Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :

ವಿಜಯವಾಣಿ- ದಿಗ್ವಿಜಯ ನ್ಯೂಸ್ ಸೋಮವಾರ ಬೆಳಗಿನ ಮುಖ್ಯಾಂಶಗಳು

Monday, 10.07.2017, 9:32 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಸೋಮವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಶರತ್ ಶವಯಾತ್ರೆ ವೇಳೆ ಗಲಭೆ ಪ್ರಕರಣ- ಕಲ್ಲು ತೂರಾಟ ನಡೆಸಿದ್ದಕ್ಕೆ ಪ್ರತೀಕಾರ- ಬಿ.ಸಿ.ರೋಡ್‌ನಲ್ಲಿ ನಿಂತಿದ್ದ ವಾಹನಗಳ ಗಾಜು ಪುಡಿ ಪುಡಿ

2. ಬೀದರ್‌ನ ಕುಗ್ರಾಮದ ಸಮಸ್ಯೆಗೆ ಸಚಿವರ ಸ್ಪಂದನೆ- ಕುಂಟೆಸಿರ್ಸಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ನಿರ್ಧಾರ- ಇದು ದಿಗ್ವಿಜಯ ನ್ಯೂಸ್ ಇಂಪ್ಯಾಕ್ಟ್

3. ಟೀಂ ಇಂಡಿಯಾಗೆ ಯಾರಾಗ್ತಾರೆ ದ್ರೋಣಾಚಾರ್ಯ..?- ವೀರೂ, ರವಿ ಮಧ್ಯೆ ತೀವ್ರ ಸ್ಪರ್ಧೆ- ಬಿಸಿಸಿಐ ಯಾರಿಗೆ ಹಾಕುತ್ತೆ ಮಣೆ..?

4. ಸ್ನೇಹಿತನ ಹುಟ್ಟುಹಬ್ಬ ಕರಾಳ ದಿನವಾಯ್ತು- ಜಾಲಿ ರೈಡ್‌ ಹೊರಟ 8 ಮಂದಿ ಜಲಸಮಾಧಿ- ಮಹಾರಾಷ್ಟ್ರದ ನಾಗ್ಪುರದಲ್ಲಿ ದುರಂತ

5. ಕಾಶ್ಮೀರ ವಿಷಯಕ್ಕೆ ತಲೆ ಹಾಕಿದ ಚೀನಾ- ಪಾಕ್​ ಬಯಸಿದ್ರೆ ಸೇನೆ ನಿಯೋಜನೆ ಮಾಡುತ್ತಂತೆ- ಚೀನಾ ಮಾಧ್ಯಮಗಳಿಂದ ವಿಷಯ ಬಹಿರಂಗ

ಬೀದರ್​: ರಾಜ್ಯದ ಗಡಿ ಜಿಲ್ಲೆ ಬೀದರ್​ನ ಭಾಲ್ಕಿಯ ಕುಂಟೆಸಿರ್ಸಿ ಗ್ರಾಮದ ಶೌಚಾಲಯ ವ್ಯವಸ್ಥೆ ಕುರಿತು ವರದಿ ಪ್ರಸಾರ ಮಾಡಿದ್ದ ದಿಗ್ವಿಜಯ ನ್ಯೂಸ್ ವರದಿ ಫಲಕೊಟ್ಟಿದೆ.

ಸಚಿವ ಈಶ್ವರ್ ಖಂಡ್ರೆ ನೇತೃತ್ವದ ಅಧಿಕಾರಿಗಳ ತಂಡ ಕುಂಟೆಸಿರ್ಸಿ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಿವಂತೆ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಲ್ಲದೆ ಗ್ರಾಮದ ಜನರೊಂದಿಗೆ ಸಭೆ ನಡೆಸಿ ಬಯಲು ಶೌಚಾಲಯ ಸಮಸ್ಯೆಗೆ ಶೀಘ್ರ ಸ್ಪಂದಿಸುವ ಭರವಸೆ ನೀಡಿದ್ದಾರೆ. ಇದೇ ತಿಂಗಳ 6 ರಂದು ಡಿಜಿಟಿಲ್ ಇಂಡಿಯಾ ಪಾಸ್ ಸ್ವಚ್ಚಭಾರತ ಅಭಿಯಾನ ಫೇಲ್ ಅನ್ನೂ ಶೀರ್ಷಿಕೆಯಡಿ ದಿಗ್ವಿಜಯ ನ್ಯೂಸ್ ಬೀದರ್​ನ ಕುಂಟೆಸಿರ್ಸಿ ಗ್ರಾಮದ ಶೋಚನೀಯ ಸ್ಥಿತಿ ಕುರಿತು ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು. ಆ ಮೂಲಕ ಕುಂಟೆಸಿರ್ಸಿ ಗ್ರಾಮದಲ್ಲಿ ಅಸ್ವಚ್ಚತೆಯನ್ನ ಜಗಜ್ಜಾಹಿರು ಮಾಡಿತ್ತು.

ಇದೀಗ ದಿಗ್ವಿಜಯ ನ್ಯೂಸ್ ವರದಿಯಿಂದ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇನ್ನು ದಿಗ್ವಿಜಯ ನ್ಯೂಸ್​ನ ಸಾಮಾಜಿಕ ಕಳಕಳಿಗೆ ಗ್ರಾಮದ ಜನರು ಅಭಿನಂದನೆ ಸಲ್ಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top