Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ರಾಜ್ಯ ರಾಜಕಾರಣಕ್ಕೆ ಮರಳಿದ ಡಿವಿಎಸ್​ಗೆ ನೀಡಿರುವ ಜವಾಬ್ದಾರಿ ಏನು?

Saturday, 23.09.2017, 12:40 PM       No Comments

ಬೆಂಗಳೂರು: ಕೇಂದ್ರ ಮಂತ್ರಿ ಡಿ ವಿ ಸದಾನಂದ ಗೌಡ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಕೇಂದ್ರ ಸರ್ಕಾರದ ಜವಾಬ್ದಾರಿಗಳಲ್ಲಿಯೇ ಮುಳುಗಿದ್ದ ಅವರಿಗೆ ರಾಜ್ಯ ಬಿಜೆಪಿ ಸಾಂಪ್ರದಾಯಿಕ ಪ್ರಚಾರ ತಂಡದ ನೇತೃತ್ವ ನೀಡಲಾಗಿದೆ.

ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ ಶಾ ನೀಡಿರುವ ಹೊಸ ಆದೇಶದಲ್ಲಿ 28 ಜನ ಪ್ರಮುಖರಿರುವ ಸಾಂಪ್ರದಾಯಿಕ ತಂಡದ ಪಟ್ಟಿ ಇದೆ. 2018ರ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ಕರ್ನಾಟಕದ ಬಿಜೆಪಿ ತಂಡ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲ ಬಗೆಯ ತಂತ್ರಗಳನ್ನು ಉಪಯೋಗಿಸುತ್ತಿದೆ.

ಸಾಂಪ್ರದಾಯಿಕ ಪ್ರಚಾರ ತಂಡದ ಪ್ರಮುಖರು

ಡಿ ವಿ ಸದಾನಂದ್ ಗೌಡ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಪಿ.ಸಿ.ಮೋಹನ್, ಜಿ.ಎಂ.ಸಿದ್ದೇಶ್ವರ್, ಬಿ.ಸೋಮಶೇಖರ್, ಆಯುನೂರು ಮಂಜುನಾಥ್, ಬಿ.ಜೆ.ಪುಟ್ಟಸ್ವಾಮಿ, ಕೆ.ಬಿ.ಶಾಣಪ್ಪ, ವಿ.ಸೋಮಣ್ಣ, ಅಬ್ದುಲ್ ಅಜೀಮ್, ಸೋಮಣ್ಣ ಬೇವಿನಮರದ, ಜಗದೀಶ್ ಹಿರೇಮನಿ, ಎಂ.ಜಯದೇವ, ಕುಮಾರ ಬಂಗಾರಪ್ಪ, ರೇಣುಕಾಚಾರ್ಯ, ತೇಜಸ್ವಿನಿ ರಮೇಶ್, ಶ್ರುತಿ, ಜಗ್ಗೇಶ್, ತಮ್ಮೇಶ್‌ಗೌಡ, ಬಸವರಾಜ್ ಯಂಕಂಚಿ, ರಮೇಶ್ ದೇಶಪಾಂಡೆ,ರಘುನಾಥ್ ಮಲ್ಕಾಪುರೆ (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top