Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ಒಳಚರಂಡಿ ಕಾರ್ಮಿಕನ ಸಂತ್ರಸ್ತ ಬಾಲಕನ ಅಳಲು ನೋಡಿ ಜನರು ನೀಡಿದ 57 ಲಕ್ಷ ರೂ. ಅವನಿಗೆ ದಕ್ಕುವುದೇ?

Saturday, 22.09.2018, 5:00 PM       No Comments

ನವದೆಹಲಿ: ಒಳಚರಂಡಿ ಕೆಲಸಗಾರನಾಗಿದ್ದ ಅನಿಲ್‌ ಅಂತ್ಯ ಸಂಸ್ಕಾರದ ವೇಳೆ ತೀವ್ರ ಶೋಕದಲ್ಲಿ ಮುಳುಗಿದ್ದ ಬಾಲಕನ ಫೋಟೊವನ್ನು ಭಾನುವಾರ ವರದಿಗಾರನೊಬ್ಬ ಟ್ವಿಟರ್‌ನಲ್ಲಿ ಹಾಕುತ್ತಿದ್ದಂತೆ ಕುಟುಂಬದ ಸಂಕಷ್ಟಕ್ಕೆ ಹಲವಾರು ಜನರು ಸ್ಪಂದಿಸಿದ್ದು, 57 ಲಕ್ಷ ರೂ.ಗಳನ್ನು ಸಹಾಯಹಸ್ತ ಚಾಚಿದ್ದಾರೆ.

11 ವರ್ಷದ ಬಾಲಕ ಅಳುತ್ತಾ ಮೃತ ಅನಿಲ್‌ನನ್ನು ಅಪ್ಪಾ ಎಂದು ಕರೆದಿದ್ದ ಕುರಿತು ಫೋಟೊದಲ್ಲಿದ್ದನ್ನು ಎನ್‌ಜಿಒ ಉದಯ್‌ ಫೌಂಡೇಶನ್‌ ಮತ್ತು ಕ್ರೌಡ್‌ ಫಂಡಿಂಗ್‌ ಪೋರ್ಟಲ್‌ ಕೆಟ್ಟೊ ಬಾಲಕನ ಹೆಸರಲ್ಲಿ ಖಾತೆಯೊಂದನ್ನು ತೆರೆದಿತ್ತು. ಗುರುವಾರದ ಸಂಜೆ ವೇಳೆಗೆ 2,594 ಜನರು ಬಾಲಕನ ಸಹಾಯಕ್ಕೆ ನಿಂತಿದ್ದರು.

ಇದರ ಬೆನ್ನಲ್ಲೇ ಗುರುವಾರವಷ್ಟೇ ಅನಿಲ್‌ ಪಾಲಕರು ತಮ್ಮ ಮಗ ಮದುವೆಯಾಗಿರಲಿಲ್ಲ. ಅವನು ಜತೆಗಿದ್ದ ಆ ಮಹಿಳೆ ಅವನ ಹೆಂಡತಿಯಾಗಿರಲಿಲ್ಲ. ಆಕೆ ಆತನ ಸಂಬಂಧಿಯಾಗಿದ್ದು, ಆ ಫೋಟೊದಲ್ಲಿರುವ ಹುಡುಗ ಅವನ ಮಗನಲ್ಲ ಎಂದು ತಿಳಿಸಿದ್ದಾರೆ.
ಒಟ್ಟಿಗೆ ವಾಸಿಸುತ್ತಿದ್ದರು

