Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ, ಅದರ ಅಗತ್ಯವಿಲ್ಲ: ರೇಣುಕಾಚಾರ್ಯ

Sunday, 16.09.2018, 7:25 PM       No Comments

ದಾವಣಗೆರೆ: ಬಿಜೆಪಿ ಆಪರೇಷನ್ ಕಮಲ ಮಾಡಲ್ಲ, ಅದರ ಅವಶ್ಯಕತೆ ನಮಗಿಲ್ಲ. ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ಆಧಾರ ರಹಿತ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಈ ಬಾರಿ ಕೇವಲ 7 ಶಾಸಕರು ಬೇಕಾಗಿತ್ತು, ಆಗ ನಾವು ಆಪರೇಷನ್ ಮಾಡಬಹುದಿತ್ತು. ಹಾಗೂ ಬಿಎಸ್‌ವೈ ಸಿಎಂ ಆಗುತ್ತಿದ್ದರು. ಆದರೆ ನಾವು ಆಪರೇಷನ್ ಮಾಡಲಿಲ್ಲ. ದೇವೇಗೌಡರೇ ನೀವು ಯಾರಿಗೆ ತಾನೇ ತೊಂದರೆ ಕೊಟ್ಟಿಲ್ಲ ಹೇಳಿ? ಬಚ್ಚೇಗೌಡ. ಜೆ.ಎಚ್. ಪಾಟೀಲ್ ಸೇರಿದಂತೆ ಎಲ್ಲ ನಾಯಕರಿಗೆ ತೊಂದರೆ ಕೊಟ್ಟಿದ್ದೀರಿ ಎಂದರು.

ಬಿಎಸ್‌ವೈ ಕಲ್ಲುಬಂಡೆಯಾದರೆ, ನೀವು ಮಣ್ಣಿನ ಹುಂಡೆ. ಯಡಿಯೂರಪ್ಪ ಅವರನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಯಡಿಯೂರಪ್ಪ ಅವರ ಬಗ್ಗೆ ಹಾಗೂ ಬಿಜೆಪಿ ಬಗ್ಗೆ ಮಾತನಾಡಲೂ ನಿಮಗೆ ನೈತಿಕ ಹಕ್ಕಿಲ್ಲ. ಗೃಹ ಸಚಿವರ‌ ಬಿಜೆಪಿಯವರ 22 ಶಾಸಕರಿಗೆ ಕೋಟಿಗಟ್ಟಲೆ ಅಡ್ವಾನ್ಸ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಜನತೆಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರ ಐಸಿಯು ನಲ್ಲಿತ್ತು. ಈಗ ಶವಗಾರದಲ್ಲಿದೆ. ಹಗಲು ದರೋಡೆ, ಭೂ ಮಾಫಿಯಾ, ಸರ್ಕಾರ ಆಡಳಿತ ನಡೆಸುತ್ತಿದೆ. ಅಂತವರಿಗೆ ಕಳೆದ ಬಾರಿ ಟಿಕೇಟ್ ನೀಡಿದ್ದೀರಿ. ಪದ್ಮನಾಭನಗರದಿಂದ ವರ್ಗಾವಣೆ ದಂಧೆ ಆದೇಶ ಬರುತ್ತದೆ. ನೀವೆಲ್ಲ ಮೊಸಳೆ ಕಣ್ಣಿರು ಸುರಿಸಿ ಕಪಟ ನಾಟಕವಾಡುತ್ತೀರಿ. ನಿಮಗೆ ನೈತಿಕ ಹಕ್ಕಿದ್ದರೆ ರಾಜೀನಾಮೆ ಕೊಡಿ. ಆಂತರಿಕ ಕಚ್ಚಾಟದಿಂದ ಸರ್ಕಾರ ಪತನವಾಗುತ್ತದೆ. ಬಿಜೆಪಿಯ ಆಪರೇಷನ್ ಕಮಲದಿಂದಲ್ಲ ಎಂದರು.

Leave a Reply

Your email address will not be published. Required fields are marked *

Back To Top