Thursday, 22nd February 2018  

Vijayavani

ಗೃಹ ಸಚಿವ ಹೆಸ್ರಲ್ಲಿ ಬೇನಾಮಿ ಆಸ್ತಿ ವಿಚಾರ- ವಿಧಾಸಭೆಯಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ ನ್ಯೂಸ್‌ ವರದಿ- ರಾಮಲಿಂಗಾರೆಡ್ಡಿ ರಾಜೀನಾಮೆಗೆ ಶೆಟ್ಟರ್‌ ಆಗ್ರಹ        ಗೃಹ ಸಚಿವರ ವಿರುದ್ಧ ಬೇನಾಮಿ ಆಸ್ತಿ ವಿಚಾರ- ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ- ರಾಮಲಿಂಗಾರೆಡ್ಡಿಗೆ ಕಂಟಕವಾಗುತ್ತಾ ಪ್ರಕರಣ        ಬಟ್ಟೆ ಬಿಚ್ಚಿಸಿ ರೌಡಿಗಳನ್ನ ಮೆರವಣಿಗೆ ಮಾಡಿಸ್ತೀನಿ- ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ತಿನಿ- ಮೊದಲು ಅಬ್ಬರಿಸಿ ತಣ್ಣಗಾದ ಶಾಸಕ ಸೋಮಶೇಖರ್‌        ಕಾಂಗ್ರೆಸ್ ಗೂಂಡಾಗಳಿಂದ ಪಕ್ಷಕ್ಕೆ ಡ್ಯಾಮೇಜ್- ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್- ಘಟನೆ ಮಾಹಿತಿ ಪಡೆದ ಸೋನಿಯಾ, ರಾಹುಲ್        ಪುಟ್ಟಣ್ಣಯ್ಯ ಅಂತಿಮಯಾತ್ರೆಗೆ ಸಿದ್ದತೆ- ಮಾಜಿ ಪ್ರಧಾನಿ ಎಚ್‌ಡಿಡಿಯಿಂದ ಅಂತಿಮ ದರ್ಶನ- ರೈತ ನಾಯಕನ ಅಂತ್ಯಸಂಸ್ಕಾರಕ್ಕೆ 30 ಜಿಲ್ಲೆಗಳಿಂದ ಮಣ್ಣು       
Breaking News

ಬೆಳ್ಳಂಬೆಳಗ್ಗೆ ಟಂಟಂ-ಲಾರಿ ನಡುವೆ ಭೀಕರ ಅಪಘಾತ: ಮೂವರ ಸಾವು

Monday, 04.09.2017, 7:08 AM       No Comments

ರಾಯಚೂರು: ಬೆಳ್ಳಂಬೆಳಗ್ಗೆಯೇ ಟಂಟಂ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಬಳಿ‌ ನಡೆದಿದೆ.

ಕುಷ್ಟಗಿ ತಾಲೂಕಿನ ಕನ್ನಾಳ ಗ್ರಾಮದ ಮೌಲಪ್ಪ(40), ಯಮನೂರು(44), ಸಂಗನಾಳ ಗ್ರಾಮದ ಗಣಪತಿ ಬಾಲಪ್ಪ ಹಾಗೂ 10 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ನಾಲ್ಕು ಜನ ತೀವ್ರವಾಗಿ ಗಾಯಗೊಂಡಿದ್ದು ತಾವರಗೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಾಳದಿಂದ ಸಿಂಧನೂರಿಗೆ ಕುರಿ ಸಂತೆಗೆ ಬರುತ್ತಿದ್ದ ಟಂಟಂ ತೌಡು ತುಂಬಿಕೊಂಡು ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ತುರುವಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *

Back To Top