Wednesday, 17th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ಮಕರಜ್ಯೋತಿ ದರ್ಶನ: ಶಬರಿಮಲೆಯಲ್ಲಿ ಭಕ್ತ ಪ್ರವಾಹ

Friday, 12.01.2018, 7:23 PM       No Comments

ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಪುಣ್ಯ ಮಕರಜ್ಯೋತಿ ದರ್ಶನಕ್ಕೆ 2 ದಿನ ಮಾತ್ರ ಬಾಕಿ ಉಳಿದಿರುವಂತೆ ಭಕ್ತರ ದಟ್ಟಣೆ ಹೆಚ್ಚಾಗತೊಡಗಿದೆ. ಅಯ್ಯಪ್ಪ ಸನ್ನಿಧಾನ ತಲುಪಿರುವ ಭಕ್ತರು ದಿವ್ಯ ಮಕರ ಜ್ಯೋತಿಯ ದರ್ಶನಕ್ಕಾಗಿ ಶಬರಿಮಲೆ ಬೆಟ್ಟಗಳ ಮೇಲೆ ಬಿರಿಗಳನ್ನು ನಿರ್ವಿುಸಿ ವಾಸ್ತವ್ಯ ಹೂಡಲಾರಂಭಿಸಿದ್ದಾರೆ.

ಪಂದಳ ಅರಮನೆಯಿಂದ ಚಿನ್ನಾಭರಣಗಳು ಭವ್ಯ ಮೆರವಣಿಗೆ ಮೂಲಕ ಜ.14ರಂದು ಸನ್ನಿಧಾನ ತಲುಪಲಿದ್ದು, ಆಭರಣ ಶ್ರೀದೇವರಿಗೆ ತೊಡಿಸಿ ದೀಪಾರಾಧನೆ ನಡೆಸಿದ ನಂತರ ದಿವ್ಯ ಜ್ಯೋತಿ ದರ್ಶನವಾಗಲಿದೆ. ಭಕ್ತರು ಮಕರಜ್ಯೋತಿ ದರ್ಶನಕ್ಕಾಗಿ ನಿಲ್ಲುವ ಸ್ಥಳಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಡೆಸಲಾಗುತ್ತಿದೆ.

19ರಂದು ದರ್ಶನ ಮುಕ್ತಾಯ: ಮಕರ ಜ್ಯೋತಿ ದರ್ಶನ ಕಾಲಾವಧಿ ಜ.19ರಂದು ಪೂರ್ಣಗೊಳ್ಳಲಿದೆ. ಅಂದು ಸಾಯಂಕಾಲ 5ಕ್ಕೆ ಮೊದಲು ಪಂಪೆಗೆ ತಲುಪುವವರಿಗೆ ಮಾತ್ರ ಶ್ರೀದೇವರ ದರ್ಶನ ಭಾಗ್ಯ ಲಭಿಸಲಿದೆ. ರಾತ್ರಿ 9.30ಕ್ಕೆ ಅತ್ತಾಳ ಪೂಜೆ ನಡೆಯಲಿದ್ದು, ನಂತರ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಮಕರಜ್ಯೋತಿ ಉತ್ಸವ ಪೂರ್ತಿಗೊಳ್ಳಲಿದೆ. ಭಕ್ತರಿಗೆ ಜ.18ರಂದು ಬೆಳಗ್ಗೆ 9.30ರವರೆಗೆ ಮಾತ್ರ ತುಪ್ಪಾಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

Back To Top