More

    ಧನ್ವಂತರಿ; ದೀರ್ಘ ಬದುಕಿಗೆ ರಸಾಯನ 

    ಧನ್ವಂತರಿ; ದೀರ್ಘ ಬದುಕಿಗೆ ರಸಾಯನ ರಸಾಯನವೆಂದರೆ ತಿಳಿಯದವರು ಯಾರಿದ್ದಾರೆ ಹೇಳಿ? ಮಾವಿನಹಣ್ಣಿನ ರಸಾಯನ, ಬಾಳೆಹಣ್ಣಿನ ರಸಾಯನ – ಹೀಗೆ ಬಾಯಲ್ಲಿ ನೀರೂರಿಸುವ ಹಣ್ಣಿನಿಂದ ತಯಾರಿಸುವ ರಸಾಯನಗಳ ಬಗ್ಗೆ ನಮಗೆ ಗೊತ್ತು. ಆದರೆ ಆಯುರ್ವೆದ ಹೇಳಿದ ರಸಾಯನ ಚಿಕಿತ್ಸೆ ಇವುಗಳಿಗೆ ಸಂಬಂಧಿಸಿದ್ದಲ್ಲ!

    ‘ರಸಾಯನಂ ತು ತಜ್ಞೇಯಂ ತಜ್ಜರಾವ್ಯಾಧಿ ನಾಶನಂ’ ಎಂಬುದಾಗಿ ಶಾಙರ್Yಧರ ಸಂಹಿತೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ. ರಸವೆಂದರೆ ದೇಹ-ಮನ ಪೋಷಕ ದ್ರವ್ಯಾಂಶ. ಅಯನ ಎಂದರೆ ಸರಿಯಾದ ಪೂರೈಕೆ. ಮುಪ್ಪು ಹಾಗೂ ರೋಗಗಳಿಂದ ದೂರವಾಗುವುದೇ ಅದರ ಮೂಲೋದ್ದೇಶ. ಆಯುರ್ವೆದದಲ್ಲಿ ಮುಪ್ಪಿನ ಚಿಕಿತ್ಸಾ ವಿಶೇಷವಾದ ‘ಜರಾ’ವನ್ನು ವೈದ್ಯಲೋಕದ ಎಂಟು ಅಂಗಗಳಲ್ಲಿ ಒಂದಾಗಿ ಸಾವಿರಾರು ವರ್ಷಗಳ ಪೂರ್ವದಲ್ಲೇ ಪರಿಗಣಿಸಿದ್ದು ಈಗ ಇತಿಹಾಸ.

    ಧನ್ವಂತರಿ; ದೀರ್ಘ ಬದುಕಿಗೆ ರಸಾಯನ ಆಧುನಿಕವಾಗಿ ‘ಜೀರಿಯಾಟ್ರಿಕ್ಸ್’ ಎಂಬ ಪದವನ್ನು ಅಮೆರಿಕದ ಇಗ್ನೆಟಿ ನಾಶೆರ್ ಎಂಬವನು ಕ್ರಿ.ಶ. 1909ರಲ್ಲಷ್ಟೇ ಹುಟ್ಟುಹಾಕಿದ್ದು, 1988ರಿಂದ ವೈದ್ಯಕೀಯ ಕ್ಷೇತ್ರದ ಅಂಗವಾಗಿ ಮನ್ನಣೆ ಪಡೆಯಿತು. ಈಗ ವಿಶ್ವದಾದ್ಯಂತ ಅತಿ ವೇಗವಾಗಿ ಬೆಳೆಯುತ್ತಿರುವುದೂ ದಿಟ. ಭಾರತದ ಪ್ರಾಚೀನ ಋಷಿಗಳ ದೂರದೃಷ್ಟಿ ಹೇಗಿತ್ತೆಂಬುದನ್ನು ತಿಳಿಹೇಳಲು ಬೇರಿನ್ನಾವ ನಿದರ್ಶನಗಳೂ ಬೇಕಿಲ್ಲ.

    ಚರಕಸಂಹಿತೆಯ ಪ್ರಥಮ ಅಧ್ಯಾಯದ ಹೆಸರೇ ‘ದೀರ್ಘಂ ಜೀವಿತವ್ಯಂ’ ಎಂಬುದಾಗಿದ್ದು ಅಷ್ಟಾಂಗಸಂಗ್ರಹ ಗ್ರಂಥದ ಮೊದಲ ಅಧ್ಯಾಯವೂ ‘ಆಯುಷ್ಕಾಮೀಯ’ ಎಂಬ ಹೆಸರಿನಿಂದ ಇದ್ದು ಇವೆರಡೂ ಜೀವಿತಾವಧಿಯನ್ನು ವೃದ್ಧಿಗೊಳಿಸಿ ಬಲಗೊಳಿಸುವುದನ್ನೇ ತಿಳಿಹೇಳುತ್ತವೆ. ಆಯುರ್ವೆದ ಇದಕ್ಕೆ ನೀಡಿದ ಪ್ರಾಮುಖ್ಯತೆ ಎಷ್ಟೆಂಬುದನ್ನು ಇವು ತೋರಿಸಿಕೊಡುತ್ತವೆ.

