Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ದಿಗ್ವಿಜಯ ಇಂಪ್ಯಾಕ್ಟ್​​​: ಬೀದರ್​ನ​​​​​​​​​​​​ ಖೇಣಿರಂಜೋಳಾ ಗ್ರಾಮಸ್ಥರ ಸಮಸ್ಯೆಗೆ ಮುಕ್ತಿ

Friday, 01.09.2017, 9:16 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಶುಕ್ರವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಸಿಲಿಕಾನ್​ ಸಿಟಿಯಲ್ಲಿ ರಾತ್ರಿ ಇಡೀ ಮಳೆ – ಮೋಡ ಮುಸುಕಿದ ವಾತಾವರಣದಲ್ಲಿ ಜನರ ಕಾಯಕ- ಇಂದು,ನಾಳೆಯೂ ಮಳೆ ಸಾಧ್ಯತೆ

2. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ- ಜಾತಿ ಲೆಕ್ಕಾಚಾರದಲ್ಲಿ ಮೂವರ ಹೆಸ್ರು ಪರಿಗಣನೆ- ಗೃಹಖಾತೆ ಯಾರಿಗೆಂಬುದೇ ಕುತೂಹಲ

3. ಸಿಲಿಕಾನ್ ಸಿಟಿಯಲ್ಲಿ ಡೆಂಘೆ ಅಬ್ಬರ- ಪಾಲಿಕೆ, ಆರೋಗ್ಯ ಇಲಾಖೆ ನಡುವೆ ಇಲ್ಲ ಸಾಮ್ಯತೆ- ಸರ್ಕಾರಕ್ಕೆ ಯಾವ ಅಂಕಿ ಅಂಶ ನೀಡ್ತಾರೋ..?

4. ಮೇಕ್​​ ಮೈ ಟ್ರಿಪ್​​ನಲ್ಲಿ ಟಿಕೆಟ್​ ಬುಕ್​​- ಫ್ಲೈಟ್​ ಹತ್ತಿದ ವ್ಯಕ್ತಿಯ ಮೊಬೈಲ್​ ಸ್ವಿಚ್​​ ಆಫ್​​- ಖಾಸಗಿ ಕಂಪನಿಯ ಸಿಇಓ ನಿಗೂಢ ಕಣ್ಮರೆ

5. ಬೀದರ್​​​​​​​​​​​​ನ ಖೇಣಿರಂಜೋಳಾ ಗ್ರಾಮಸ್ಥರ ಸಮಸ್ಯೆಗೆ ಮುಕ್ತಿ- ಬೋಟ್​​ ಖರೀದಿ, ಬಿಡ್ಜ್​​​​​ಗೆ ಅನುದಾನ- ಇದು ದಿಗ್ವಿಜಯ ನ್ಯೂಸ್​ ಬಿಗ್​ ಇಂಪ್ಯಾಕ್ಟ್​​​


ದಿಗ್ವಿಜಯ ಇಂಪ್ಯಾಕ್ಟ್​​​: ಬೀದರ್​ನ​​​​​​​​​​​​ ಖೇಣಿರಂಜೋಳಾ ಗ್ರಾಮಸ್ಥರ ಸಮಸ್ಯೆಗೆ ಮುಕ್ತಿ

ಬೀದರ್: ಜಿಲ್ಲೆಯ ಖೇಣಿರಂಜೋಳಾ ಗ್ರಾಮಸ್ಥರು ನಿತ್ಯ ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ತೆಪ್ಪದ ಮೇಲೆ ನದಿ ದಾಟುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಪ್ರತಿ ದಿನ ಹೀಗೆ ನದಿ ದಾಟುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ಅವಘಡಗಳು ಸಂಭವಿಸಿವೆ.

ಈ ಬಗ್ಗೆ ಜುಲೈ 16 ರಂದು ತೆಪ್ಪದಲ್ಲಿ ಮುಳುಗಿ ಮಹಿಳೆ ಮೃತಪಟ್ಟಿದ್ದರ ಬಗ್ಗೆ ಹಾಗೂ ಗ್ರಾಮಸ್ಥರ ಕಣ್ಣೀರಿನ ಕಥೆ ಕುರಿತು ದಿಗ್ವಿಜಯ ನ್ಯೂಸ್ ವಿಸ್ಕೃತವಾದ ವರದಿ ಪ್ರಸಾರ ಮಾಡಿತ್ತು.

ತಕ್ಷಣವೇ ಎಚ್ಚೆತ್ತ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ ಖೇಣಿ ಖೇಣಿರಂಜೋಳಾ ಗ್ರಾಮದ ಜನರಿಗೆ ಶಾಶ್ವತ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಸದ್ಯ 3 ಲಕ್ಷ ರೂಪಾಯಿ ಖರ್ಚು ಮಾಡಿ ಹೊಸದೊಂದು ಬೋಟ್ ಖರೀದಿ ಮಾಡಿದ್ದು, ಜತೆಗೆ ನಬಾರ್ಡ್​ನಿಂದ 1 ಕೋಟಿ ರೂಪಾಯಿಯಲ್ಲಿ ಬ್ರಿಡ್ಜ್​ ನಿರ್ಮಿಸಲು ಶಾಸಕರು ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ.

ಹೀಗಾಗಿ 15 ದಿನಗಳಲ್ಲಿ ಹೊಸ ಬೋಟ್ ಹಾಗೂ ಆರು ತಿಂಗಳಲ್ಲಿ ಹೊಸ ಸೇತುವೆ ನಿಮಾರ್ಣಗೊಳ್ಳಲಿದೆ ಅಂತ ಶಾಸಕ ಖೇಣಿ ಹೇಳಿದ್ದಾರೆ. ಇದ್ರಿಂದ ಗ್ರಾಮದ ಹಲವು ವರ್ಷಗಳ ಸಮಸ್ಯೆಗೆ ಬ್ರೇಕ್​ ಬಿದ್ದಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top