Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News

ಕಾರಂಜಾದಲ್ಲಿ ತೆಪ್ಪ ದುರಂತ ಪ್ರಕರಣ – ವರದಿಯಿಂದ ಎಚ್ಚೆತ್ತ ಶಾಸಕ ಅಶೋಕ್​​​ ಖೇಣಿ

Thursday, 20.07.2017, 9:09 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಗುರುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ

1. ಶಶಿಕಲಾಗೆ ಜೈಲಿನಲ್ಲೂ ಕೆಲಸದಾಳುಗಳು- ಚಿನ್ನಮ್ಮನ ಬೇಕು-ಬೇಡಕ್ಕೆ ಇಬ್ಬರು ಆಳು- ಅಧಿಕಾರಿಗಳಿಗೆ ಲಂಚ ನೀಡಿ ಜೈಲಲ್ಲಿ ದರ್ಬಾರ್​​
2. ನಡೆದಾಡಿದರೆ ತಲೆಗೆ ಬಡಿಯುತ್ತೆ ವಿದ್ಯುತ್​​ ಲೈನ್​- ಪ್ರಾಣಭಯದಲ್ಲಿ ರೈತರು-ತುಮಕೂರಿನಲ್ಲಿ ಬಲಿಗಾಗಿ ಕಾಯ್ತಿದೆ ವಿದ್ಯುತ್​​ ತಂತಿ
3. ರಾಜ್ಯದ ಹಲವೆಡೆ ವರ್ಷಧಾರೆ- ಮಲೆನಾಡಿನಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ – ಕುಸಿಯುವ ಭೀತಿಯಲ್ಲಿ ಶಿರಸಿ ಸೇತುವೆ
4. ಇಂದು ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ – ಸಂಜೆ 5 ಗಂಟೆ ವೇಳೆಗೆ ಅಧಿಕೃತ ಫಲಿತಾಂಶ – ಯಾರಾಗ್ತಾರೋ ರಾಷ್ಟ್ರದ ಪ್ರಥಮ ಪ್ರಜೆ..?

ಬೀದರ್​​​​​​​ನ ಕಾರಂಜಾದಲ್ಲಿ ತೆಪ್ಪ ದುರಂತ ಪ್ರಕರಣ -ವರದಿಯಿಂದ ಎಚ್ಚೆತ್ತ ಶಾಸಕ ಅಶೋಕ್​​​ ಖೇಣಿಯಿಂದ 15 ದಿನದಳೊಗೆ ಬೋಟ್​​​ ವ್ಯವಸ್ಥೆ

ಬೀದರ್​​​​​​​ನ ಕಾರಂಜಾದಲ್ಲಿ ತೆಪ್ಪ ದುರಂತ ಪ್ರಕರಣ – ವರದಿಯಿಂದ ಎಚ್ಚೆತ್ತ ಶಾಸಕ ಅಶೋಕ್​​​ ಖೇಣಿಯಿಂದ 15 ದಿನದಳೊಗೆ ಬೋಟ್​​​ ವ್ಯವಸ್ಥೆ ಭರವಸೆ
ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ರಂಜೋಳ ಖೇಣಿ ಗ್ರಾಮದಲ್ಲಿ, ಕಾರಂಜಾ ಹಿನ್ನೀರಿನಲ್ಲಿ ಗ್ರಾಮಸ್ಥರು ತೆಪ್ಪದಲ್ಲಿ ಹೋಗುತ್ತಿರೋ ಬಗ್ಗೆ ದಿಗ್ವಿಜಯ ನ್ಯೂಸ್ ವರದಿ ಪ್ರಸಾರ ಮಾಡಿತ್ತು.

ವರದಿಗೆ ಸ್ಪಂದಿಸಿದ ಕ್ಷೇತ್ರದ ಶಾಸಕ ಅಶೋಕ ಖೇಣಿ, ಗ್ರಾಮಸ್ಥರಿಗೆ ಹೈಟೆಕ್ ಬೋಟ್ ಕೊಡಿಸೋದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಜತೆ ಮಾತುಕತೆ ನಡೆಸಿ, ಮುಂಬರುವ ದಿನಗಳಲ್ಲಿ ಶಾಶ್ವತ ಸಮಸ್ಯೆ ನೀಗಿಸಲು ಬ್ರಿಜ್ ಕಂ ಬ್ಯಾರೇಜ್ ಮಾಡಿಸಲಾಗುವುದು ಅಂತ ಖೇಣಿ ಭರವಸೆ ನೀಡಿದ್ದಾರೆ.

ರಂಜೋಳ ಖೇಣಿಯಲ್ಲಿ ತಮ್ಮ ಹೊಲಗಳಿಗೆ ಹೋಗಬೇಕಾದ್ರೆ ಇಲ್ಲಿನ ಗ್ರಾಮಸ್ಥರು ಕಾರಂಜಾ ಹಿನ್ನೀರು ದಾಟಬೇಕು. ಪ್ರತಿ ದಿನ ತೆಪ್ಪದಲ್ಲೇ ದಾಟುವ ಇವರು ತಮ್ಮ ಜೀವವನ್ನ ಕೈಯಲ್ಲೇ ಹಿಡಿದು ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಅಲ್ದೆ ಮೊನ್ನೆಯಷ್ಟೇ ತೆಪ್ಪ ಮುಳುಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

Back To Top