Monday, 22nd October 2018  

Vijayavani

₹9 ಲಕ್ಷ ಅಡ್ವಾನ್ಸ್ ಪಡೆದಿದ್ದು ನಿಜ - ಸರ್ಜಾ ವಿರುದ್ಧ ಮೀ ಟೂ ಬಳಸಿಕೊಂಡಿಲ್ಲ - ದಿಗ್ವಿಜಯ ನ್ಯೂಸ್​ಗೆ ಚೇತನ್ ಹೇಳಿಕೆ        ಸರ್ಜಾ ವಿರುದ್ಧ ಮೀಟೂ ಆರೋಪ - ಕಿತ್ತಾಟ ಪರಿಹರಿಸಲು ಸಂಧಾನಕಾರರಾಗ್ತಾರಾ ಅಂಬಿ..?        ಅರ್ಜುನ್ ಸರ್ಜಾ ಮೀ ಟೂ ಕೇಸ್​​ಗೆ ಬಿಗ್ ಟ್ವಿಸ್ಟ್ - ಪ್ರೇಮಬರಹದಲ್ಲಿ ಚಾನ್ಸ್​ ಸಿಗದ್ದಕ್ಕೆ ರೀವೆಂಜ್ ಆರೋಪ        ಶ್ರುತಿ ವಿರುದ್ಧ ಚೇಂಬರ್​ಗೆ ದೂರು - ನಟಿ ಆರೋಪಕ್ಕೆ ಮತ್ತೆ ಗುಡುಗಿದ ನಟ ರಾಜೇಶ್        ಬೈಎಲೆಕ್ಷನ್​​ ಆಂತರಿಕ ಸಮೀಕ್ಷೆಯಲ್ಲಿ ಸೋಲಿನ ಸುಳಿವು - ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ತಂತ್ರಗಾರಿಕೆ        ಕರ್ತವ್ಯ ಬಹಿಷ್ಕರಿಸಿ ಸಿಬ್ಬಂದಿ ಪ್ರತಿಭಟನೆ - ಬೆಂಗಳೂರಿನ ಪೆನೇಷಿಯಾ ಆಸ್ಪತ್ರೆ ವಿರುದ್ಧ ಸಿಬ್ಬಂದಿ ಆಕ್ರೋಶ       
Breaking News

ಶಾಮನೂರು ಶಿವಶಂಕರಪ್ಪಗೆ ತಪ್ಪಿದ ಸಚಿವ ಸ್ಥಾನ: ರಂಭಾಪುರಿ ಶ್ರೀ ಅಸಮಾಧಾನ

Friday, 08.06.2018, 3:49 PM       No Comments

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಶ್ರೀರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಬಂದಿದೆ. ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸಹ ವಿಸ್ತರಣೆ ಮಾಡಲಾಗಿದೆ. ಶಿವಶಂಕರಪ್ಪ ಅತ್ಯಂತ ಪ್ರಬಲ, ಹಿರಿಯ ಮುಖಂಡರಾಗಿದ್ದು, ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಮತ್ತು ಡಿಸಿಎಂ ಸ್ಥಾನ ಸಿಗುತ್ತೆಂಬುದು ವೀರಶೈವ ಲಿಂಗಾಯತ ಸಮಾಜ ಆಸೆಯಾಗಿತ್ತು. ಆದರೆ ಅವರಿಗೆ ಯಾವುದೇ ಸಚಿವ ಸ್ಥಾನವನ್ನೂ ನೀಡಿಲ್ಲ. ಇದರಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ನೋವಾಗಿದೆ ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಕೇವಲ 4 ಸಚಿವ ಸ್ಥಾನ ನೀಡಲಾಗಿದೆ. ಬಹುದೊಡ್ಡ ಸಮಾಜವಾಗಿರುವುದರಿಂದ ಹತ್ತು ಸಚಿವ ಸ್ಥಾನವಾದರೂ ನೀಡಬೇಕಿತ್ತು. ಸರ್ಕಾರ ಮುಂದಿನ ದಿನಗಳಲ್ಲಿ ಉದಾಸೀನ ಮಾಡುತ್ತಾ ಹೋದರೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top