Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ನಾಗಬೇನಾಳ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ

Wednesday, 07.03.2018, 1:04 AM       No Comments

<<ಭುಗಿಲೆದ್ದ ಆಕ್ರೋಶ | ಕಾಮುಕರಿಗೆ ಗಲ್ಲು ಶಿಕ್ಷೆಗೆ ಒತ್ತಾಯ>>

ನಾಲತವಾಡ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ನಾಗಬೇನಾಳ ಗ್ರಾಮದ ಬಾಳೆ ತೋಟದಲ್ಲಿ ಮಂಗಳವಾರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಘಟನೆ ವಿವರ

ನಾಗಬೇನಾಳ ಗ್ರಾಮದ ಏಳು ಸುತ್ತಿನ ಕೋಟೆ ಹಿಂಬದಿ ಬಾಳೆ ತೋಟವೊಂದಿದೆ. ಅತ್ಯಾಚಾರಕ್ಕೊಳಗಾದ ಬಾಲಕಿ ಕುಟುಂಬ ಸಮೇತ ತೋಟದಲ್ಲೆ ವಾಸಿಸುತ್ತಿದ್ದರು. 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದಾಗ ಕಾಮುಕರು ಆಕೆಯನ್ನು ಬಾಳೆ ತೋಟಕ್ಕೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.

ಕಿರುಚಾಟ ಗಮನಿಸಿದ ತಂದೆ

ಬಾಲಕಿಯ ಕಿರುಚಾಟ ಗಮನಿಸಿದ ಬಾಲಕಿ ತಂದೆ ಓಡಿ ಬಂದಿದ್ದಾರೆ. ಇದನ್ನು ಕಂಡ ಗುಂಪಿನಲ್ಲಿದ್ದ ಮೂವರು ಓಡಿ ಹೋಗಿದ್ದಾರೆ. ವೀರೇಶ ಕಂದಗಲ್ ಎಂಬ ಕಾಮುಕ ಸಿಕ್ಕಿ ಬಿದ್ದಿದ್ದಾನೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪ್ರತಿಭಟನೆ: ಗ್ರಾಮದಲ್ಲಿ ಅತ್ಯಾಚಾರ ಸುದ್ದಿ ತಿಳಿಯುತ್ತಿದ್ದಂತೆ ನಾಗಬೇನಾಳ, ವೀರೇಶನಗರ ಹಾಗೂ ಆರೇಶಂಕರ ಗ್ರಾಪಂ ಸದಸ್ಯರಾದ ಭೀಮಣ್ಣ ಗುರಿಕಾರ ಹಾಗೂ ಅಹಿಂದ ತಾಲೂಕು ಪ್ರಧಾನ ಕಾರ್ಯದರ್ಶಿ ಮೌನೇಶ ಮಾದರ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು. ಪ್ರತಿಭಟನಾಕಾರರು ನಾರಾಯಣಪುರ-ನಾಲತವಾಡ ಮುಖ್ಯರಸ್ತೆ ಸಂಚಾರ ಸ್ಥಗಿತಗೊಳಿಸಿ ಟಯರ್​ಗೆ ಬೆಂಕಿ ಹೆಚ್ಚಿ ಅತ್ಯಾಚಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರೊಂದಿಗೆ ವಾಗ್ವಾದ: ಮುದ್ದೇಬಿಹಾಳ ಸಿಪಿಐ ರವಿಕುಮಾರ ಕಪತ್ತನವರ್ ಹಾಗೂ ಪಿಎಸ್​ಐ ಗೋವಿಂದಗೌಡ ಪಾಟೀಲ, ನಾಲತವಾಡ ಹೊರಠಾಣೆಯ ಮುಖ್ಯಪೇದೆ ಎಸ್.ಎಸ್. ಪಾಟೀಲ, ಎ.ವೈ.ಸಾಲಿ ಸ್ಥಳಕ್ಕಾಗಮಿಸಿ ಪ್ರತಿಭಟನೆ ಹಿಂಪಡೆಯುವಂತೆ ಪ್ರತಿಭಟನಾಕಾರರ ಮನವೊಲಿಸುತ್ತಿದ್ದ ವೇಳೆ ಗ್ರಾಮಸ್ಥರು ಪೊಲೀಸರೊಂದಿಗೆ ವಾದಕ್ಕಿಳಿದರು. ಕಾಮುಕರಿಗೆ ಗಲ್ಲು ಶಿಕ್ಷೆ ನೀಡುತ್ತೇವೆಂದು ನಮಗೆ ಲಿಖಿತ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುತ್ತೇವೆ ಎಂದು ಪಟ್ಟು ಹಿಡಿದರು.

