Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಜಮೀರ್ ಅಹಮ್ಮದ್ ಭವಿಷ್ಯದ ಮುಸ್ಲಿಂ ನಾಯಕ: ‘ಪರಮ’ ಹೊಗಳಿಕೆ

Thursday, 05.10.2017, 11:16 AM       No Comments

ತುಮಕೂರು: ಕಾಂಗ್ರೆಸ್​ಗೆ ಜಿಗಿಯಲು ಸಜ್ಜಾಗಿರುವ ಜೆಡಿಎಸ್​ ಬಂಡಾಯ ಶಾಸಕ ಜಮೀರ್ ಅಹಮ್ಮದ್​​ ಅವರನ್ನು ಕಾಂಗ್ರೆಸ್​ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​ ಹಾಡಿ ಹೊಗಳಿದ್ದಾರೆ.

ತುಮಕೂರಿನಲ್ಲಿ ಗುರುವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜಮೀರ್ ಅಹಮ್ಮದ್ ಅವರು ಭವಿಷ್ಯದ ಒಬ್ಬ ಮುಸ್ಲಿಂ ನಾಯಕ ಎಂದರು. ಮುಸ್ಲಿಮರ ಕಷ್ಟ, ದುಃಖಗಳಿಗೆ ಸ್ಪಂದಿಸುವ ನಾಯಕನಾಗಿದ್ದು, ಉತ್ತಮ ನಾಯಕರಾಗಿ ಹೊರಹೊಮ್ತಾರೆ ಎಂದು ಕೊಂಡಾಡಿದರು.

10 ವರ್ಷಗಳ ಹಿಂದೆ ಅವರನ್ನು ಕಾಂಗ್ರೆಸ್​ಗೆ ತರಲು ಕಷ್ಟಪಟ್ಟಿದೆ. ಜನತಾದಳದಲ್ಲಿದ್ದರೆ ಈ ಸಾಧನೆ ಮಾಡಲು ಆಗಲ್ಲ ಎಂದಿದ್ದೆ. ರಾಹುಲ್ ಗಾಂಧಿಯವರೇ ಜಮೀರ್​​ಗೆ ಸ್ವಾಗತ ಮಾಡಿದ್ದರು. ಅದರ ಫೋಟೋವನ್ನು ನನಗೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟರಮಟ್ಟಿಗೆ ಜಮೀರ್ ಅಹಮ್ಮದ್ ಬೆಳೆದಿದ್ದಾರೆ ಎಂದು ಜಮೀರ್​ ಹಾದಿಯನ್ನು ಶ್ಲಾಘಿಸಿದರು.

ಜಮೀರ್​ ಅಹಮ್ಮದ್​ ಅವರು ಡಿಸೆಂಬರ್​ನಲ್ಲಿ ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್​ ಸೇರಿದ ಬಳಿಕ ಮುಸ್ಲಿಂ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top