Friday, 25th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ದಿಗ್ವಿಜಯ ಇಂಪ್ಯಾಕ್ಟ್​: ಮುರಿದಿದ್ದ ಸೇತುವೆ ತಡೆಗೋಡೆಗೆ ಮರುಜೀವ

Sunday, 17.09.2017, 9:03 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಭಾನುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಪ್ರಧಾನಿ ಮೋದಿಗಿಂದ 67ನೇ ಜನ್ಮದಿನದ ಸಂಭ್ರಮ- ತಾಯಿಯ ಆಶೀರ್ವಾದ ಪಡೆದ ಮೋದಿ- ದೇಶಾದ್ಯಂತ ಬೆಂಬಲಿಗರಿಂದ ಹುಟ್ಟುಹಬ್ಬ ಆಚರಣೆ

2. ಮಂಡ್ಯದಲ್ಲಿ ಬೆಂಬಲಿಗರಿಂದ ಸ್ವಚ್ಛತಾಕಾರ್ಯ- ಯುಪಿಯಲ್ಲಿ ಇಂದು ಶಾಲೆಗಳಲ್ಲಿ ಶುಚಿತ್ವದ ಅರಿವು- ಕೆಲವೇ ಕ್ಷಣಗಳಲ್ಲಿ ಸರ್ದಾರ್ ಡ್ಯಾಂ ಲೋಕಾರ್ಪಣೆ

3. ಮೋದಿ ಜನ್ಮದಿನ ಅರ್ಥಪೂರ್ಣ ಆಚರಣೆಗೆ ಸಿದ್ಧತೆ- ಮಳೆಯಿಂದ ಹಾನಿಗೊಳಗಾದವ್ರ ನೆರವು- ಬಡವರಿಗೆ ಬಿಎಸ್​​ವೈರಿಂದ ಅಕ್ಕಿವಿತರಣೆ

4. ನಮ್ಮೂರಿಗೆ ಡಾಂಬರ್​ ಕಾರ್ಖಾನೆ ಬೇಡ್ವೇಬೇಡ- ಪೇಯಿಂಟ್​ ಕೈಗಾರಿಕೆಗೆ ಜನರ ವಿರೋಧ- ರಕ್ತದಲ್ಲಿ ಪತ್ರ ಬರೆದ್ರು ಬಳ್ಳಾರಿಯ ಕುಡತಿನಿ ಜನ


5. ದಿಗ್ವಿಜಯ ಇಂಪ್ಯಾಕ್ಟ್​: ಮುರಿದಿದ್ದ ಸೇತುವೆ ತಡೆಗೋಡೆಗೆ ಮರುಜೀವ

ಬೀದರ್​: ದಿಗ್ವಿಜಯ ನ್ಯೂಸ್​ ವರದಿಯಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಮುರಿದು ಹೋಗಿದ್ದ ಬೀದರ್​ ಮತ್ತು ತೆಲಂಗಾಣ ನಡುವೆ ಇದ್ದ ಸೇತುವೆಯ ತಡೆಗೋಡೆಗಳನ್ನು ಮರು ನಿರ್ಮಾಣ ಮಾಡಿದೆ.

ಬೀದರ್​ನಿಂದ ತೆಲಂಗಣಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕೌಠಾ ಸೇತುವೆಯ ತಡೆಗೋಡೆಗಳು ಮುರಿದು ಹೋಗಿದ್ದವು. ಇದರಿಂದಾಗಿ ನಿತ್ಯ ಎಷ್ಟೋ ಪ್ರಯಾಣಿಕರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡೆ ಓಡಾಡುತ್ತಿದ್ದರು.

ಈ ಬಗ್ಗೆ ನಿಮ್ಮ ದಿಗ್ವಿಜಯ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಈ ಸೇತುವೆಯ ದುರಸ್ಥಿಕಾರ್ಯ ಆರಂಭಿಸಿದ್ದಾರೆ. ಲೊಕೋಪಯೋಗಿ ಇಲಾಖೆ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಪರಸ್ಥಿತಿ ಅವಲೋಕಿಸಿದ್ದಾರೆ. ನಂತರ ಮುರಿದ ಸೇತುವೆಯ ತಡೆಗೋಡೆಯನ್ನ ತಕ್ಷಣವೇ ದುರಸ್ಥಿ ಮಾಡುವ ಮೂಲಕ ಹೊಸದಾಗಿ ತಡೆ ಗೋಡೆ ನಿರ್ಮಿಸಿದ್ದಾರೆ.

ಅಲ್ಲದೇ, ಸೇತುವೆಯ ಹಾಳಾದ ಇತರ ಭಾಗಗಳನ್ನು ದುರಸ್ಥಿಮಾಡುವ ಕಾರ್ಯ ಭರದಿಂದ ಸಾಗಿದೆ. ಇನ್ನೂ ಸೇತುವೆ ಸಮಸ್ಯೆ ಕುರಿತು ಜಿಲ್ಲಾಡಳಿತ ಮತ್ತು ಸರ್ಕಾರದ ಗಮನ ಸೆಳೆದ ದಿಗ್ವಿಜಯ ನ್ಯೂಸ್ ಕಾರ್ಯಕ್ಕೆ ಬೀದರ್ ಮತ್ತು ಔರಾದ ಪ್ರಯಾಣಿಕರು ಅಭಿನಂದಿಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top