Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ನಿತ್ಯ ಭವಿಷ್ಯ

ಹೇಮಲಂಬ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ತಿಥಿ: ಬಿದಿಗೆ (ಬೆ. 08.49), ನಕ್ಷತ್ರ: ಶ್ರವಣಾ (ರಾ. 11.52), ಮಕರ ಮಾಸ: ಧನು 05, ಹಿಜರಿ: ರಬಿ-ಅಲ್-ಅಖಿರ್ 30, ಮಳೆನಕ್ಷತ್ರ: ಉತ್ತರಾಷಾಢ ಮೂರನೇ ಪಾದ. ರಾಹುಕಾಲ: ಮ. 01.30-03.00, ಯಮಗಂಡಕಾಲ: ಬೆ. 06.00-07.30. ಸೂರ್ಯೋದಯ: 06. 45, ಸೂರ್ಯಾಸ್ತ: 06. 09 (ಶುಕ್ರವಾರದ ಸೂರ್ಯೋದಯ: 06. 45, ಸೂರ್ಯಾಸ್ತ: 06. 09).

 


 

ಮೇಷ

ಸುಸ್ತು, ಮೈಕೈ ನೋವು, ಏನೋ ಚಿಕ್ಕದು ಎಂದು ಅಲಕ್ಷ್ಯ ಬೇಡ. ವೈದ್ಯರನ್ನು ಸಂದರ್ಶಿಸಿ. ಕ್ಷೇಮ. ಶುಭಸಂಖ್ಯೆ: 4

ವೃಷಭ

ಯಾವುದೋ ಭಯ, ಹಿಂಜರಿಕೆಗಳನ್ನು ಇಟ್ಟುಕೊಳ್ಳಬೇಡಿ. ಮುನ್ನುಗ್ಗುವ ಧೈರ್ಯದಿಂದ ಪ್ರಗತಿ. ಶುಭಸಂಖ್ಯೆ: 9

ಮಿಥುನ

ಕಾಲೆಳೆಯುವ ಮಂದಿ ಸಿಗಲಿದ್ದಾರೆ ಎಂಬುದಕ್ಕೆ ಮೈ ಪರಚಿಕೊಳ್ಳದೆ ಶಾಂತರಾಗಿರಿ. ಗೆಲುವಿದೆ. ಶುಭಸಂಖ್ಯೆ: 5

ಕಟಕ

ಬಿರುಗಾಳಿಯು ಬೀಸುವ ಲಕ್ಷಣಗಳು ಇಂದು ಹೇರಳ. ಕಾಲುಗಳನ್ನು ಗಟ್ಟಿಯಾಗಿ ಊರಿ. ನಿರಾಳತೆ ಇದೆ. ಶುಭಸಂಖ್ಯೆ: 1

ಸಿಂಹ

ನೆರೆಹೊರೆಯಲ್ಲಿ ನಿಮ್ಮ ಬಗೆಗಿನ ಗೌರವಾದರಗಳಿಗೆ ಸಾಧ್ಯತೆಗಳು ಅಧಿಕ. ಪ್ರಶಂಸೆಗಳಿಂದ ಹರ್ಷ. ಶುಭಸಂಖ್ಯೆ: 6

ಕನ್ಯಾ

ಕೇತುವು ಆತಂಕಕಾರಿಯಾಗಿದ್ದಾನೆ. ಹಣಕಾಸಿನ ಬಗೆಗೆ ಎಚ್ಚರ ಇರಲಿ. ಪರದಾಡುವ ಸ್ಥಿತಿ ದೂರ. ಶುಭಸಂಖ್ಯೆ: 8

ತುಲಾ

ನಿತ್ಯದ ಪಡಿಪಾಟಲುಗಳು ಇದ್ದಿದ್ದೇ. ನಿಮ್ಮ ಗುರಿಸಾಧನೆಗೆ ಪಡಿಪಾಟಲುಗಳ ನಡುವೆಯೇ ಸಾಫಲ್ಯವಿದೆ. ಶುಭಸಂಖ್ಯೆ: 3

ವೃಶ್ಚಿಕ

ಅನಿರೀಕ್ಷಿತವಾದ ಬೆಳವಣಿಗೆಯೊಂದರಲ್ಲಿ ಅಸಾಧ್ಯವಾದ ಸ್ನೇಹ ಕುದುರುವಂತಹ ಅಪರೂಪದ ಸಿದ್ಧಿ ಸಾಧ್ಯ. ಶುಭಸಂಖ್ಯೆ: 4

ಧನುಸ್ಸು

ನಿಮ್ಮ ಹಳೆಯ ಕಡತಗಳಲ್ಲಿನ ಅನವಶ್ಯಕ ಕಾಗದ ರಾಶಿ ಸ್ವಚ್ಛ ಮಾಡಿ. ಹೊಸ ಶಕ್ತಿಗೆ ಇದು ದಾರಿಯಾಗಲಿದೆ. ಶುಭಸಂಖ್ಯೆ: 4

ಮಕರ

ಕ್ಷೋಭೆಗಳು ಬೆನ್ನು ಹತ್ತಿವೆ ಎಂದು ಅನಿಸಿದಾಗೆಲ್ಲ ಲಕ್ಷ್ಮೀನರಸಿಂಹನನ್ನು ಸ್ತುತಿಸಿ. ಕ್ಷೇಮಕ್ಕೆ ಅವಕಾಶ. ಶುಭಸಂಖ್ಯೆ: 9

ಕುಂಭ

ಧನಲಾಭದ ಪ್ರಶ್ನೆ ಕೇಳಿಕೊಂಡರೆ ಇಂದಿನ ವರ್ತಮಾನ ಕ್ಷೇಮಕರವಲ್ಲ. ಖರ್ಚಿಗೆ ಕತ್ತರಿ ಹಾಕಿ. ಶುಭಸಂಖ್ಯೆ: 2

ಮೀನ

ಬರೇ ಬಿಸಿನೆಸ್, ಬಿಸಿನೆಸ್ ಎಂದು ಓಡಾಡದಿರಿ. ಬದುಕಿನ ಬೇರೆ ಬಗೆಯ ಮಗ್ಗಲುಗಳಿಂದ ಶಾಂತಿ ಇದೆ. ಶುಭಸಂಖ್ಯೆ: 7 
Back To Top