Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಕಾಂಗ್ರೆಸ್​ ಕಾರ್ಯಕರ್ತನ ಮನೆಯಲ್ಲಿ ಮೂಗುತಿ, ಚಿನ್ನಾಭರಣ ಪತ್ತೆ

Wednesday, 09.05.2018, 10:14 AM       No Comments

ಹಾಸನ: ಅರಕಲಗೂಡಿನ ಕಾಂಗ್ರೆಸ್​ ಕಾರ್ಯಕರ್ತ ಅರುಣ್​ಕುಮಾರ್​ ಎಂಬುವರ ಮನೆ ಮೇಲೆ ದಾಳಿ ನಡೆಸಿದ ಚುನಾವಣಾ ಫ್ಲೈಯಿಂಗ್​ ಸ್ಕ್ವಾಡ್​ ಮೂಗುತಿ, ಓಲೆ ಮತ್ತಿತರ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಅರುಣ್​ಕುಮಾರ್​ ವಾಚ್​ ಅಂಗಡಿಯ ಮಾಲೀಕರೂ ಆಗಿದ್ದಾರೆ. ಸುಮಾರು ಎರಡು ಸಾವಿರ ಮೂಗಿನ ನತ್ತುಗಳು ಪತ್ತೆಯಾಗಿದ್ದು ಸಚಿವ ಎ.ಮಂಜುಗೆ ಮತ ಹಾಕುವುದಕ್ಕೋಸ್ಕರ ಜನರಿಗೆ ಹಂಚಲು ಇಡಲಾಗಿತ್ತು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮನೆ ದಾಳಿ ಸಂದರ್ಭದಲ್ಲಿ ಜೆಡಿಎಸ್​, ಕಾಂಗ್ರೆಸ್​ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿತ್ತು. ಸ್ಥಳಕ್ಕೆ ಐಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾರಾಯಿ ವಶ

ಬಾಗಲಕೋಟೆ: ಗುಡೂರ ಗ್ರಾಮದ ಹೊರವಲಯದಲ್ಲಿ ಅಕ್ರಮ ಸಾರಾಯಿ ಪತ್ತೆಯಾಗಿದೆ. ಕಾಂಗ್ರೆಸ್​ ಮುಖಂಡ ಸಂಗಪ್ಪ ಕಿಲ್ಲೆದ ಎಂಬುವರ ಹೊಲದಲ್ಲಿ 108 ಬಾಕ್ಸ್​ಗಳು ಪತ್ತೆಯಾಗಿವೆ. ಶಾಸಕ ವಿಜಯಾನಂದ ಕಾಶಪ್ಪ ಸ್ಪರ್ಧಿಸಿರುವ ಹುನಗುಂದ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಅಕ್ರಮ ನಡೆದಿದ್ದು ಸಂಗಪ್ಪ ವಿರುದ್ಧ ದೂರು ನೀಡಲಾಗಿದೆ. ಅಮೀನಗಢ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top