Thursday, 22nd March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಕೋಲಾರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ- ಪೋಷಕರ ಆಕ್ರೋಶ

Sunday, 27.08.2017, 9:10 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಭಾನುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ

1.ತುಮಕೂರಲ್ಲಿ ಕಾನೂನು ಸಚಿವರ ದರ್ಪ- ಸಾಮೂಹಿಕ ಕಲ್ಯಾಣಕ್ಕಾಗಿ ಶಾಲಾ ಕಾಂಪೌಂಡ್​ ಧ್ವಂಸ- ಇದೇನಾ ಕಾನೂನು ಪಾಲಿಸೋ ಪರಿ..?
2.ಸೇತುವೆಗೆ ಮಂಜೂರಾದ ಹಣದಿಂದ ರಸ್ತೆ ನಿರ್ಮಾಣ- ಹಳ್ಳ ದಾಟಲು ಸೇತುವೆಯಿಲ್ಲದ ಜನ್ರ ಪರದಾಟ- ಶಾಸಕ ರಮೇಶ ಭೂಸನೂರ ಮೇಲೆ ಆರೋಪ
3.13 ವರ್ಷದಿಂದ ಕನಸಾಯ್ತು ಫುಡ್​ ಪಾರ್ಕ್​- ಕೋಟಿ ಕೋಟಿ ಮಂಜೂರಾದ್ರೂ ಆಗ್ತಿಲ್ಲ ಕಾಮಗಾರಿ- ಅಕ್ರಮವಾಗಿ ಸೈಟ್​ ನಿರ್ಮಿಸಿದ ಪ್ರಭಾವಿಗಳು
4.ವಿಘ್ನ ವಿನಾಶನಕ ವಿಸರ್ಜನೆಗೆ ಸಿಟಿ ಜನ ರೆಡಿ- ಸ್ಯಾಂಕಿ ಕೆರೆ, ಯಡಿಯೂರು ಕೆರೆಯಲ್ಲಿ ಸಕಲ ಸಿದ್ಧತೆ- ಈ ವರ್ಷ ಹೋಗಪ್ಪ ಮುಂದಿನ ವರ್ಷ ಬಾರಪ್ಪ

ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ- ವೈದ್ಯರ ವಿರುದ್ಧ ಪೋಷಕರ ಆಕ್ರೋಶ – ಕೋಲಾರದ ವೆಂಕಟೇಶ್ವರ ನರ್ಸಿಂಗ್​​​​​ ಹೋಂನಲ್ಲಿ ಘಟನೆ

ವೈದ್ಯರ ನಿರ್ಲಕ್ಷ್ಯಕ್ಕೆ 3 ತಿಂಗಳ ಹಸುಗೂಸು ಬಲಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ಗುಂಡರಾಹಳ್ಳಿ ಗ್ರಾಮದ ನಟರಾಜ ಮತ್ತು ಮಂಜುಳ ದಂಪತಿ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ವೆಂಕಟೇಶ್ವರ ನರ್ಸಿಂಗ್‌ ಹೋಂಗೆ ದಾಖಲಿಸಿದ್ದರು.

ಆದರೆ ನರ್ಸಿಂಗ್‌ ಹೋಂನ ವೈದ್ಯರು ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ನಿನ್ನೆ ಸಂಜೆ ಹೊತ್ತಲ್ಲಿ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಈ ಸಂಬಂಧ ಕೋಲಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top