Monday, 11th December 2017  

Vijayavani

2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ 1. ಕೆಲವೇ ಕ್ಷಣಗಳಲ್ಲಿ ರವಿಗೆ ಮತ್ತೆ ವೈದ್ಯಕೀಯ ಪರೀಕ್ಷೆ- ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರು ಸಾಧ್ಯತೆ- ರವಿ ಮೇಲೆ ಮತ್ತೊಂದು ಕೇಸ್​​​ ಸಾಧ್ಯತೆ
Breaking News :

ಇಬ್ಬರು ಐಸಿಸ್ ಉಗ್ರರಿಗೆ 7 ವರ್ಷದ ಜೈಲು

Friday, 21.04.2017, 2:43 PM       No Comments

ನವದೆಹಲಿ: ಐಸಿಸ್ ಸಂಘಟನೆಗಾಗಿ ದೇಣಿಗೆ ಸಂಗ್ರಹಿಸಿದ ಮತ್ತು ಐಸಿಸ್​ಗೆ ಯುವಕರನ್ನು ನೇಮಕ ಮಾಡಿದ ಆರೋಪವನ್ನು ಒಪ್ಪಿಕೊಂಡ ಇಬ್ಬರು ಐಸಿಸ್ ಉಗ್ರರಿಗೆ ಎನ್​ಐಎ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE

ಜಮ್ಮು ಮತ್ತು ಕಾಶ್ಮೀರದ ಅಜರ್ ಉಲ್ ಇಸ್ಲಾಮ್ ಮತ್ತು ಮಹಾರಾಷ್ಟ್ರದ ಮೊಹಮ್ಮದ್ ಫರ್ಹಾನ್ ಶೇಖ್ ತಾವು ತಪ್ಪು ಮಾಡಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಶುಕ್ರವಾರ ಇಬ್ಬರು ಉಗ್ರರಿಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.

ಇಬ್ಬರೂ ಉಗ್ರರು ತಾವು ಮಾಡಿರುವ ಕೆಲಸಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಾಜದ ಹಿತಕ್ಕಾಗಿ ದುಡಿಯುವ ಇಚ್ಛೆ ಹೊಂದಿದ್ದೇವೆ, ಜತೆಗೆ ನಮ್ಮ ಬದುಕನ್ನು ಒಳ್ಳೆಯ ಹಾದಿಯಲ್ಲಿ ಕಟ್ಟಿಕೊಳ್ಳಬೇಕೆಂದಿದ್ದೇವೆ ಎಂದು ತಮ್ಮ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದರು. ನಾವು ಯಾವುದೇ ಒತ್ತಡಕ್ಕೆ ಒಳಗಾಗದೆ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿದ್ದೇವೆ ಎಂದೂ ತಿಳಿಸಿದ್ದರು.

ಇಬ್ಬರೂ ಉಗ್ರರನ್ನು ಕಳೆದ ವರ್ಷ ಜನವರಿ 28 ರಂದು ಅಬುದಾಭಿಯಿಂದ ಗಡಿ ಪಾರು ಮಾಡಲಾಗಿತ್ತು. ಜನವರಿ 29 ರಂದು ಭಾರತದಲ್ಲಿ ಅವರನ್ನು ಬಂಧಿಸಲಾಗಿತ್ತು. ಇವರೊಂದಿಗೆ ಬಂಧಿಸಲ್ಪಟ್ಟಿದ್ದ ಅದ್ನಾನ್ ಹಸನ್ ವಿರುದ್ಧ ಎನ್​ಐಎ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ.

– ಪಿಟಿಐ

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top