Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಕಾಂಗ್ರೆಸ್​ನ ಪ್ರಚಾರದ ಹಿಂದೆ ಕುಖ್ಯಾತ ಸಂಸ್ಥೆ : ರವಿಶಂಕರ್ ಪ್ರಸಾದ್

Thursday, 22.03.2018, 5:57 PM       No Comments

<< ಇರಾಕ್​ ಸಾವಿನ ವಿವಾದ ತಣಿಸಲು ಕೇಂಬ್ರಿಜ್ ಅನಾಲಿಟಿಕಾ ಪ್ರಸ್ತಾಪ: ರಾಹುಲ್ ಗಾಂಧಿ>>

ನವದೆಹಲಿ: ಫೇಸ್​ಬುಕ್​ ದತ್ತಾಂಶ ದುರ್ಬಳಕೆ ಆರೋಪ ಹೊತ್ತಿರುವ ಕೇಂಬ್ರಿಜ್​ ಅನಾಲಿಟಿಕಾ ಸಂಸ್ಥೆಯ ನೆರವನ್ನು ಕಾಂಗ್ರೆಸ್​ ಪಕ್ಷ ಗುಜರಾತ್​ ಚುನಾವಣೆ ಸಮಯದಲ್ಲಿ ಪಡೆದುಕೊಂಡಿದೆ. ಜತೆಗೆ, ‘ಗಬ್ಬರ್​ ಸಿಂಗ್​ ಟ್ಯಾಕ್ಸ್​’, ‘ ವಿಕಾಸ್​ ಗಾನ್​ ಕ್ರೇಜಿ’ ಎನ್ನುವ ಕಾಂಗ್ರೆಸ್​ ನುಡಿಗಟ್ಟುಗಳು ಅ ಸಂಸ್ಥೆಯ ಕೊಡುಗೆಗಳೇ ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಆರೋಪಿಸಿದ್ದಾರೆ.

ಕೇಂಬ್ರಿಜ್​ ಅನಾಲಿಟಿಕಾ ಎಂಬ ಕುಖ್ಯಾತ ಬ್ರ್ಯಾಂಡಿಂಗ್​ ಸಂಸ್ಥೆಯೊಂದಿಗಿನ ರಾಜಕೀಯ ಪಕ್ಷಗಳ ಸಂಪರ್ಕದ ವಿವಾದ ಮುನ್ನಲೆಗೆ ಬಂದದ್ದು ಹೇಗೆ? ಏಕೆ? ಎಂಬುದರ ಬಗ್ಗೆ ರಾಹುಲ್​ ಗಾಂಧಿ ಅವರು ಗುರುವಾರ ಬೆಳಗ್ಗೆ ಮಾರ್ಮಿಕವಾಗಿ ಟ್ವೀಟ್​ ಮಾಡಿದ್ದರು.
“ಇರಾಕ್​ನಲ್ಲಿ ಸಂಭವಿಸಿದ್ದ 39 ಭಾರತೀಯರ ಹತ್ಯೆಯ ಸುದ್ದಿಯಿಂದ ಸರ್ಕಾರಕ್ಕೆ ಬರಬಹುದಾದ ಕೆಟ್ಟ ಹೆಸರಿನಿಂದ ತಪ್ಪಸಿಕೊಳ್ಳಲು ಮತ್ತು ಆ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಕೇಂಬ್ರಿಜ್ ಅನಾಲಿಟಿಕಾದೊಂದಿಗೆ ಕಾಂಗ್ರೆಸ್ ಅನ್ನು​ ತಳುಕು ಹಾಕಲಾಗಿದೆ,” ಎಂಬುದು ರಾಹುಲ್​ ಗಾಂಧಿ ಟ್ವೀಟ್​ನ ಸಾರವಾಗಿತ್ತು.

