Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ನಕಲಿ ನೋಟಿಗೆ ‘ನೇಲ್​ ಪಾಲಿಶ್​’: ಸಿಸಿಬಿ ಪೊಲೀಸರನ್ನೇ ದಂಗಾಗಿಸಿತು ಖೋಟಾನೋಟಿನ ಕತೆ

Monday, 19.03.2018, 11:49 AM       No Comments

ಬೆಂಗಳೂರು: ಕಲರ್​ ಜೆರಾಕ್ಸ್​ ಮಷಿನ್​ ಜತೆ ನೇಲ್​ ಪಾಲಿಶ್​ ಇದ್ರೆ ನಕಲಿ ನೋಟು ತಯಾರಿಸಬಹುದು! ಈ ಮಾತು ಎಲ್ಲರನ್ನೂ ಕನ್​ಫ್ಯೂಸ್​ ಮಾಡಬಹುದು. ಆದರೆ, ನಕಲಿ ನೋಟು ತಯಾರಿಕೆಗೆ ನೇಲ್​ಪಾಲಿಷ್​ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಸಿಸಿಬಿ ಪೊಲೀಸರ ಬಳಿ ಸಿಕ್ಕಿಬಿದ್ದ ನಕಲಿ ನೋಟು ಸಿದ್ಧಪಡಿಸುತ್ತಿದ್ದ ಆರೋಪಿಗಳೇ ವಿವರಿಸಿದ್ದಾರೆ.

ಮೋದಿ ಸರ್ಕಾರ ಹೊಸದಾಗಿ ಪರಿಚಯಿಸಿದ 200, 50 ಹಾಗೂ 500ರೂ.ಮೌಲ್ಯದ ನಕಲಿ ನೋಟು ತಯಾರಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಆಧರಿಸಿದ ತಂಡ ಮಾ.3ರಂದು ವಿಜಯನಗರದ 5ನೇ ಮುಖ್ಯರಸ್ತೆಯಲ್ಲಿರುವ 7ನೇ ಕ್ರಾಸ್​ನ ಮನೆಯೊಂದರ ಮೇಲೆ ದಾಳಿ ಮಾಡಿತ್ತು. ಈ  ವೇಳೆ ಚೋಳರಪಾಳ್ಯದ ಉದಯಕುಮಾರ್​ ಮತ್ತು ಚೇತನ್​ ಎಂಬುವರು ಸಿಕ್ಕಿಬಿದ್ದಿದ್ದರು. ಒಟ್ಟು 1.57 ಲಕ್ಷ ರೂ.ಮೌಲ್ಯದ ಖೋಟಾನೋಟುಗಳ ಜತೆ ಕಲರ್​ ಜೆರಾಕ್ಸ್​ ಮಷಿನ್​, ವೈಟ್​ ಪೇಪರ್​ ಹಾಗೂ ನೇಲ್​ ಪಾಲಿಶ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಗಳು ನೀಡಿದ ವಿವರಣೆ ಕೇಳಿ ಪೊಲೀಸರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. 1000 ಹಾಗೂ 500ರೂ.ನೋಟು ಬ್ಯಾನ್​ ಬಳಿಕ ಮೋದಿ ಸರ್ಕಾರ ನಕಲಿ ನೋಟು ತಯಾರಿಸಲು ಸಾಧ್ಯವಾಗದಂತೆ ನೋಟಿನ ಮಧ್ಯದಲ್ಲಿ ಆರ್​ಬಿಐ ಹೆಸರನ್ನು ಹೊಳೆಯುವ ಗೆರೆಯಲ್ಲಿ ಪರಿಚಯಿಸಿತ್ತು.

ಈ ಆರೋಪಿಗಳು ನಕಲಿ ನೋಟುಗಳನ್ನು ಜೆರಾಕ್ಸ್​ ತೆಗೆಯುತ್ತಿದ್ದರು. ನಂತರ ಅದು ನಕಲಿ ಎಂದು ಗೊತ್ತಾಗದರಿಲು ನೋಟಿನ ಬಣ್ಣಕ್ಕೆ ಹೊಂದುವ ನೇಲ್​ ಪಾಲಿಶ್​ನಲ್ಲಿ ಗೆರೆ ಎಳೆಯುತ್ತಿದ್ದರು. ಇದು ನಕಲಿ ಎಂಬುದೇ ಗೊತ್ತಾಗುತ್ತಿರಲಿಲ್ಲ. ಇದೇ ಐಡಿಯಾ ಬಳಸಿ ಲಕ್ಷಾಂತರ ರೂಪಾಯಿ ಚಲಾವಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top