ನೆರೆಹೊರೆಯವರು ಮತ್ತು ಸಹ ಕೆಲಸಗಾರರು ಹೇಳುವಂತೆ, ಅನಿಲ್‌ ಮತ್ತು ಮಹಿಳೆಯು ಮೂವರು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರು.ಕಳೆದ ಮೂರು ವರ್ಷಗಳಿಂದಲೂ ಕುಟುಂಬದಂತೆಯೇ ವಾಸಿಸುತ್ತಿದ್ದರು. ಆ ಹುಡುಗ ಅನಿಲ್‌ನ ಮಗನಾಗಿರದಿದ್ದರೂ ಆತನನ್ನು ಅಪ್ಪನಂತೆ ಹಚ್ಚಿಕೊಂಡಿದ್ದ, ಆ ಕುಟುಂಬವು ಕೂಡ ಅನಿಲ್‌ ಮೇಲೆ ಅವಲಂಬಿತವಾಗಿತ್ತು ಎಂದು ತಿಳಿಸಿದ್ದಾರೆ.

ಅನಿಲ್‌ ಸ್ನೇಹಿತ ವಿರೇಂದ್‌ ಹೇಳುವಂತೆ, ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಿದ್ದೇನೆ ಮತ್ತು ಆ ಮಕ್ಕಳನ್ನು ತನ್ನ ಮಕ್ಕಳಂತೆಯೇ ನೋಡುತ್ತಿದ್ದೇನೆ ಎಂದು ಅನಿಲ್‌ ಹೇಳಿದ್ದ ಎನ್ನುತ್ತಾರೆ.

ಅನಿಲ್‌ ವಾಸವಿದ್ದ ಮನೆ ಮಾಲಿಕ ರಾಮೋ ಮಾತನಾಡಿ, ಅವರಿಬ್ಬರು ಮೂರು ವರ್ಷದ ಹಿಂದೆ ಬಾಡಿಗೆಗೆಂದು ಮನೆ ತೆಗೆದುಕೊಂಡಿದ್ದರು. ಆದರೆ ಕೆಲವೇ ತಿಂಗಳುಗಳ ಹಿಂದಷ್ಟೇ ಗಂಡ-ಹೆಂಡತಿ ರೀತಿಯಲ್ಲಿ ವಾಸಿಸುತ್ತಿದ್ದರು. ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವಂತೆ ತಿಳಿಸಿದ್ದೆ. ಅದಾದ ತಿಂಗಳ ನಂತರ ಮತ್ತೆ ಬಂದು ಮನೆ ನೀಡುವಂತೆ ಬೇಡಿಕೊಂಡಿದ್ದರಿಂದ ಮತ್ತೆ ಮನೆ ನೀಡಿದ್ದೆ ಎಂದು ತಿಳಿಸಿದ್ದಾರೆ.
ಶೀಘ್ರವೇ ಮದುವೆಯಾಗಲು ನಿರ್ಧರಿಸಿದ್ದೆವು

ಈ ಕುರಿತು ಮಾತನಾಡಿರುವ ಮಹಿಳೆ, ನನ್ನ ಕುಡುಕ ಗಂಡನಿಂದ ಮನೆಯಿಂದ ಹೊರದಬ್ಬಲ್ಪಟ್ಟ ನಂತರ ನಾನು ಮತ್ತು ಅನಿಲ್‌ ಮತ್ತು ಮೂರು ಮಕ್ಕಳು ಒಟ್ಟಿಗೆ ವಾಸವಿದ್ದೆವು. ನನ್ನ ಗಂಡ ಕುಡಿದು ಮನೆಗೆ ಬಂದು ನನ್ನ ಮತ್ತು ಮಕ್ಕಳನ್ನು ಪ್ರತಿನಿತ್ಯ ಹೊಡೆಯುತ್ತಿದ್ದ. ಒಂದು ದಿನ ಮನೆಯಿಂದ ಹೊರಬಂದು ಬೀದಿಯಲ್ಲಿದ್ದ ನಮ್ಮನ್ನು ಅನಿಲ್‌ ನೋಡಿದರು. ಅಂದಿನಿಂದ ಒಟ್ಟಿಗೆ ವಾಸಿಸುತ್ತಿದ್ದೆವು. ಶೀಘ್ರವೇ ಮದುವೆಯಾಗಲು ಕೂಡ ನಿರ್ಧರಿಸಿದ್ದೆವು. ಆತ ನನ್ನ ಮಕ್ಕಳನ್ನು ಅವರ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾಳೆ.