ರಾಹುಲ್​ ಟ್ವೀಟ್​ ಬೆನ್ನಿಗೇ ವಾಗ್ದಾಳಿ ನಡೆಸಿರುವ ರವಿಶಂಕರ್​ ಪ್ರಸಾದ್​, ‘ ರಾಹುಲ್​ ಗಾಂಧಿ ಅವರ ಸಂಪೂರ್ಣ ಚುನಾವಣಾ ಪ್ರಚಾರವನ್ನು ಕೇಂಬ್ರಿಜ್​ ಅನಾಲಿಟಿಕಾ ಸಂಸ್ಥೆಯೇ ನಿರ್ವಹಿಸುತ್ತಿದೆ. ಅವರ ನಡುವೆ ಸಭೆಗಳೂ ನಡೆದಿವೆ. ಅದರ ಪ್ರಚಾರ ವೈಖರಿ ಆಕ್ರಮಣಕಾರಿಯಾಗಿಯೂ, ಸುಳ್ಳು ಸಂಗತಿಗಳನ್ನು ಒಳಗೊಂಡಿದ್ದೂ, ಕೆಳ ದರ್ಜೆಯ ಪ್ರಚಾರವಾಗಿದೆ,” ಎಂದು ಆರೋಪಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಡೊನಾಲ್ಡ್​ ಟ್ರಂಪ್​ ಅವರ ಪರವಾಗಿ ಪ್ರಚಾರ ನಡೆಸಿರುವ ಕೇಂಬ್ರಿಜ್​ ಅನಾಲಿಟಿಕಾ ಸಂಸ್ಥೆ, ನಾಗರಿಕರ ಫೇಸ್​ಬುಕ್​ ಖಾತೆಯ ದತ್ತಾಂಶ ಕದ್ದ ಆರೋಪ ಎದುರಿಸುತ್ತಿದೆ. ಈ ಕುಖ್ಯಾತ ಸಂಸ್ಥೆಯೊಂದಿಗೆ ಭಾರತದ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಸಂಪರ್ಕ ಹೊಂದಿದ್ದ ಸಂಗತಿ ಬಯಲಾಗುತ್ತಿದ್ದಂತೆ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.

ಬ್ರ್ಯಾಂಡಿಂಗ್​ ಸಂಸ್ಥೆಗಳಾದ ಕೇಂಬ್ರಿಜ್​ ಅನಾಲಿಟಿಕಾ, ಒವ್ಲೇನೋ ಬ್ಯುಸಿನೆಸ್​ ಇಂಟಲಿಜೆನ್ಸ್​ ಸಂಸ್ಥೆಗಳು ಬಿಜೆಪಿ, ಕಾಂಗ್ರೆಸ್​ ಮತ್ತು ನಿತೀಶ್​ ಕುಮಾರ್​ ಅವರ ಜೆಡಿಯು ತಮ್ಮ ಗ್ರಾಹಕರಾಗಿದ್ದಾಗಿ ಹೇಳಿಕೊಂಡಿವೆ. 2010ರ ಬಿಹಾರ ಚುನಾವಣೆಯಲ್ಲಿ ಜೆಡಿಯು ತನ್ನ ನೆರವು ಪಡೆದಿರುವುದಾಗಿ ಕೇಂಬ್ರಿಜ್ ಅನಾಲಿಟಿಕಾ ಹೇಳಿಕೊಂಡಿದೆ. ಇನ್ನು ಬಿಜೆಪಿಯ ಸಂಪರ್ಕದ ಕುರಿತು ಮಾತನಾಡಿರುವ ರವಿಶಂಕರ್​ ಪ್ರಸಾದ್​, ” ಈ ಬಗ್ಗೆ ನಾವು ಪರಿಶೀಲನೆ ನಡೆಸಿದೆವು. ಆದರೆ, ಅದು ಸುಳ್ಳಾಗಿತ್ತು. ಫೇಸ್​ಬುಕ್​ ಅಥವಾ ಇನ್ಯಾವುದೇ ವೆಬ್​ಸೈಟ್​ಗಳಲ್ಲಿ ನಾವು ಸುಳ್ಳನ್ನು ಹರಡಿದ್ದರೆ ಆಯಾ ಸಂಸ್ಥೆಗಳು ಸತ್ಯಾಸತ್ಯತೆ ಪರಾಮರ್ಶೆ ಮಾಡಲಿ,” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top