Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಬೆಂಗಳೂರು ರಸ್ತೆ ಗುಂಡಿಗೆ ಬಿದ್ದ ಸಿಎಂ ಸಿದ್ದು, ಸಚಿವ ಜಾರ್ಜ್​

Tuesday, 17.10.2017, 3:13 PM       No Comments

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸಿರುವಂತಹುವುದು. ಸ್ಥಳೀಯ ಜನರಂತೂ ಈ ಗುಂಡಾಗುಂಡಿಗಳ ವಿರುದ್ಧ ಆಗಾಗ ಸಿಡಿದೇಳುತ್ತಲೇ ಇರುತ್ತಾರೆ.

ಇನ್ನು ಕೆಲ ಪ್ರಜ್ಞಾವಂತ ಮತ್ತು ಸಾಕ್ಷೀಪ್ರಜ್ಞೆಯ ಕಲಾವಿದರು ಆಗಾಗ ಭಿನ್ನ ವಿಭಿನ್ನ ಚಿತ್ರಗಳನ್ನು ಬಿಡಿಸಿ, ಸರಕಾರದ ನಿಷ್ಕ್ರಿಯತೆಯನ್ನು ಹರಾಜಿಗೆ ಹಾಕುವುದನ್ನು ಕಾಣಬಹುದು. ಇನ್ನು ಬಿಸಿರಕ್ತದ ಮಂದಿ ರಸ್ತೆಗಳಲ್ಲೇ ಗಿಡಗಂಟೆಗಳನ್ನು ಬೆಳೆಸುವುದು ಸಾಮಾನ್ಯವಾಗಿದೆ.

ಈ ಮಧ್ಯೆ, ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಜ್ಯ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ಚಿತ್ರವನ್ನು ದುರವಸ್ಥೆಯ ರಸ್ತೆ ಗುಂಡಿಯಲ್ಲಿ ಬಿಡಿಸಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಮನಾರ್ಹವೆಂದರೆ ಸಿದ್ದರಾಮಯ್ಯನವರಿಗೆ ಅವರ ಸಂಪುಟ ಸಹೋದ್ಯೋಗಿ, ನಗರಾಭಿವೃದ್ಧಿ ಸಚಿವ ಜಾರ್ಜ್ ಸಾಥ್​ ನೀಡಿದ್ದಾರೆ. ನಾಗರಿಕರು ಇಬ್ಬರಿಗೂ ನ್ಯಾಯ ಒದಗಿಸಿದ್ದು, ​ಇಬ್ಬರ ಚಿತ್ರಗಳನ್ನೂ ಬಿಡಿಸಿದ್ದಾರೆ.

ಅಂದಹಾಗೆ, ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಇಂತಹ ಚಿತ್ರಗಳನ್ನು ಬಿಡಿಸಿ, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವ ಭಾರತ ಪ್ರಜಾ ಸತ್ತಾತ್ಮಕ ಪಾರ್ಟಿಯಿಂದ ಈ ವಿನೂತನ ಪ್ರತಿಭಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *

Back To Top