Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಒಂದು ದೇಶ-ಒಂದು ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಜೈರಾಮ್​ ರಮೇಶ್​

Thursday, 12.07.2018, 2:04 PM       No Comments

ಬೆಂಗಳೂರು: ಬಹು ಸಂಸ್ಕೃತಿಯುಳ್ಳ ಭಾರತದಲ್ಲಿ ‘ಒಂದು ದೇಶ-ಒಂದು ಚುನಾವಣೆ ನಡೆದರೆ, ಪ್ರಜಾಪ್ರಭುತ್ವದ ಮೂಲ‌ ಸಿದ್ಧಾಂತಕ್ಕೆ ಪೆಟ್ಟು ಬೀಳಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಜೈರಾಮ್ ರಮೇಶ್ ಆತಂಕ ವ್ಯಕ್ತಪಡಿಸಿದರು.

ಪುರಭವನದ ಸಭಾಂಗಣದಲ್ಲಿ ಸಮಂಜಸ ಆಯೋಜಿಸಿದ್ದ ‘ಏಕ ಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸ್ಥಿತಿ-ಗತಿ’ ಕುರಿತ ವಿಚಾರ ಮಂಥನ ಕಾರ್ಯ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಅನೇಕ ಭಾಷೆ, ಸಂಸ್ಕೃತಿಗಳಿವೆ. ಒಂದೊಂದು ರಾಜ್ಯ, ಒಂದು ರೀತಿಯ ರಾಜಕೀಯ ವಾತಾವರಣ ಹೊಂದಿದೆ. ಹೀಗಿರುವಾಗ, ಒಂದು ದೇಶ-ಒಂದು ಚುನಾವಣೆ ಎನ್ನುವುದರಲ್ಲಿ ಅರ್ಥವೇ ಇಲ್ಲ ಎಂದ ಅವರು, ಒಂದು ವೇಳೆ ಚುನಾವಣೆ ನಡೆದರೆ, ಬಂಡವಾಳ ಶಾಹಿಗಳ ಕೈಗೆ ಭಾರತ ತಲುಪಲಿದೆ ಎಂದು ಹೇಳಿದರು.

ಹಿಟ್ಲರ್ ನೀತಿ

ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಜಿಎಸ್​ಟಿ ಜಾರಿಗೊಳಿಸಿ, ‘ಒಂದು ದೇಶ-ಒಂದು ತೆರಿಗೆ’ ಎಂದು ಕರೆ ನೀಡಿದರು. ಆದರೆ, ಈಗ ಮತ್ತೇ ಒಂದು ದೇಶ-ಒಂದೇ ಚುನಾವಣೆ ಎನ್ನುತ್ತಿದ್ದಾರೆ. 1930 ಜರ್ಮನಿಯಲ್ಲಿ ಹಿಟ್ಲರ್, ಒಂದೇ ಸಂಸ್ಕೃತಿ, ಒಂದು ಜನಾಂಗ, ಓರ್ವ ನಾಯಕ ಎಂದು‌ ಕರೆ ನೀಡಿದ್ದ. ಇಂತಹ ನೀತಿಗಳನ್ನು ಪ್ರಧಾನಿ ನರೇಂದ್ರ ಮೋದಿ ದೇಶದೊಳಗೆ ಜಾರಿಗೊಳಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದೊಳಗೆ 2.5 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಿವೆ. ಅದೇ ರೀತಿ, ನಗರಸಭೆ, ವಿಧಾನಸಭೆಗಳಿದ್ದು, ವಿಭಿನ್ನ ಅಭಿಪ್ರಾಯ ಹೊಂದಿವೆ. ಆದರೆ, ಬಿಜೆಪಿ ಮತ್ತು ಸಂಘ ಪರಿವಾರ, ದೇಶಕ್ಕೆ ಸಮವಸ್ತ್ರ ತೊಡಿಸಲು ಮುಂದಾಗಿದ್ದು, ಇದರಿಂದ ಏಕತೆಗೆ ಧಕ್ಕೆ ಆಗಲಿದೆ ಎಂದರು.

ಕಾಂಗ್ರೆಸ್ ಎಂದೂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೋಗಲಿಲ್ಲ. ಬದಲಾಗಿ, ಸಿದ್ಧಾಂತಗಳನ್ನು ಉಳಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದ ಅವರು, ಏಕರೂಪ ನೀತಿಗಳಿಂದ ಪ್ರಾದೇಶಿಕ ರಾಜಕೀಯ ಪಕ್ಷಗಳು ನಾಶವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಕಾಂಗ್ರೆಸ್​ನ ಪ್ರೊ.ಕೆ.ಈ.ರಾಧಾಕೃಷ್ಣ, ಮುರಳಿಧರ್ ಹಾಲಪ್ಪ, ಸಮಂಜಸ ಸಲಹೆಗಾರರಾದ ನಟರಾಜ್ ಗೌಡ, ಮಂಜುನಾಥ್ ಅದ್ದೆ, ಎಸ್.ಎ.ಅಹ್ಮದ್, ಅರಣ್ ಮಲ್ನಾಡ್ ಸೇರಿ ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Back To Top