Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ದೇವರಂಥ ಮನುಷ್ಯ!

Tuesday, 19.06.2018, 3:34 PM       No Comments

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಅಜಾತ ಶತ್ರು ಎಂದೇ ಹೆಸರಾಗಿರುವ ಮತ್ತು ಅಪರೂಪದ ಕಲಾವಿದ ಕೆ.ಎಸ್‌.ಅಶ್ವತ್ಥ್ ಅವರ ಪುತ್ರ ಶಂಕರ್‌ ಅಶ್ವತ್ಥ್‌ ಜೀವನ ನಿರ್ವಹಣೆಗಾಗಿ ಕ್ಯಾಬ್‌ ಡ್ರೈವರ್‌ ಆಗಿದ್ದದ್ದು ಇಂದಿಗೆ ಹಳೆ ಸುದ್ದಿ. ಆದರೆ, ಶಂಕರ್ ಅವರೇ ಇದೀಗ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರನ್ನು ಹೊಗಳಿದ್ದಾರೆ.

ಏನಪ್ಪಾ ಅಂದ್ರೆ… ದರ್ಶನ್​ ದೇವರಂಥಾ ಮನುಷ್ಯ ಎಂದು ಹೊಗಳಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು ಯಜಮಾನ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ತಮ್ಮ ತಂದೆ ಅಶ್ವತ್ಥ್‌ ಅವರ ಬಗ್ಗೆ ಅಂಕಣವನ್ನು ಬರೆಯುತ್ತಿರುವ ಶಂಕರ್‌ ಅಶ್ವತ್ಥ್‌, ಶ್ರೀನಿವಾಸ್ ತೂಗುದೀಪ್ ಅವರ ಆರೋಗ್ಯ ಕೆಟ್ಟಾಗ ಹೆಚ್ಚು ನೋಡಲು ಬಂದಿದ್ದು ಅಶ್ವತ್ಥ್‌ ಅವರು. ಹಾಗಾಗಿ ಈ ಋಣ ತೀರಿಸಿಕೊಳ್ಳಲು ದರ್ಶನ್ ಅವರು ಯಾರಿಗೂ ತಿಳಿಯದಂತೆ ದುಡ್ಡು ಕೊಟ್ಟು ಹೋಗಿದ್ದರು. ಯಾರಿಗೂ ಗೊತ್ತಾಗದ ಹಾಗೆ ಕಿಸೆಯಿಂದ ಹಣ ಕೊಟ್ಟು ಸದ್ದಿಲ್ಲದೆ ನಿರ್ಗಮಿಸಿದ ವ್ಯಕ್ತಿ ಬರೀ ತನ್ನ ಮನೆಯ ತೂಗುದೀಪವನ್ನು ಬೆಳಗಿಸದೆ ಇಡೀ ನಾಡಿನ ದೀಪವನ್ನು ಬೆಳಗಿಸುತ್ತಿರುವ ದರ್ಶನ ತೂಗುದೀಪ ಎಂದಿದ್ದಾರೆ.

ಇದು ತೆರೆಯ ಮೇಲೆ ಬಂದ ಪಾತ್ರವಲ್ಲ. ನೈತಿಕತೆಯ ಒಂದು ನಡವಳಿಕೆ. ಇಂತಹದ್ದನ್ನು ಯಾರೇ ಮಾಡಿದರು ಅಂತಹ ವ್ಯಕ್ತಿಯನ್ನು ದೊಡ್ಡ ವ್ಯಕ್ತಿ ಎನ್ನುತ್ತೇವೆ. ನಾವು ಇನ್ನೊಬ್ಬರ ನೋವನ್ನು ಅರಿಯುವ ಸಂಸ್ಕಾರ ಉಳ್ಳ ಸಹೃದಯಿಯನ್ನು “ದೇವರಂಥ ಮನುಷ್ಯ”” ಎಂದು ಕರೆಯಬಹುದಲ್ಲವೆ? ಎಂದು ಬರೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top