Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ಪ್ರತಿ ಕಣ, ಕ್ಷಣ ಅಮೂಲ್ಯ

Saturday, 13.01.2018, 3:01 AM       No Comments

| ರಾಮ ಸುಬ್ರಾಯ ಶೇಟ್

ಆತನೊಬ್ಬ ಧಾನ್ಯದ ವ್ಯಾಪಾರಿ. ಅದೊಂದು ದಿನ ಗೋದಾಮಿನಿಂದ ಗೋಧಿಯ ಒಂದು ಮೂಟೆಯನ್ನು ಆಳಿನ ಹೆಗಲಮೇಲೆ ಹೊರಿಸಿ ಅಂಗಡಿಗೆ ಹೊರಟಿದ್ದ. ಮೂಟೆಯ ಸಣ್ಣರಂಧ್ರದಿಂದ ಒಂದಿಷ್ಟು ಗೋಧಿಯ ಕಾಳು ಬೀಳುತ್ತಿದ್ದವು. ಅವೆಲ್ಲ ಆರಿಸಿ ಬಟ್ಟೆಯಲ್ಲಿ ಕಟ್ಟಿಕೊಳ್ಳುತ್ತಿದ್ದಾಗ ಓರ್ವ ಗೃಹಸ್ಥ- ‘ಏನ್ ಸ್ವಾಮಿ ಇಷ್ಟು ದೊಡ್ಡ ಸಾಹುಕಾರ ನೀವು, ಒಂದು ಹತ್ತುಕಾಳು ಗೋಧಿಬಿದ್ರೆ ಚಿನ್ನಬಿದ್ದಂಗೆ ಅದನ್ನ ಹೆಕ್ತಾ ಇದ್ರಲ್ಲ’ ಅಂದ. ವ್ಯಾಪಾರಿ ನಕ್ಕು ಆತನನ್ನು ಅಂಗಡಿ ಒಳಗೆ ಕರೆದು ಕೂರಿಸಿದ. ಮರುದಿನ ತಮ್ಮ ಮನೆಯಲ್ಲಿ ಪೂಜೆಯಿದ್ದು, ಮಧ್ಯಾಹ್ನ ಊಟಕ್ಕೆ ಬರಲು ಆಹ್ವಾನಿಸಿದ. ಗೃಹಸ್ಥ ಒಪ್ಪಿ ಮರುದಿನ ವ್ಯಾಪಾರಿಯ ಮನೆಗೆ ಹೋದ. ಗೃಹಸ್ಥನನ್ನು ಸತ್ಕರಿಸಿ, ಬಂಗಾರದ ತಟ್ಟೆಯನ್ನಿಟ್ಟು ಊಟಕ್ಕೆ ಕುಳ್ಳಿರಿಸಿದ ವ್ಯಾಪಾರಿಯ ಪತ್ನಿಯು ಒಂದಿಷ್ಟು ಬಂಗಾರದ ಗೋಧಿ ಕಾಳುಗಳನ್ನು ತಟ್ಟೆಗೆ ಬಡಿಸಿದಳು. ‘ದಯಮಾಡಿ ಊಟ ಮಾಡಬೇಕು’ ಎಂದು ಕೈ ಜೋಡಿಸಿದರು. ಗೃಹಸ್ಥ ತಬ್ಬಿಬ್ಬಾದ. ‘ಏನ್ ಸಾವಕಾರ್ರೆ? ಬಂಗಾರದ ಕಾಳು ಬಡಿಸಿ ತಿನ್ನಿ ಅಂತೀರಲ್ಲ’ ಎಂದ. ಆಗ ವ್ಯಾಪಾರಿ, ‘ನಿನ್ನೆ ನೀವೇ ಅಂದಿದ್ರಲ್ಲ. ಇಷ್ಟು ದೊಡ್ಡ ಶ್ರೀಮಂತ ಮುಷ್ಟಿ ಗೋಧಿನಾ ಚಿನ್ನದಾಂಗೆ ಆರಿಸ್ತಾನೆ ಅಂತ. ಎಷ್ಟು ಸಂಪತ್ತಿದ್ರೆ ಏನ್ ಬಂತು? ಆ ರೈತ ಬೆವರು ಸುರಿಸಿ ಬೆಳೆಯಬೇಕು. ಭೂಮಾತೆ ಕೃಪೆ ಮಾಡಿ ನೀಡಬೇಕು. ಆಗ ಮಾತ್ರ ನಮ್ಮ ಬದುಕಲ್ವೆ ? ಹನಿಹನಿಹಳ್ಳ ತೆನೆ ತೆನೆ ಬಳ್ಳ ಅಲ್ವೆ ? ಅನ್ನದಾತನನ್ನು ಮರೆಯುವ ನಾವು ಮಹಾಕೃತಘ್ನರಲ್ಲವೆ ?’ ಎಂದು ಮೃಷ್ಟಾನ್ನ ಬಡಿಸಿದಾಗ ಗೃಹಸ್ಥನ ಕಣ್ಣು ತೇವಗೊಂಡವು.

ಸರ್ ಎಂ. ವಿಶ್ವೇಶ್ವರಯ್ಯನವರು ಒಂದು ಕಣವೂ ಪೋಲಾಗಬಾರದು. ಒಂದು ಕ್ಷಣವೂ ಪೋಲಾಗಬಾರದು ಎಂದಿದ್ದರು. ಡಾ| ರಾಜ್​ಕುಮಾರ್ ಒಂದಗುಳನ್ನೂ ಬಿಸಾಕಲು ಬಿಡುತ್ತಿರಲಿಲ್ಲವಂತೆ. ಆದರೆ ಸಮಾರಂಭಗಳಲ್ಲಿ ಕೆಲವು ಕಲ್ಯಾಣಮಂದಿರಗಳಲ್ಲಿ ತುಂಬ ಆಹಾರ ಬಿಸಾಕುವುದನ್ನು ಕಾಣುತ್ತೇವೆ. ಅದು ಪ್ರತಿಷ್ಠೆಗೋ ತಿರಸ್ಕಾರಕ್ಕೋ. ಸಮೀಕ್ಷೆಯಂತೆ ಪ್ರತಿದಿನ ಎಷ್ಟೋ ಟನ್ನು ಆಹಾರ ಪೋಲಾಗುತ್ತದೆಂದು ಅಂದಾಜಿಸಿದ್ದಾರೆ. ನಾವು ಹಾಳುಮಾಡುವ ಆಹಾರ ಅದೆಷ್ಟೋ ಜನರ ಹಸಿವನ್ನು ಹಿಂಗಿಸುತ್ತಿತ್ತಲ್ಲವೆ? ಅನ್ನವನ್ನು ಬ್ರಹ್ಮವೆಂದು ತಿಳಿದು ಮಣ್ಣಿನಿಂದ ದೊರೆತ ಅನ್ನ ಮಣ್ಣು ಪಾಲಾಗದಂತೆ ತಡೆಯೋಣ.

(ಲೇಖಕರು ನಿವೃತ್ತ ಉಪನ್ಯಾಸಕರು ಮತ್ತು ಗಮಕ ವ್ಯಾಖ್ಯಾನಕಾರರು)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *

Back To Top