Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಬುರಾರಿ ಆತ್ಮಹತ್ಯೆ ಪ್ರಕರಣ: ಮರಣಪೂರ್ವ ಮನೋವಿಶ್ಲೇಷಣೆಗೆ ಪೊಲೀಸರ ನಿರ್ಧಾರ

Friday, 06.07.2018, 6:44 PM       No Comments

ನವದೆಹಲಿ: ಬುರಾರಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸಂಬಂಧ ಕುಟುಂಬದ ಮೃತ 11 ಸದಸ್ಯರ ಮರಣಪೂರ್ವ ಮನೋವಿಶ್ಲೇಷಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಈ ದುರ್ಘಟನೆ ಕಳೆದ ಭಾನುವಾರ ನಡೆದಿತ್ತು.

ಮರಣಪೂರ್ವ ಮನೋವಿಶ್ಲೇಷಣೆಯನ್ನು ಯಾವ ವೈದ್ಯರು ಮಾಡಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.

ಮರಣಪೂರ್ವ ಮನೋವಿಶ್ಲೇಷಣೆ ಹೇಗೆ?
ವ್ಯಕ್ತಿಯೊಬ್ಬ ತಮ್ಮ ಜೀವನವನ್ನು ಏಕೆ ಕಳೆದುಕೊಂಡ ಎಂಬುದನ್ನು ವೈದ್ಯಕೀಯ ವರದಿ, ಸ್ನೇಹಿತ ಹಾಗೂ ಕುಟುಂಬದವರ ಸಂದರ್ಶನ ಹಾಗೂ ಸಂಶೋಧನೆಯ ಮೂಲಕ ಅರಿಯುವುದು ; ವ್ಯಕ್ತಿಯ ಮಾನಸಿಕ ಸ್ಥಿತಿ ಸಾಯುವ ಮುನ್ನ ಹೇಗಿತ್ತು ಎಂದು ತಿಳಿಯಲು ಮರಣಪೂರ್ವ ಮನೋವಿಶ್ಲೇಷಣೆ ಮಾಡಲಾಗುತ್ತದೆ ಎಂದು ಪರಿಣಿತರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸಿಕ್ಕಂತಹ ಕೈಬರಹ ಟಿಪ್ಪಣಿಗಳು ನೆರವಿನೊಂದಿಗೆ ಪರೀಕ್ಷೆ ಮಾಡಲಾಗುತ್ತದೆ. ಆಲದ ಮರದ ರಚನೆಯಲ್ಲಿ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವುದು ‘ಬಾದ್​ ತಪಸ್ಸು’ ಕೈಗೊಂಡಿರುವುದಾಗಿ ಸಂದೇಹವನ್ನುಂಟು ಮಾಡಿದೆ. ಮೃತರು ಮನಸ್ಸನ್ನು ಅರಿಯಲು ನಾವು ಈ ಪರೀಕ್ಷೆ ಮೂಲಕ ಪ್ರಯತ್ನಿಸುತ್ತಿರುವುದಾಗಿ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇವರನ್ನು ಸಂತೃಪ್ತಿಗೊಳಿಸಲು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಟಿಪ್ಪಣಿಯಲ್ಲಿ ಉಲ್ಲೇಖವಾಗಿದೆ. ಮೃತರ ಅಂತಿಮ ಶವಪರೀಕ್ಷೆ ವರದಿಯನ್ನು ಪೊಲೀಸರು ಎದುರು ನೋಡುತ್ತಿದ್ದಾರೆ. ಹಾಗೆಯೇ ಮೃತರ ದೇಹದಲ್ಲಿ ವಿಷಯುಕ್ತ ಅಂಶ ಇದೆಯೇ ಎಂಬುದನ್ನು ತಿಳಿಯಲು ಒಳ ಅಂಗಾಂಗಳನ್ನು ನಾವು ಪೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆತ್ಮಹತ್ಯೆಯಲ್ಲಿ ಗೀತಾ ಮಾ ಕೈವಾಡ
ಬುರಾರಿ ಆತ್ಮಹತ್ಯೆ ಪ್ರಕರಣದಲ್ಲಿ ನಿಗೂಢ ಆಚರಣೆಗಳು ಅಭ್ಯಾಸಗಾರ್ತಿ ಗೀತಾ ಮಾ ಎಂಬಾಕೆಯ ಕೈವಾಡ ಇದೆ ಎನ್ನಲಾಗಿದ್ದು, ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top