Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ಮರಕ್ಕೆ ಡಿಕ್ಕಿಯಾದ ಕಾರು: ನಿನ್ನೆಯಷ್ಟೆ ಮದುವೆಯಾಗಿದ್ದ ವರನ ಸಾವು

Monday, 02.07.2018, 7:14 PM       No Comments

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ನವವಿವಾಹಿತ ಸಾವಿಗೀಡಾಗಿರುವ ದಾರುಣ ಘಟನೆ ಜಗಳೂರು ತಾಲೂಕಿನ ಲಕ್ಕಂಪುರ ಬಳಿ ಸೋಮವಾರ ನಡೆದಿದೆ.

ಶಾಂತೇಶ್‌(28) ಮೃತ ದುರ್ದೈವಿ. ವಧುವಿನ ಮನೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದ್ದು, ವಧು ಸೇರಿ ಐವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಲ್ಲಿ 6 ಮಂದಿ ಪ್ರಯಾಣ ಮಾಡುತ್ತಿದ್ದರು.

ಶಾಂತೇಶ್‌ ಜಗಳೂರು ತಾಲೂಕಿನ ಹೊಸಕೆರೆ ನಿವಾಸಿಯಾಗಿದ್ದು, ನಿನ್ನೆಯಷ್ಟೇ ರಶ್ಮಿ ಎಂಬುವರ ಜತೆ ವಿವಾಹವಾಗಿ ನೂತನ ಬಾಳಿಗೆ ಕಾಲಿಟ್ಟಿದ್ದರು. ಕೊಡದಗುಡ್ಡದಲ್ಲಿ ಶಾಂತೇಶ್ ಹಾಗೂ ಆತನ ಸಹೋದರ ಜೋಡಿ ವಿವಾಹವಾಗಿದ್ದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top