Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಯುವತಿಯರ ಬಳಿ ಅಶ್ಲೀಲವಾಗಿ ಫೋನ್​ ಸಂಭಾಷಣೆ ನಡೆಸುತ್ತಿದ್ದವ ಅಂದರ್​

Thursday, 12.07.2018, 1:41 PM       No Comments

ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರ ಬಳಿ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಿದ್ದವನನ್ನು ಸೈಬರ್​ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಅನಂತ್​ ಹೆಬ್ಬಾರ್​ ಅಲಿಯಾಸ್​ ಮಹೇಶ್​ ರಾವ್​ ಬಂಧಿತ. ಈತ ತಾನು ಫೇಸ್​ಬುಕ್​ ಎಚ್​ಆರ್​ ಮ್ಯಾನೇಜರ್​ ಎಂದು ಹೇಳಿಕೊಂಡಿದ್ದ. ನೌಕರಿ ಡಾಟ್​ಕಾಂನಲ್ಲಿ ರೆಸ್ಯೂಮ್​ ಅಪ್​ಲೋಡ್​ ಮಾಡುವ ಯುವತಿಯರನ್ನು ಟಾರ್ಗೆಟ್​ ಮಾಡುತ್ತಿದ್ದ. ಒಮ್ಮೊಮ್ಮೆ ಮಹಿಳೆಯರ ಧ್ವನಿಯಲ್ಲೂ ಮಾತನಾಡುತ್ತಿದ್ದ.

ಹೀಗೆ ಮಹಿಳೆಯೋರ್ವಳ ಬಳಿ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಆಕೆ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಜತೆ ಡೇಟಿಂಗ್​ ಮಾಡಬೇಕು. ಡೇಟಿಂಗ್ ಕೂಡ ಇಂಟರ್​ವ್ಯೂದ ಒಂದು ಭಾಗ. ಇದಕ್ಕಾಗಿ ರೆಸಾರ್ಟ್​ನಲ್ಲಿ ರೂಂ ಬುಕ್​ ಮಾಡಬೇಕು ಎಂದು ಹೇಳಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇವನನ್ನು ಈ ಹಿಂದೆ 2017ರಲ್ಲಿ ಯಶವಂತಪುರ ಪೊಲೀಸರು ಬಂಧಿಸಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Back To Top