Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ದೇಗುಲದಲ್ಲೂ ಲಂಚಾವತಾರ

Wednesday, 18.07.2018, 3:06 AM       No Comments

| ಅಭಯ್ ಮನಗೂಳಿ ಬೆಂಗಳೂರು

ಸರ್ಕಾರಿ, ಖಾಸಗಿ ಉದ್ಯೋಗ ಸಂಸ್ಥೆಗಳ ಗೋಡೆಯೊಳಗೆ ಸೀಮಿತವಾಗಿದ್ದ ಲಂಚಾವತಾರ ದೇವರ ಸನ್ನಿಧಿಗೂ ವ್ಯಾಪಿಸಿದೆ! ವೇತನ ಬಡ್ತಿ ನೀಡಲು ಸರ್ಕಾರ ಆದೇಶ ಹೊರಡಿಸಿ 5 ತಿಂಗಳು ಕಳೆದರೂ ಮುಜರಾಯಿ ದೇಗುಲಗಳ ಸಿಬ್ಬಂದಿಗೆ ಅದೃಷ್ಟ ಕೈಗೂಡಿಲ್ಲ. ನೌಕರರು ತಲಾ 10 ಸಾವಿರ ರೂ. ಕೊಟ್ಟರಷ್ಟೇ ಆದೇಶ ಅನುಷ್ಠಾನಕ್ಕೆ ತರುವುದಾಗಿ ಅಧಿಕಾರಿಗಳು ಪಟ್ಟು ಹಿಡಿದು ಕುಳಿತಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

ರಾಜ್ಯದಲ್ಲಿ ಎ, ಬಿ ಮತ್ತು ಸಿ ಶ್ರೇಣಿಯ 36 ಸಾವಿರ ದೇವಾ ಲಯಗಳಿವೆ. ಕೋಟ್ಯಂತರ ರೂ. ಆದಾಯ ಬಂದರೂ ಇಲ್ಲಿರುವ ಸಾವಿರಾರು ಸಿಬ್ಬಂದಿ ಕನಿಷ್ಠ ವೇತನವೂ ಇಲ್ಲದೆ ಪರದಾಡುತ್ತಿದ್ದಾರೆ. ಬರುವ 8 ಸಾವಿರ ರೂ.ವೇತನದ ಜತೆಗೆ ಇನ್ನೆರಡು ಸಾವಿರ ಸೇರಿಸಿ ಲಂಚ ಕೊಡಬೇಕಾದ ಪರಿಸ್ಥಿತಿ ಇವರನ್ನು ಕಂಗಾಲಾಗಿಸಿದೆ.

ಆದೇಶವೇನು?: ದೇವಾ ಲಯದ ಸಿಬ್ಬಂದಿಗೆ ಒಮ್ಮೆ ವೇತನ ಶ್ರೇಣಿ ಮಂಜೂರು ಮಾಡಿದ ನಂತರ ದೇವಸ್ಥಾನದ ಒಟ್ಟು ಆದಾಯದ ಶೇ.35ನ್ನು ಸಿಬ್ಬಂದಿ ಸಂಬಳಕ್ಕಾಗಿಯೇ ಮೀಸಲಿರಿಸಿ ಅವಧಿಬದ್ಧ ವೇತನ ನೀಡಲಾಗುತ್ತದೆ. ಶೇ.35 ಆದಾಯ ಮೀರದ ಸಣ್ಣ ದೇವಸ್ಥಾನಗಳ ಸಿಬ್ಬಂದಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಇಲ್ಲದಂತೆ ಸರ್ಕಾರದ ವೇತನ ಶ್ರೇಣಿ, ಅವಧಿಬದ್ಧ ವೇತನ ಬಡ್ತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಧಾರ್ವಿುಕ ದತ್ತಿ ಇಲಾಖೆಯ ಆಯುಕ್ತರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಕಳೆದ ಮಾರ್ಚ್​ನಲ್ಲೇ ಆದೇಶ ಹೊರಡಿಸಿದ್ದಾರೆ.

ಅಧಿಕಾರಿ ಮೇಲೆ ಒತ್ತಡ ಏಕೆ?: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಅವರಿಗೆ ಆದೇಶವನ್ನು ಹಿಂಪಡೆಯುವಂತೆ ಮುಜರಾಯಿ ಇಲಾಖೆಯ ಮೇಲಧಿಕಾರಿಗಳು ಒತ್ತಡ ಹಾಕುತ್ತಿದ್ದು, ಈ ಬಗ್ಗೆ ವಿವಿಧ ದೇವಸ್ಥಾನಗಳ ಸಿಬ್ಬಂದಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ಎಡೆಯೂರು ಕ್ಷೇತ್ರದ ಅಧಿಕಾರಿ ಕೈಗೊಂಡಿರುವ ಕ್ರಮದಂತೆ ಇನ್ನುಳಿದ ದೇವಸ್ಥಾನಗಳ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುತ್ತಿದ್ದಾರೆ. ಇದೇ ಕಾರಣಕ್ಕೆ ಮೇಲಧಿಕಾರಿಗಳು ಒತ್ತಡ ತರುತ್ತಿದ್ದಾರೆ.

ಸಿಬ್ಬಂದಿ ಕೆಲಸವೇನು?

# ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣ ನಿರ್ವಹಣೆ

# ದೇಗುಲಗಳಿಗೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ಸೂಕ್ತ ವ್ಯವಸ್ಥೆ

# ಭಕ್ತರಿಗೆ ಯಾವುದೇ ಆಡಚಣೆ ಉಂಟಾಗದಂತೆ ನೋಡಿಕೊಳ್ಳುವುದು

# ದೇವಾಲಯದಲ್ಲಿ ಭದ್ರತೆ ಹಾಗೂ ಸ್ವಚ್ಛತೆ ಕಾಪಾಡುವುದು

ಬೊಕ್ಕಸಕ್ಕೆ ನಷ್ಟದ ನೆಪ

ಧಾರ್ವಿುಕ ದತ್ತಿ ಕಾಯ್ದೆಗೆ 2012ರಲ್ಲಿ ತಿದ್ದುಪಡಿ ತಂದಿದ್ದರಿಂದ ಸಿಬ್ಬಂದಿಯನ್ನು ಕಾಯಂಗೊಳಿಸುವುದು ಮತ್ತು ಅವಧಿಬದ್ಧ ವೇತನ ನೀಡುವುದು ಕಷ್ಟಕರವಾಗಿದೆ. ಆದರೆ ಇತ್ತೀಚಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವೂ ಈ ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟಿದೆಯಾದರೂ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದರೊಂದಿಗೆ ಕೆಲ ಅಧಿಕಾರಿಗಳು ಸ್ವಹಿತಾಸಕ್ತಿ ಕಾರಣ ದಿಂದಾಗಿ ಆದೇಶ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅವಧಿ ಬದ್ಧ ವೇತನ ಶ್ರೇಣಿ ಮಂಜೂರು ವಿಚಾರ ದಲ್ಲಿ ಅಧಿಕಾರಿಗಳು ಲಂಚ ಕೇಳುತ್ತಿರುವ ವಿಚಾರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವೇತನ ಶ್ರೇಣಿ ಮಂಜೂರಾತಿಗೆ ಸಮಿತಿ ರಚಿಸುವ ಸಂಬಂಧ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು.

| ರಾಜಶೇಖರ ಪಾಟೀಲ ಮುಜರಾಯಿ ಸಚಿವ

ಯಾರಿಗೆ ಅನ್ವಯ?

ವಾರ್ಷಿಕ 5 ಕೋಟಿ ರೂ.ಗೂ ಹೆಚ್ಚು ಆದಾಯ ಹೊಂದಿರುವ ‘ಎ’ ಶ್ರೇಣಿ ಮತ್ತು 5 ಕೋಟಿ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಬಿ ಶ್ರೇಣಿ ದೇವಸ್ಥಾನಗಳ ನೌಕರರಿಗಷ್ಟೇ ಸರ್ಕಾರದ ಈ ಆದೇಶ ಅನ್ವಯಿಸುತ್ತದೆ. ರಾಜ್ಯದಲ್ಲಿ ಕೊಲ್ಲೂರು, ಘಾಟಿ ಸುಬ್ರಹ್ಮಣ್ಯ, ಮಲೆಮಹದೇಶ್ವರ ಬೆಟ್ಟ, ಚಾಮುಂಡಿ ಬೆಟ್ಟ ಸೇರಿ ಎ ಶ್ರೇಣಿಯ 192 ಹಾಗೂ ಬಿ ಶ್ರೇಣಿಯ 151 ದೇಗುಲಗಳಿವೆ.

ಎಷ್ಟು ಸಿಬ್ಬಂದಿ ಅರ್ಹ

ಎ ಮತ್ತು ಬಿ ಶ್ರೇಣಿಯ 343 ದೇವಸ್ಥಾನಗಳಲ್ಲಿ 3500ಕ್ಕೂ ಅಧಿಕ ಸಿಬ್ಬಂದಿಯಿದ್ದಾರೆ. ಈ ಪೈಕಿ ಈಗಾಗಲೇ 1 ಸಾವಿರ ನೌಕರರನ್ನು ಕಾಯಂಗೊಳಿಸಲಾಗಿದೆ. ಹೊಸ ಆದೇಶದ ಪ್ರಕಾರ ಇನ್ನೂ 1 ಸಾವಿರಕ್ಕೂ ಅಧಿಕ ಸಿಬ್ಬಂದಿಯ ಕಾಯಂ ಹಾಗೂ ವೇತನ ಬಡ್ತಿ ನೀಡಬೇಕಾಗಿದೆ. ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಸಿಬ್ಬಂದಿ ಕಾಯಂಗೊಳ್ಳಲು ಅರ್ಹರಾಗಿದ್ದಾರೆ.

ಎಡೆಯೂರಲ್ಲಷ್ಟೇ ಜಾರಿ

ವೇತನ ಬಡ್ತಿ ಆದೇಶ ಹೊರಬಿದ್ದು 4 ತಿಂಗಳು ಕಳೆದಿದ್ದು ತುಮಕೂರಿನ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಷ್ಟೇ ಜಾರಿ ತರಲಾಗಿದೆ. ಲಂಚ ಕೊಟ್ಟರಷ್ಟೇ ಆದೇಶ ಅನುಷ್ಠಾನಕ್ಕೆ ತರುತ್ತೇವೆಂದು ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳುತ್ತಿ ದ್ದಾರೆಂದು ಸಿಬ್ಬಂದಿ ಆರೋಪಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top