Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಸಾಬರಮತಿ ನದಿಯಲ್ಲಿ ಜಸ್ಪ್ರೀತ್​ ಬುಮ್ರಾ ಅಜ್ಜನ ಮೃತದೇಹ ಪತ್ತೆ

Sunday, 10.12.2017, 6:07 PM       No Comments

ಅಹಮದಾಬಾದ್​: ಭಾರತ ಕ್ರಿಕೆಟ್​ ತಂಡದ ಆಟಗಾರ ಜಸ್ಪ್ರೀತ್​ ಬುಮ್ರಾ ಅವರ ಅಜ್ಜ ಸಂತೋಕ್​ ಸಿಂಗ್​ ಬುಮ್ರಾ ಅವರ ಮೃತದೇಹ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ.

84 ವರ್ಷದ ಸಂತೋಕ್​ ಸಿಂಗ್​ ಬೂಮ್ರಾ ಅವರು ಶುಕ್ರವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ದೂರು ದಾಖಲಿಸಿದ್ದರು.

ಸಂತೋಕ್​ ಸಿಂಗ್​ ಅವರು ಮೊಮ್ಮಗನನ್ನು ಭೇಟಿಯಾಗಲು ಡಿ.1 ರಂದು ಅಹಮದಾಬಾದ್​ನಲ್ಲಿರುವ ತಮ್ಮ ಮಗಳ ಮನೆಗೆ ಆಗಮಿಸಿದ್ದರು. ಜಸ್ಪ್ರೀತ್​ ಹುಟ್ಟಿದ ದಿನ (ಡಿ.5) ರಂದು ಮೊಮ್ಮಗನನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತ ಪಡಿಸಿದ್ದರು. ಆದರೆ ಅಂದು ಅವರು ಜಸ್ಪ್ರೀತ್​ನನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆ ನಂತರ ಡಿ. 8 ರಂದು ಅವರು ಕಣ್ಮರೆಯಾಗಿದ್ದರು.

ಡಿ.8ರಂದು ಜಾರಖಂಡನಲ್ಲಿರುವ ತಮ್ಮ ಪುತ್ರ ಬಲವಿಂದರ್​ ಸಿಂಗ್​ಗೆ ಕರೆ ಮಾಡಿದ್ದ ಸಂತೋಕ್ ಸಿಂಗ್​, ನನ್ನ ಮೃತ ಪತ್ನಿಯನ್ನು ಭೇಟಿಯಾಗಲು ತೆರಳುತ್ತಿದ್ದೇನೆ ಎಂಬಂತಹ ವಿಚಿತ್ರ ಮಾತುಗಳನ್ನಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಜಸ್ಪ್ರೀತ್​ ಅವರ ತಾಯಿ ದಲ್ಜಿತ್​ ಕೌರ್​ ಮಗನ ಫೋನ್​ ನಂಬರ್​ ಕೊಡಲು ಕೂಡ ನಿರಾಕರಿಸಿದ್ದರು. ಜತೆಗೆ ಜಸ್ಪ್ರೀತ್​ನನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಇದರಿಂದ ಸಂತೋಕ್​ ಸಿಂಗ್​ ದುಃಖಕ್ಕೆ ಒಳಗಾಗಿದ್ದರು ಎಂದು ರಾಜಿಂದರ್​ ಎಂಬುವವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಪ್ರಕರಣದ ಕುರಿತು ದಲ್ಜಿತ್​ ಕೌರ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂತೋಕ್​ ಸಿಂಗ್​ ಅವರು ಉತ್ತರಾಖಂಡದ ಕಿಚ್ಚಾ ಎಂಬ ಗ್ರಾಮದಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದರು. ಜಸ್ಪ್ರೀತ್​ ಬುಮ್ರಾ ಸದ್ಯ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮೊದಲ ಏಕದಿನ ಪಂದ್ಯಗೋಸ್ಕರ ಧರ್ಮಶಾಲಾದಲ್ಲಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top