Saturday, 24th February 2018  

Vijayavani

ಮತ್ತೊಂದು ಸುತ್ತಿನ ರಣಕಹಳೆಗೆ ಕೈ ಸಿದ್ಧತೆ - ಇಂದಿನಿಂದ ಮೂರುದಿನ ರಾಹುಲ್ ರಾಜ್ಯ ಪ್ರವಾಸ - ಅಧ್ಯಕ್ಷರ ಆಗಮನಕ್ಕೆ ಭರ್ಜರಿ ತಯಾರಿ        ಮೈಸೂರಲ್ಲಿ ರಂಗೇರಿದ ಎಲೆಕ್ಷನ್ ಅಖಾಡ - ಸುನಿಲ್ ಬೋಸ್ ಜತೆಗಿರುವ ಜೆಡಿಎಸ್‌ ಅಭ್ಯರ್ಥಿ ಫೋಟೋ ವೈರಲ್ - ಆರೋಪ ತಳ್ಳಿ ಹಾಕಿದ ಅಶ್ವಿನ್ ಕುಮಾರ್‌        ಉದ್ಯೋಗ ಕೊಡಿಸುವುದಾಗಿ ನೇಪಾಳದಿಂದ ಕರೆಸಿದ - ಮದುವೆಯಾಗ್ತೀನಿ ಅಂತಾ ಅತ್ಯಾಚಾರವೆಸಗಿದ - ಕಾಮ ಪಿಶಾಚಿ ಹೋಟೆಲ್‌ ಕ್ಯಾಶಿಯರ್‌ ಎಸ್ಕೇಪ್‌        ಸುಪ್ರೀಂಕೋರ್ಟ್​​ ಆದೇಶಗಾಳಿಗೆ ತೂರಿ ಬಾರ್ ಓಪನ್ ​- ಎಂಜಲು ಕಾಸಿಗಾಗಿ ನಿಯಮ ಉಲ್ಲಂಘಿಸಿದ್ರಾ ಅಧಿಕಾರಿಗಳು -ದಿಗ್ವಿಜಯ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಅಸಲಿ ಮುಖ ಬಯಲು        ಬೋಲ್‌ವೆರ್‌ ಕೊರೆಸಿದ್ದು ಒಂದ್ಕಡೆ - ನೀರು ಚಿಮ್ಮಿದ್ದು ಇನ್ನೊಂದ್ಕಡೆ - ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಕಾಶಕ್ಕೆ ಉಕ್ಕಿದ ಗಂಗೆ       
Breaking News

ರಾಜ್ಯ ಕಾಂಗ್ರೆಸ್​ ಶಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Thursday, 07.09.2017, 12:19 PM       No Comments

ದಾವಣಗೆರೆ: ಕಾಂಗ್ರೆಸ್​ ಶಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಅಭಿವೃದ್ಧಿ ಕಾಮಗಾರಿಯ ಬಿಲ್​ ನೀಡದೇ ಶಾಸಕ ಸತಾಯಿಸುತ್ತಿದ್ದಾನೆ ಎಂದೂ ತಾ.ಪಂ. ಮಾಜಿ ಅಧ್ಯಕ್ಷೆಯೊಬ್ಬರು ದೂರಿದ್ದಾರೆ.

ಶಾಸಕನ ವರ್ತನೆಯಿಂದ ಮನನೊಂದ ಶಾಂತಕುಮಾರಿ ಎಂಬುವರು ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಚಿತ್ರದುರ್ಗದ ಕೋಟೆ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

Pls download Vijayavani Android App

ದಾವಣಗೆರೆ ಜಿಲ್ಲೆ ಜಗಳೂರು ಶಾಸಕ ರಾಜೇಶ್ ವಿರುದ್ಧ ತಾ.ಪಂ ಮಾಜಿ ಅಧ್ಯಕ್ಷೆ ಶಾಂತಕುಮಾರಿ ಈ ಆರೋಪ ಮಾಡಿದ್ದಾರೆ. ಶಾಸಕರ ಪತ್ನಿ ಮೃತಪಟ್ಟ ನಂತರ ನನ್ನ ಮೇಲೆ ಕಣ್ಣು ಹಾಕಿದ್ದಾರೆ. ನಾನು ಗುತ್ತಿಗೆ ಕಾಮಗಾರಿ ನಡೆಸಿರುವ ಬಿಲ್ ಮಂಜೂರು ಮಾಡದೆ ಸತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ 20 ಲಕ್ಷ ರೂ ಗುತ್ತಿಗೆ ಕಾಮಗಾರಿ ತಡೆ ಹಿಡಿದು ಸತಾಯಿಸುತ್ತಿರುವ ಶಾಸಕರಿಗೆ ಬಿಲ್​ ಕೇಳಿದರೆ ಅಲ್ಲಿ ಬಾ ಇಲ್ಲಿ ಬಾ ಎಂದು ಕರೆಯುತ್ತಾರೆ. ಉದ್ದೇಶ ಪೂರ್ವಕವಾಗಿ ನನ್ನ ಬಿಲ್ ತಡೆಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಸಕ ರಾಜೇಶ್​ಗೆ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ವಿಶ್ವನಾಥ್ ದಲ್ಲಾಳಿ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಂತಕುಮಾರಿ ದೂರಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top