Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಇಂಡೋ-ಪಾಕ್​ ಸಂಬಂಧದ ಕುರಿತ ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ: ದಲೈಲಾಮಾ

Friday, 10.08.2018, 3:33 PM       No Comments

ಬೆಂಗಳೂರು: ನನ್ನ ಹೇಳಿಕೆ ವಿವಾದ ಸೃಷ್ಟಿಸಿದೆ. ನಾನೇದರೂ ತಪ್ಪಾಗಿ ಹೇಳಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ.

‘ಕೇಂದ್ರೀಯ ಟಿಬೆಟಿಯನ್​ ಆಡಳಿತ’ದ ವತಿಯಿಂದ ಬೆಂಗಳೂರಿನ ತಾಜ್​ ವೆಸ್ಟ್​ ಎಂಡ್​ ಹೊಟೇಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಧರ್ಮಚಕ್ರ’ ಗೌರವ ಸಮರ್ಪಣಾ ಸಮಾರಂಭ ‘Thank you Karnataka’ದ ನಂತರ ಅವರು ಮಾಧ್ಯಮಗಳಿಗೆ ಈ ರೀತಿ ಅವರು ಹೇಳಿಕೆ ನೀಡಿದ್ದಾರೆ.
ಮುಂದುವರಿದು, ಮಹಾತ್ಮ ಗಾಂಧಿಜಿಯವರು ಜಿನ್ನಾ ಅವರಿಗೆ ಪ್ರಧಾನಮಂತ್ರಿಗಿರಿ ನೀಡಲು ಇಚ್ಛೆ ಹೊಂದಿದ್ದರು. ಆದರೆ, ಪಂಡಿತ್​ ನೆಹರು ಅದನ್ನು ನಿರಾಕರಿಸಿದ್ದರು ಎಂದು ಹೇಳಿದ್ದಾರೆ.

ಭಾರತದ ಮೊದಲ ಪ್ರಧಾನಿ ಮಹಮದ್​ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು. ಆದರೆ, ಜವಾಹಾರ್​ ಲಾಲ್​ ನೆಹರು ಅದನ್ನು ನಿರಾಕರಿಸಿದ್ದಲ್ಲದೆ ತಾವೇ ಪ್ರಧಾನಿ ಹುದ್ದೆಗೇರಿದರು. ನೆಹರೂ ತಮ್ಮ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯಾಗಿದ್ದರು ಎಂದು ದಲೈ ಲಾಮಾ ಬುಧವಾರ ಹೇಳಿದ್ದರು.

ಒಂದುವೇಳೆ ಗಾಂಧೀಜಿಯವರ ಇಚ್ಛೆಯಂತೆ ಮಹಮದ್​ ಅಲಿ ಜಿನ್ನಾ ಅವರೇ ಪ್ರಧಾನಿಯಾಗಿದ್ದರೆ ಭಾರತ ಯಾವ ಕಾರಣಕ್ಕೂ ವಿಭಜನೆಯಾಗುತ್ತಿರಲಿಲ್ಲ. ಆದರೆ ಅವರ ಆಸೆ ಕೈಗೂಡಲಿಲ್ಲ ಎಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದ್ದರು.

ದಲೈ ಲಾಮಾ ಅವರ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣ್ಯ ಸ್ವಾಮಿ ಪ್ರತಿಕ್ರಿಯಿಸಿ, ದಲೈ ಲಾಮಾ ಅವರು ಈ ಹೇಳಿಕೆಯನ್ನು ಮುಂಚೆಯೇ ಹೇಳಬೇಕಿತ್ತು. ಪ್ರಸ್ತುತ ಅವರ ಹೇಳಿಕೆಗೆ ಮೌಲ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top