ಸೆಪ್ಟೆಂಬರ್‌ 14ರಂದು ದಾಬ್ರಿಯ ವಸತಿ ಪ್ರದೇಶದಲ್ಲಿ ಒಳ ಚರಂಡಿಯನ್ನು ಶುಚಿಗೊಳಿಸುವಾಗ ಉಸಿರುಗಟ್ಟಿ ಅನಿಲ್‌ ಮೃತಪಟ್ಟಿದ್ದನು. ಸುಮಾರು 20 ಅಡಿ ಆಳಕ್ಕೆ ಇಳಿದಿದ್ದ ಅನಿಲ್‌ ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗವು ತುಂಡಾಗಿ ಕೆಳಗೆ ಬಿದ್ದಿದ್ದ. ಇದರಿಂದಾಗಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದ.

ಸದ್ಯಕ್ಕೆ ಹಣ ವರ್ಗಾಯಿಸಿಲ್ಲ

ಉದಯ್‌ ಫೌಂಡೇಶನ್‌ ಸಂಸ್ಥಾಪಕ ರಾಹುಲ್‌ ವರ್ಮಾ ಪ್ರತಿಕ್ರಿಯಿಸಿ, ಕೆಟ್ಟೋ ಅವರೊಂದಿಗೆ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಸದ್ಯಕ್ಕೆ ಯಾವುದೇ ಹಣವನ್ನು ವರ್ಗಾಯಿಸಲಾಗಿಲ್ಲ. ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ ಫಲಾನುಭವಿ( ಚಿತ್ರದಲ್ಲಿದ್ದ ಹುಡುಗ)ಗೆ ಮಾತ್ರ ಹಣವನ್ನು ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾನುವಾರ ಅನಿಲ್‌ ಅಂತ್ಯ ಸಂಸ್ಕಾರದ ಸ್ಥಳಕ್ಕೆ ವರದಿಗಾರ ಹೋದಾಗ, ಮಹಿಳೆ, ಆಕೆಯ ಮೂವರು ಮಕ್ಕಳು, ನೆರೆಹೊರೆ ಮತ್ತು ಸ್ನೇಹಿತರು ಸೇರಿ ಆರು ಜನ ಮಾತ್ರ ಇದ್ದರು. ಆ ವೇಳೆ ಅನಿಲ್‌ ಪಾಲಕರು ಅಲ್ಲಿರಲಿಲ್ಲ. ಅಲ್ಲಿದ್ದ ಬಾಲಕ ಅನಿಲ್‌ ಮೃತದೇಹದ ಬಳಿ ತೆರಳಿ ಮುಖದ ಮೇಲಿದ್ದ ಬಟ್ಟೆಯನ್ನು ಸರಿ ಅತ್ಯಂತ ದುಃಖದಿಂದ ಅಪ್ಪಾ ಎಂದು ಅಳಲು ಪ್ರಾರಂಭಿಸಿದ್ದನು. ಈ ಫೋಟೊವನ್ನು ವರದಿಗಾರ ಕ್ಲಿಕ್ಕಿಸಿದ್ದ.

ಉದಯ್‌ ಫೌಂಡೇಶನ್‌, ಕೆಟ್ಟೋ ಈ ಚಿತ್ರವನ್ನು ಪ್ರಕಟಿಸಿ ಕುಟುಂಬದ ಸಹಾಯಕ್ಕಾಗಿ ಕೋರಿದ್ದರು. ಈ ಚಿತ್ರಕ್ಕೆ ಭಾರಿ ಬೆಂಬಲ ವ್ಯಕ್ತವಾಗಿ ಹಲವಾರು ಜನರು ಸ್ಪಂದಿಸಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top