Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಎಲ್ಲಮ್ಮನ ಸನ್ನಿಧಿ ಜಲಾವೃತ: ದೇವಿ ದರ್ಶನಕ್ಕೆ ಈಜಿಕೊಂಡು ಹೋಗ್ತಿರೋ ಭಕ್ತರು!

Thursday, 12.10.2017, 10:48 AM       No Comments

ಬೆಳಗಾವಿ: ಮಳೆರಾಯನ ಆರ್ಭಟಕ್ಕೆ ಜನ ಸಾಮಾನ್ಯರು ಮಾತ್ರ ತೊದರೆಗೆ ಒಳಗಾಗಿಲ್ಲ. ಬದಲಾಗಿ ದೇವರು ಕೂಡ ಮಳೆರಾಯನ ಕೋಪಾ ತಾಪಕ್ಕೆ ಗುರಿಯಾಗಿದ್ದಾನೆ.

ವಿಡಿಯೋ ನೋಡಿ: ಎಲ್ಲಮ್ಮನ ಸನ್ನಿಧಿ ಜಲಾವೃತ: ದೇವಿ ದರ್ಶನಕ್ಕೆ ಈಜಿಕೊಂಡು ಹೋಗ್ತಿರೋ ಭಕ್ತರು!

ಹೌದು, ನಿನ್ನೆ ಬೆಳಗಾವಿ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರಿನಲ್ಲಿರೋ ಎಲ್ಲಮ್ಮ ದೇವಿ ಸನ್ನಿಧಿ ಸಂಪೂರ್ಣ ಜಲಾವೃತಗೊಂಡಿದೆ.

ದೇವಾಲಯದ ಒಳಗಡೆಯೆಲ್ಲಾ ನೀರು ನುಗ್ಗಿರೋದ್ರಿಂದ ದೇವರ ದರ್ಶನ ಪಡೆಯಲು ಭಕ್ತರ ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಕೆಲವು ಭಕ್ತರು ಮಳೆಗೂ ಹೆದರದೆ ಈಜಿಕೊಂಡು ಹೋಗಿ ದೇವಿ ದರ್ಶನ ಮಾಡಿಕೊಂಡು ಬರುತ್ತಿದ್ದಾರೆ.

ಇನ್ನು ದೇವಸ್ಥಾನ ಮಾತ್ರವಲ್ಲದೆ ಪಕ್ಕದಲ್ಲಿರುವ 15 ಕ್ಕೂ ಹೆಚ್ಚು ಅಂಗಡಿಗಳಿಗೆ ಮಳೆ ನೀರು ನುಗ್ಗಿ ಅಂಗಡಿ ಮುಂಗಟ್ಟುದಾರರು ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top