ಪೊಲೀಸರ ಮನವೊಲಿಕೆ: ಸಿಪಿಐ ರವಿಕುಮಾರ ಕಪತ್ತನವರ್ ಮಾತನಾಡಿ, ತನಿಖೆ ನಡೆಸಿ ಕಾಮುಕರನ್ನು ಸರ್ಕಾರಕ್ಕೆ ಒಪ್ಪಿಸುತ್ತೇವೆ. ಸದ್ಯ ತಾವು ಹಮ್ಮಿಕೊಂಡ ಪ್ರತಿಭಟನೆಯಿಂದ ರಸ್ತೆ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಪ್ರತಿಭಟನೆ ಕೈಬಿಡಿ ಎಂದರು. ಅದಕ್ಕೆ ಸ್ಪಂದಿಸಿದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ಕಾಮುಕ ಪೊಲೀಸರ ವಶಕ್ಕೆ: ಅತ್ಯಾಚಾರಗೈದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಆರೋಪಿ ವೀರೇಶ ಕಂದಗಲ್​ನನ್ನು ನಾಲತವಾಡ ಪೊಲೀಸ್ ಹೊರಠಾಣೆ ಪಿಎಸ್​ಐ ಗ್ರಾಮಸ್ಥರೊಂದಿಗೆ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಒಪ್ಪಿಸಿದರು.

ಘಟನಾ ಸ್ಥಳಕ್ಕೆ ಎಸ್ಪಿ ಸಿಂಗ್ ಭೇಟಿ

ನಾಗಬೇನಾಳ ಗ್ರಾಮದ ಬಾಳೆ ತೋಟದಲ್ಲಿ ಮಂಗಳವಾರ ನಡೆದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಕುಲದೀಪ ಜೈನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್​ಐ ಗೋವಿಂದಗೌಡ ಪಾಟೀಲ, ಎಎಸ್​ಐ ಎಸ್.ಬಿ.ನ್ಯಾಮಣ್ಣವರ, ಮುಖ್ಯಪೇದೆ ಎ.ಎಸ್.ಪಾಟೀಲ, ಎ.ವೈ. ಸಾಲಿ ಅವರಿಂದ ಮಾಹಿತಿ ಪಡೆದರು.

ಅತ್ಯಾಚಾರ ನಡೆದ ತೋಟ ಪರಿಶೀಲಿಸಿದ ಎಸ್ಪಿ ಜೈನ್ , ತೋಟದ ಸುತ್ತ ಯಾರೂ ಪ್ರವೇಶಿಸದಂತೆ ಕೆಂಪು ರಿಬ್ಬನ್ ಸುತ್ತಲು ಸೂಚಿಸಿದರು. ಆರೋಪಿಗಳು ಯಾರೇ ಆಗಿರಲಿ ಅವರ ಪತ್ತೆಗಾಗಿ ಜಾಲ ಬೀಸಬೇಕು. ತಂಡಗಳನ್ನು ರಚಿಸಿ ಗ್ರಾಮದಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸಿ ಶೀಘ್ರ ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಪೊಲೀಸರಿಗೆ ಸೂಚಿಸಿದರು.

Leave a Reply

Your email address will not be published. Required fields are marked *

Back To Top