾಂತರವನ್ನ ಸೃಷ್ಟಿಸ್ತಿದ್ರು ಪೊಲೀಸರು ಮಾತ್ರ ಇತ್ತ ತಲೆ ಕೂಡ ಹಾಕ್ತಿಲ್ಲ .

Leave a Reply

Your email address will not be published. Required fields are marked *

Back To Top