Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ಆರೆಸ್ಸೆಸ್​ ಮಹಿಳೆಯರು ಚಡ್ಡಿ ಹಾಕಿದ್ದನ್ನು ನೋಡಿದ್ದೀರಾ ಎಂದು ಕೇಳಿದ್ರಪ್ಪಾ ರಾಹುಲ್!

Tuesday, 10.10.2017, 1:23 PM       No Comments

ಅಕೋಟಾ, ಗುಜರಾತ್​: ಇದೆಂಥದ್ದು ಕಾಂಗ್ರೆಸ್ ಯುವನಾಯಕನ ಉವಾಚ! ಅದೇನೋ … ಆರೆಸ್ಸೆಸ್​ ಶಾಖಾದಲ್ಲಿ ಯಾವತ್ತಾದರೂ ಮಹಿಳೆಯರು ಚಡ್ಡಿ ಹಾಕಿಕೊಂಡಿದ್ದನ್ನು ನೋಡಿದ್ದೀರಾ ಎಂದು ಓತಪ್ರೋತವಾಗಿ ರಾಹುಲ್ ಗಾಂಧಿ ಕೇಳಿದ್ದಾರೆ.

ಬಿಜೆಪಿ/ಆರೆಸ್ಸೆಸ್​ ಮಹಿಳೆಯರ ವಿಚಾರದಲ್ಲಿ ತಾರತಮ್ಯ ಮಾಡುತ್ತದೆ ಎಂಬುದನ್ನು ನಿರೂಪಿಸಲು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಹೀಗೆ ಪ್ರಶ್ನಿಸಿದ್ದಾರಂತೆ!

ಬಿಜೆಪಿಯ ಸಂಘಟನೆ ಆರೆಸ್ಸೆಸ್ ಆಗಿದೆ. ಅದರಲ್ಲಿ ಎಷ್ಟು ಮಹಿಳೆಯರಿದ್ದಾರೆ. ಯಾವತ್ತಾದರೂ ಶಾಖಾದಲ್ಲಿ ​ ಮಹಿಳೆಯರು ಚಡ್ಡಿ ಹಾಕಿಕೊಂಡಿದ್ದನ್ನು ನೀವು ನೋಡಿದ್ದೀರಾ? ನಾನಂತೂ ನೋಡಿಲ್ಲಪ್ಪ! ಎಂದು ಗುಜರಾತಿನ ಅಕೋಟಾದಲ್ಲಿ ಇಂದು ಮಂಗಳವಾರ ರಾಹುಲ್​ ಕೇಳಿದ್ದಾರೆ.

ಅಷ್ಟಕ್ಕೂ, ಮಹಿಳೆಯರು ಮೌನವಾಗಿರಬೇಕು ಎಂದು ಬಿಜೆಪಿ ಬಯಸುತ್ತದೆ. ಮಹಿಳೆಯರು ಬಾಯಿಮುಚ್ಕೊಂಡಿರುವಷ್ಟು ಕಾಲವೂ ಬಿಜೆಪಿಗೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಆಕೆ ಬಾಯಿ ತೆರೆಯುತ್ತಿದ್ದಂತೆ ಬಿಜೆಪಿಯವರು ತಕ್ಷಣ ಒಡಿ ಹೋಗಿ ಆಕೆಯ ಬಾಯಿ ಮುಚ್ಚಿಸಿಬಿಡುತ್ತಾರೆ ಎಂದು ರಾಹುಲ್​ ತಿಳಿಸಿದ್ದಾರೆ.

ಆದರೆ ನಮ್ಮ ಕಾಂಗ್ರೆಸ್ ಹಾಗಲ್ಲ. ಅದೊಮ್ಮೆ ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುತ್ತೇವೆ ಎಂದು ಕಾಂಗ್ರೆಸ್ ಯುವನಾಯಕ ಹೇಳಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top