Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :

ಮೊದಲ ಮದುವೆ ಮುಚ್ಚಿಟ್ಟು 2ನೇ ಮದುವೆ: ಪತ್ನಿಯಿಂದ ಪತಿಗೆ ಬಿತ್ತು ಗೂಸಾ

Thursday, 12.10.2017, 2:17 PM       No Comments

ಧಾರವಾಡ: ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾದ ಡಾಕ್ಟರ್​ ಗಂಡನಿಗೆ ಎರಡನೇ ಪತ್ನಿ ಹಿಗ್ಗಾ ಮುಗ್ಗಾ ಥಳಿಸಿ ಮಾನ ಹರಾಜು ಹಾಕಿರುವ ಘಟನೆ ಗುರುವಾರ ಧಾರವಾಡದ ಉಪನಗರ ಠಾಣೆ ಆವರಣದಲ್ಲಿ‌ ನಡೆದಿದೆ.

ವಿಡಿಯೋ ನೋಡಿ: ಠಾಣೆ ಆವರಣದಲ್ಲೇ ಪತಿ-ಪತ್ನಿ ಡಿಶುಂ ಡಿಶುಂ!

ಸಂತೋಷ್​ ಎಂಬಾತ ವಿಜಯಪುರದ ಮಹಿಳೆ ಜತೆ ಎರಡನೇ ವಿವಾಹವಾಗಿದ್ದ. ಮೊದಲ ಮದುವೆಯ ರಹಸ್ಯ ಮುಚ್ಚಿಟ್ಟು 2ನೇ ವಿವಾಹವಾಗಿದ್ದ. ಈ ವಿಷಯ ತಿಳಿದ ಪತ್ನಿ ಪತಿ ಸಂತೋಷ್​ನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾಳೆ. ಇದನ್ನ ಪ್ರಶ್ನಿಸಲು ಬಂದಿದ್ದ ಮಹಿಳೆಯ ಸಂಬಂಧಿಕರ ವಿರುದ್ಧ ಸಂತೋಷ್​ ದೂರು ದಾಖಲಿಸಿದ್ದ.

ಈ ಬಗ್ಗೆ ಮಾತನಾಡಲು ಇಂದು ಎರಡೂ ಕಡೆಯವರನ್ನ ಪೊಲೀಸರು ಠಾಣೆಗೆ ಕರೆಸಿದ್ದರು. ಈ ವೇಳೆ ಠಾಣೆ ಆವರಣದಲ್ಲೇ ಪತಿ-ಪತ್ನಿ ಬಡಿದಾಡಿಕೊಂಡಿದ್ದಾರೆ. ಇನ್ನು ವಿಚಾರಣೆಗೆ ಸಂತೋಷ್​ ರಿವಾಲ್ವಾರ್ ಇಟ್ಟುಕೊಂಡು ಬಂದಿದ್ದ. ಪತ್ನಿ ಬೆದರಿಸಲು ರಿವಾಲ್ವಾರ್ ಹಿಡಿದುಕೊಂಡ ಬಂದಿದ್ದ. ಆದರೆ, ಇಬ್ಬರು ಹೊಡೆದಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top