    ಜೀವನವು ಹಿತವಾಗಿಯೂ ಸುಖವಾಗಿಯೂ ಇರಬೇಕೆಂದಾಗಲೂ ಹಿತಾಯು ಎಂದರೆ ಸ್ವಸ್ಥಜೀವನವಾಗಿದ್ದು ದೈಹಿಕ ಆರೋಗ್ಯದ ಪ್ರತಿಬಿಂಬ. ಸುಖಾಯು ಎಂದರೆ ಖುಷಿಯ ಬದುಕಾಗಿದ್ದು ಮಾನಸಿಕ ಸ್ವಾಸ್ಥ್ಯ ಪ್ರತೀಕ. ಹೀಗೆ ದೈಹಿಕ ಮಾನಸಿಕ ಸ್ವಾಸ್ಥ್ಯನ್ನು ಇವೆರಡು ಪದಗಳಲ್ಲೇ ಹಿಡಿದಿಟ್ಟು ಅನಾದಿಕಾಲದಿಂದಲೂ ಪ್ರತಿಪಾದಿಸಿಕೊಂಡು ಬಂದಿರುವುದನ್ನು ಹಿಂತಿರುಗಿ ನೋಡಿದರೆ ಪೂರ್ವಜರ ಬಗ್ಗೆ ಹೆಮ್ಮೆಯಾಗುತ್ತದೆ.

    ಅಥರ್ವವೇದದಲ್ಲಿರುವ ದೀರ್ಘಾಯು ಮಂತ್ರಸಂಗ್ರಹವು ದೀರ್ಘಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಕಾಲಘೊಷ ಎಂಬ ಋಷಿಪತ್ನಿಯು ಜರಾನಿಗ್ರಹದ ಬಗ್ಗೆ ದೇವವೈದ್ಯರಾದ ಅಶ್ವಿನಿಕುಮಾರರಿಂದ ಉಪದೇಶ ಪಡೆದ ಉಲ್ಲೇಖವೂ ಇದೆ. ಬ್ರಹ್ಮಪುರಾಣದಲ್ಲಿ ಜರಾದ ಬಗ್ಗೆ ಮಾಹಿತಿಯಿದೆ. ಚ್ಯವನಮಹರ್ಷಿಯು ಸುದೀರ್ಘ ಜೀವನಕ್ಕಾಗಿ ಚ್ಯವನಪ್ರಾಶವನ್ನು ಅರುಹಿದ ಕಥೆಯಂತೂ ಜನಜನಿತ.

    ಚರಕಸಂಹಿತೆಯಲ್ಲಿ ಮಂದಜರಾ, ಚಿರಾಯು ಎಂಬೆರಡನ್ನು ಜೀವನಪೂರ್ತಿ ಆರೋಗ್ಯದಿಂದಿರುವ ಸರ್ವಸಾರ ಪುರುಷರ ಲಕ್ಷಣಗಳಾಗಿ ಹೇಳಲಾಗಿದೆ! ರಸಾಯನ ಚಿಕಿತ್ಸೆಯಿಂದ ದೀರ್ಘಾಯು, ಜ್ಞಾಪಕಶಕ್ತಿ, ಬುದ್ಧಿಶಕ್ತಿ, ಆರೋಗ್ಯ, ತರುಣ ವಯಸ್ಸು, ಶರೀರದಲ್ಲಿ ಕಳೆ, ಉತ್ತಮ ಬಣ್ಣ, ಸ್ವರ, ದೇಹಬಲ, ಇಂದ್ರಿಯಬಲ, ಸ್ಪುಟವಾದ ಮಾತು, ಕಾಂತಿ, ಲೋಕವಂದನೆ ಹಾಗೂ ಉತ್ತಮ ಧಾತುಗಳು ಫಲಿಸುತ್ತದೆ ಎಂದು ಆಯುರ್ವೆದ ಹೇಳಿದೆ. ಅರ್ಥಪೂರ್ಣ ಬದುಕಿಗೆ ಇನ್ನೇನು ಬೇಕು?

    ಧನ್ವಂತರಿ; ದೀರ್ಘ ಬದುಕಿಗೆ ರಸಾಯನ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts