Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಸಲಿಂಗಕಾಮ ನಿರ್ಬಂಧ ರದ್ದುಗೊಳಿಸುವ ಸೂಚನೆ ನೀಡಿದ ಸುಪ್ರೀಂಕೋರ್ಟ್

Wednesday, 11.07.2018, 7:17 PM       No Comments

ನವದೆಹಲಿ: ಸಲಿಂಗಕಾಮವನ್ನು ನಿರ್ಬಂಧಿಸುವ ಸೆಕ್ಷನ್​ 377 ಅನ್ನು ರದ್ದುಗೊಳಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್​ನ ವಿವೇಚನೆಗೆ ಬಿಟ್ಟಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಇದರ ಬೆನ್ನಿಗೇ, ಸಲಿಂಗ ಕಾಮವನ್ನು ಅಪರಾಧದ ಪಟ್ಟಿಯಿಂದ ಹೊರತರುವ ಮುನ್ಸೂಚನೆಯನ್ನೂ ಸರ್ವೋಚ್ಚ ನ್ಯಾಯಾಲಯ ನೀಡಿದೆ.

” ಸೆಕ್ಷನ್​ 377 ಅನ್ನು ರದ್ದುಗೊಳಿಸಿದ್ದೇ ಆದರೆ ಸಾಮಾಜಿಕವಾಗಿ ಮತ್ತು ವೃತ್ತಿಯಲ್ಲಿ ಎಲ್​ಜಿಬಿಟಿ (ಪುರುಷ ಮತ್ತು ಸ್ತ್ರೀ ಸಲಿಂಗಿಗಳು, ಉಭಯಲಿಂಗಿಗಳು, ತೃತೀಯಲಿಂಗಿಗಳು ) ಸಮುದಾಯ ಎದುರಿಸುತ್ತಿರುವ ತಾರತಮ್ಯವೂ ಕೊನೆಗೊಳ್ಳಲಿದೆ. ಅಲ್ಲದೆ, ಸಮಾಜದಲ್ಲಿ ಅವರು ಪೂರ್ಣ ಪ್ರಮಾಣದ ಬದುಕು ನಡೆಸಲು ಅವಕಾಶ ಸಿಗಲಿದೆ,” ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಈ ಮೂಲಕ ಸಲಿಂಗ ಕಾಮವನ್ನು ನಿರ್ಬಂಧಿಸುವ ಸೆಕ್ಷನ್​ 377 ಅನ್ನು ರದ್ದುಗೊಳಿಸುವ ಮೂನ್ಸೂಚನೆಯನ್ನೂ ನೀಡಿದೆ.

ಇದಕ್ಕೂ ಮೊದಲು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದ ಕೇಂದ್ರ ಸರ್ಕಾರ, “ಸೆಕ್ಷನ್​ 377ರ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಲಯದ ವಿವೇಚನೆಗೇ ಬಿಡಲಾಗಿದೆ,” ಎಂದು ಕೇಂದ್ರ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಕೋರ್ಟ್​ನ ಗಮನಕ್ಕೆ ತಂದರು.

“ಇಬ್ಬರು ಪ್ರಾಪ್ತ ವೈಯಸ್ಕರು ಅಸಹಜ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವುದು ಅಪರಾಧ ಎನಿಸಿಕೊಳ್ಳುವುದಿಲ್ಲ. ಇದನ್ನು ನಿರ್ಬಂಧಿಸಲು ಇರುವ ಕಾನೂನನ್ನು ತೊಡೆದು ಹಾಕಿದರೆ ಎಲ್​ಜಿಬಿಟಿ ಸಮುದಾಯ ಸಮಾಜದಲ್ಲಿ ನಿರುಮ್ಮಳವಾಗಿ ಬದುಕು ನಡೆಸಲಿದೆ. ಅಲ್ಲದೆ, ಯಾವುದೇ ತೊಡಕಿಲ್ಲದೆ ಚುನಾವಣೆಗಳಲ್ಲಿಯೂ ಸ್ಪರ್ಧಿಸಬಹುದಾಗಿದೆ,” ಎಂದು ಅಭಿಪ್ರಾಯಪಟ್ಟಿತು.

Leave a Reply

Your email address will not be published. Required fields are marked *

Back To Top